ಕರ್ನಾಟಕ

karnataka

ETV Bharat / entertainment

Google Doodle: ಅತಿಲೋಕ ಸುಂದರಿ ಶ್ರೀದೇವಿ ಜನ್ಮದಿನ.. ಲೇಡಿ ಸೂಪರ್​ ಸ್ಟಾರ್​ ನೆನೆದ ಗೂಗಲ್​ ಡೂಡಲ್​ - etv bharat kannada

Google Doodle celebrates Bollywood actress Sridevi's 60th birthday: ಬಾಲಿವುಡ್​ ಲೇಡಿ ಸೂಪರ್​ ಸ್ಟಾರ್​ ಶ್ರೀದೇವಿ ಹುಟ್ಟಿದ ದಿನವಿಂದು. ಡೂಡಲ್​ನಲ್ಲಿ ಅತಿಲೋಕ ಸುಂದರಿಯ ಚಿತ್ರವನ್ನು ಹಂಚಿಕೊಂಡು, ಗೂಗಲ್​ ಜನ್ಮದಿನದ ಶುಭಕೋರಿದೆ.

Sridevi's 60th birthday
ಅತಿಲೋಕ ಸುಂದರಿ ಶ್ರೀದೇವಿ ಜನ್ಮದಿನ

By

Published : Aug 13, 2023, 10:08 AM IST

ಇಂದು ಬಾಲಿವುಡ್​ ನಟಿ ಶ್ರೀದೇವಿ ಹುಟ್ಟಿದ ದಿನ. ಅವರಿಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. 90ರ ದಶಕದಲ್ಲಿ ಬಣ್ಣದ ಲೋಕವನ್ನಾಳಿ ಮಿಂಚಿ ಮರೆಯಾದ ಈ ನಟಿಗೆ ಈಗಲೂ ದೊಡ್ಡ ಅಭಿಮಾನಿಗಳ ದಂಡಿದೆ. ಈ ವಿಶೇಷ ದಿನದಂದು ಫ್ಯಾನ್ಸ್ ಅವರನ್ನು ನೆನೆದು ಬೇಸರ ಪಡುತ್ತಿದ್ದಾರೆ. ಇದೀಗ ಗೂಗಲ್​ ಡೂಡಲ್​ ಕೂಡ ಲೇಡಿ ಸೂಪರ್​ ಸ್ಟಾರ್ ಶ್ರೀದೇವಿ ಅವರನ್ನು ನೆನಪಿಸಿಕೊಂಡಿದೆ.

ನೋಡಲು ದಂತದ ಗೊಂಬೆಯಂತಿದ್ದ ಶ್ರೀದೇವಿ ತಮ್ಮ ನಟನೆ, ನೃತ್ಯ, ಮಾತಿನಿಂದಲೂ ಈಗಲೂ ಅಭಿಮಾನಿಗಳ ಹೃದಯದಲ್ಲಿ ಅಜರಾಮರ. ಅವರ ಜನ್ಮದಿನವಾದ ಇಂದು ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಡೂಡಲ್​ನಲ್ಲಿ ಶ್ರೀದೇವಿ ಅವರ ಚಿತ್ರವನ್ನು ಹಂಚಿಕೊಂಡು, ಗೂಗಲ್​ ಜನ್ಮದಿನದ ಶುಭಕೋರಿದೆ. ನಟಿ ಶ್ರೀದೇವಿ ನಾಟ್ಯ ಮಾಡುವ ಮೋಹಕ ಭಂಗಿಯಲ್ಲಿ ಡೂಡಲ್​ನಲ್ಲಿ ಕಾಣಬಹುದು.

ಖುಷಿ ಕಪೂರ್ ಪೋಸ್ಟ್​

ಪತ್ನಿಯ ನೆನೆದ ಬೋನಿ ಕಪೂರ್​: ಶ್ರೀದೇವಿ ಅವರ ಪತಿ, ಚಿತ್ರ ನಿರ್ಮಾಪಕ ಬೋನಿ ಕಪೂರ್​ ಪತ್ನಿಯೊಂದಿಗಿನ ಥ್ರೋಬ್ಯಾಕ್​ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಫೋಟೋದಲ್ಲಿ ಶ್ರೀದೇವಿ ಕಪ್ಪು ಬಣ್ಣದ ಜಾಕೆಟ್​ ಮತ್ತು ತೆರೆದ ಕೂದಲಿನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಬೋನಿ ಕಪೂರ್​ ಗ್ರೇ ಜಾಕೆಟ್​ ಧರಿಸಿ, ಪತ್ನಿಯನ್ನು ಹಿಡಿದುಕೊಂಡಿದ್ದಾರೆ. ಈ ಫೋಟೋಗೆ 'ಹ್ಯಾಪಿ ಬರ್ತ್​ಡೇ' ಎಂದು ಕ್ಯಾಪ್ಶನ್​ ಬರೆದು ಹೃದಯ ಎಮೋಜಿನೊಂದಿಗೆ ಹಂಚಿಕೊಂಡಿದ್ದಾರೆ.

ಶ್ರೀದೇವಿಗೆ ಮಗಳು ಖುಷಿ ಕಪೂರ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಥ್ರೋಬ್ಯಾಕ್​ ಫೋಟೋವನ್ನು ಹಂಚಿಕೊಂಡು, ಹ್ಯಾಪಿ ಬರ್ತ್​ಡೇ ಮಮ್ಮಾ ಎಂಬ ಶೀರ್ಷಿಕೆಯೊಂದಿಗೆ ವೈಟ್​ ಹೃದಯದ ಎಮೋಜಿನೊಂದಿಗೆ ಶುಭಕೋರಿದ್ದಾರೆ. ಫೋಟೋದಲ್ಲಿ ಶ್ರೀದೇವಿ, ಜಾಹ್ನವಿ ಕಪೂರ್​ ಮತ್ತು ಖುಷಿ ಕಪೂರ್​ ಇದ್ದಾರೆ.

ಅತಿಲೋಕ ಸುಂದರಿ ಶ್ರೀದೇವಿ.. 1963 ರಲ್ಲಿ ಶ್ರೀ ಅಮ್ಮಾ ಯಂಗೇರ್ ಅಯ್ಯಪನ್ ಆಗಿ ಶ್ರೀದೇವಿ ಜನಿಸಿದರು. 13ನೇ ವಯಸ್ಸಿನಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿದ ಶ್ರೀದೇವಿ ತಮ್ಮ ನಟನೆಯಿಂದ ಎಲ್ಲರನ್ನೂ ಬೆರಗುಗೊಳಿಸಿದ್ದರು. ವೃತ್ತಿಜೀವನದಲ್ಲಿ ಹಿಂದಿ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೀದೇವಿ ಇರದಿದ್ದರೆ ಸಿನಿಮಾವನ್ನೇ ಮಾಡುವುದಿಲ್ಲ ಅನ್ನೋ ಕಾಲವೂ ಇತ್ತು. ಶರವೇಗದಲ್ಲಿ ಬೆಳೆದ ಈ ಗೊಂಬೆ ಚಿತ್ರರಂಗದ ಅನೇಕ ದಿಗ್ಗಜರೊಂದಿಗೆ ಪರದೆ ಹಂಚಿಕೊಂಡಿದ್ದಾರೆ.

ತೆಲುಗು ಮತ್ತು ತಮಿಳು ಚಿತ್ರರಂಗಕ್ಕೂ ಕಾಲಿಡುವ ಮೂಲಕ ಜನಪ್ರಿಯ ಸೌತ್​ ನಟಿಯಾಗಿಯೂ ಗುರುತಿಸಿಕೊಂಡಿದ್ದರು. 'ಚಾಂದಿನಿ', 'ಲಮ್ಹೆ', 'ಮಿಸ್ಟರ್ ಇಂಡಿಯಾ', 'ಚಲ್ಬಾಜ್', 'ನಾಗಿನ್', 'ಸದ್ಮಾ', 'ಇಂಗ್ಲಿಷ್ ವಿಂಗ್ಲಿಷ್' ಅವರು ನಟಿಸಿರುವ ಪ್ರಮುಖ ಚಿತ್ರಗಳು. ವೃತ್ತಿಜೀವನದಲ್ಲಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ.

'ಮಾಮ್' ಅವರು ಅಭಿನಯಿಸಿದ ಕೊನೆಯ ಸಿನಿಮಾ. ಈ ಚಿತ್ರದ ಉತ್ತಮ ಅಭಿನಯಕ್ಕಾಗಿ ಶ್ರೀದೇವಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. 2018 ಫೆಬ್ರವರಿ 24 ರಂದು ಸಂಬಂಧಿಯೊಬ್ಬರ ಮದುವೆಗೆ ಭಾಗವಹಿಸಲು ದುಬೈಗೆ ತೆರಳಿದ್ದ ಶ್ರೀದೇವಿ ಹೃದಯಾಘಾತದಿಂದ ಹೋಟೆಲ್​​​​​​ ಬಾತ್​ಟಬ್​​​ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಭೂಲೋಕ ಸುಂದರಿಯಾಗಿ ರಂಜಿಸಿದ ಶ್ರೀದೇವಿ ಇಂದು ಅಳಿಸಲಾಗದ ನೆನಪಷ್ಟೇ.

ಇದನ್ನೂ ಓದಿ:27ನೇ ವಿವಾಹ ವಾರ್ಷಿಕೋತ್ಸವ: ಶ್ರೀದೇವಿ ಜೊತೆಗಿನ ಸುಂದರ ಚಿತ್ರ ಹಂಚಿಕೊಂಡ ಬೋನಿ ಕಪೂರ್

ABOUT THE AUTHOR

...view details