2022 ವಿದಾಯ ಹೇಳಲು, 2023 ಅನ್ನು ಸ್ವಾಗತಿಸಲು ಜನರು ಸಜ್ಜಾಗಿದ್ದಾರೆ. ಅನೇಕರು ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಪಾರ್ಟಿ ಮಾಡುವ ಮನಸ್ಥಿತಿಯಲ್ಲಿದ್ದಾರೆ. ಮತ್ತೆ ಹಲವರು ಸಿನಿಮಾಗಳನ್ನು ನೋಡುವ ಯೋಜನೆಯಲ್ಲಿದ್ದಾರೆ. ನೀವು ಆನಂದಿಸಬಹುದಾದ 5 ಉತ್ತಮ ಭಾರತೀಯ ಚಲನಚಿತ್ರಗಳ ಪಟ್ಟಿ ಇಲ್ಲಿದೆ.
ಕಾಲಾ (Qala): ಅನ್ವಿತಾ ದತ್ ನಿರ್ದೇಶಿಸಿರುವ ಇರ್ಫಾನ್ ಖಾನ್ ಅವರ ಮಗ ಬಾಬಿಲ್ ಖಾನ್ ಅವರ ಬಾಲಿವುಡ್ ಚೊಚ್ಚಲ ಚಿತ್ರ. ತ್ರಿಪ್ತಿ ಡಿಮ್ರಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 1930 - 1940ರ ದಶಕದ ಯುವ ಹಿನ್ನೆಲೆ ಗಾಯಕರ ಕಥೆಯಾಗಿದೆ. ಈ ಚಿತ್ರವು ಪ್ರಸ್ತುತ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಸೀತಾ ರಾಮನ್:ಹನು ರಾಘವಪುದಿ ನಿರ್ದೇಶನದ ಈ ರೊಮ್ಯಾಂಟಿಕ್ ಡ್ರಾಮಾದಲ್ಲಿ ದುಲ್ಕರ್ ಸಲ್ಮಾನ್, ರಶ್ಮಿಕಾ ಮಂದಣ್ಣ ಮತ್ತು ಮೃಣಾಲ್ ಠಾಕೂರ್ ನಟಿಸಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಸೀತಾ ಮಹಾಲಕ್ಷ್ಮಿಯ ಮೇಲಿನ ತನ್ನ ಪ್ರೀತಿಯನ್ನು ಹೇಳಿಕೊಳ್ಳುವ ಸಲುವಾಗಿ ಲೆಫ್ಟಿನೆಂಟ್ ರಾಮ್ ಅವರ ಪ್ರಯಾಣವನ್ನು ಈ ಚಲನಚಿತ್ರವು ಗುರುತಿಸುತ್ತದೆ. ಅವರು ಸೀತಾ ಮಹಾಲಕ್ಷ್ಮಿ ಅವರಿಂದ ಪ್ರೇಮ ಪತ್ರಗಳನ್ನು ಸ್ವೀಕರಿಸಲು ಪ್ರಾರಂಭಿಸಿದಾಗ ಅವರ ಪ್ರೀತಿ ಬೆಳೆಯುತ್ತದೆ.
ಕೊನೆಗೆ ರಾಮ್ ಸೆರೆಯಾಗಿ ಸಾವನ್ನಪ್ಪುತ್ತಾರೆ. ರಾಮ್ಗಾಗಿ ಸೀತಾ ಬಹು ವರ್ಷಗಳ ಕಾಲ ಕಾದು ಕುಳಿತಿರುತ್ತಾರೆ. ರಾಮ್ ಸಾವಿನ ವಿಚಾರವನ್ನು ಸೀತಾರಿಗೆ ತಲುಪಿಸುವ ಕಾರ್ಯವನ್ನು ರಶ್ಮಿಕಾ ಮಾಡುತ್ತಾರೆ. ಈ ಚಿತ್ರ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರವು ಪ್ರಸ್ತುತ OTT ಪ್ಲಾಟ್‌ಫಾರ್ಮ್‌ಗಳಾದ ಡಿಸ್ನಿ + ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ.
ಗುಡ್ ಬೈ: ವಿಕಾಸ್ ಬಹ್ಲ್ ನಿರ್ದೇಶನದ ಈ ಗುಡ್ ಬೈ ಭಾವನಾತ್ಮಕ ಕೌಟುಂಬಿಕ ನಾಟಕವಾಗಿದೆ. ನಟಿ ರಶ್ಮಿಕಾ ಮಂದಣ್ಣ, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಪಾವೈಲ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಏರಿಳಿತಗಳೊಂದಿಗೆ ವ್ಯವಹರಿಸುವ ಪ್ರತಿಯೊಂದು ಕುಟುಂಬದ ಅವ್ಯವಸ್ಥೆಯನ್ನು ಚಿತ್ರವು ಚಿತ್ರಿಸುತ್ತದೆ. ಪರಸ್ಪರರ ಮಹತ್ವವನ್ನು ನಿಧಾನವಾಗಿ ನೆನಪಿಸುತ್ತದೆ. ಈ ವರ್ಷದ ಬಾಲಿವುಡ್ನ ಬಹುನಿರೀಕ್ಷಿತ ಚಿತ್ರವಾಗಿತ್ತು. ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತಾದರೂ ಬಾಕ್ಸ್ ಆಫೀಸ್ನಲ್ಲಿ ಹಿಂದೆ ಸರಿಯಿತು. ಪ್ರಸ್ತುತ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.