ಕರ್ನಾಟಕ

karnataka

ETV Bharat / entertainment

ವಿನೋದ್ ಪ್ರಭಾಕರ್ ಅಭಿನಯದ 'ಲಂಕಾಸುರ'ನ ಟೈಟಲ್ ಹಾಡು​ ಬಿಡುಗಡೆ - ಭಸ್ಮಾಸುರ ಸಾಂಗ್

ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುವುದರೊಂದಿಗೆ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವ 'ಲಂಕಾಸುರ' ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.

Vinnod Prabhakar
ನಟ ವಿನೋದ್ ಪ್ರಭಾಕರ್

By

Published : Jul 31, 2022, 7:22 AM IST

ಸ್ಯಾಂಡಲ್​ವುಡ್​ನಲ್ಲಿ ಮಾಸ್ ಸಿನಿಮಾ ಇಮೇಜ್ ಹೊಂದಿರುವ ನಟ‌ ಮರಿ ಟೈಗರ್ ವಿನೋದ್ ಪ್ರಭಾಕರ್. ಇವರೀಗ ಟೈಗರ್ ಟಾಕೀಸ್ ಸಂಸ್ಥೆಯ ಮೂಲಕ 'ಲಂಕಾಸುರ' ಸಿನಿಮಾ ನಿರ್ಮಿಸುತ್ತಿದ್ದಾರೆ. ಟೀಸರ್​ನಿಂದ ಸದ್ದು ಮಾಡುತ್ತಿರುವ ಚಿತ್ರದ ಟೈಟಲ್ ಹಾಡು ಬಿಡುಗಡೆಯಾಗಿದೆ.

ನಟ ವಿನೋದ್ ಪ್ರಭಾಕರ್

ಪ್ರಮೋದ್ ಕುಮಾರ್ ಸಿನಿಮಾ ನಿರ್ದೇಶಿಸಿದ್ದು, ಗೀತರಚನೆಕಾರ ಚೇತನ್ ಕುಮಾರ್ ಬರೆದಿರುವ "ಅಣ್ಣ ಗನ್ ಹಿಡ್ದು ನಿಂತ ಅಂದ್ರೆ ಭಸ್ಮಾಸುರ, ಲಾಂಗ್ ಹಿಡ್ದು ನಡ್ಕೊಂಡು ಬಂದ್ರೆ ಲಂಕಾಸುರ.. ಲಂಕಾಸುರ ಲಂಕಾಸುರ " ಟೈಟಲ್ ಟ್ರ್ಯಾಕ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಹಾಡನ್ನು ಈಗಾಗಲೇ ಒಂದು ಮಿಲಿಯನ್​ಗೂ ಅಧಿಕ ಜನ ವೀಕ್ಷಿಸಿದ್ದಾರೆ.

ವಿಜೇತ್ ಕೃಷ್ಣ ಈ ಹಾಡು ಹಾಡಿ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಸುಜ್ಞಾನ ಅವರ ಛಾಯಾಗ್ರಹಣವಿದೆ. ಚೇತನ್ ಡಿಸೋಜ, ದೀಪು ಎಸ್.ಕುಮಾರ್ ಸಂಕಲನ ಹಾಗೂ ಮೋಹನ್ ನೃತ್ಯ ನಿರ್ದೇಶಿಸಿದ್ದಾರೆ. 'ಲಂಕಾಸುರ'ನನ್ನು ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿದ್ದಾರೆ.

ಇದನ್ನೂ ಓದಿ:ಡಾಕ್ಟರ್ ಮತ್ತು ಆ್ಯಕ್ಟರ್ ಶೈಲಿಯಲ್ಲಿ ಮಗನ ಫಸ್ಟ್ ಫೋಟೋಶೂಟ್ ಮಾಡಿಸಿದ ಸಂಜನಾ ಗಲ್ರಾನಿ

ABOUT THE AUTHOR

...view details