ಕರ್ನಾಟಕ

karnataka

ETV Bharat / entertainment

ಕ್ರಿಕೆಟ್ ಆಟಗಾರನಾಗಿ ಗೋಲ್ಡನ್​ ಸ್ಟಾರ್​ ಗಣೇಶ್.. ಬಾನ ದಾರಿಯಲ್ಲಿ ಚಿತ್ರೀಕರಣ - bana dariyalli shooting in Africa

ಬಾನ ದಾರಿಯಲ್ಲಿ ಚಿತ್ರೀಕರಣ ಮಂಗಳೂರಿನಲ್ಲಿ ನಡೆದಿದ್ದು, ಮುಂದಿನ ಹಂತದ ಶೂಟಿಂಗ್ ಆಫ್ರಿಕಾದಲ್ಲಿ ನಡೆಯಲಿದೆ.

bana dariyalli shooting in Africa
ಬಾನ ದಾರಿಯಲ್ಲಿ ಚಿತ್ರೀಕರಣ

By

Published : Sep 13, 2022, 1:36 PM IST

ಕನ್ನಡ ಚಿತ್ರರಂಗದಲ್ಲಿ 'ಮಳೆಯಲಿ ಜೊತೆಯಲಿ' ಹಾಗೂ 'ದಿಲ್ ರಂಗೀಲಾ' ಸಿನಿಮಾಗಳ ಮೂಲಕ ಹಿಟ್ ಜೋಡಿ ಎಂದು ಕರೆಸಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಅವರ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಬಾನ ದಾರಿಯಲ್ಲಿ ಸಿನಿಮಾ ಚಿತ್ರೀಕರಣ ಸದ್ದಿಲ್ಲದೇ ನಡೆಯುತ್ತಿದೆ.

ಸ್ಪೋರ್ಟ್ಸ್ ಜಾನರ್​ನ ಈ ಚಿತ್ರದಲ್ಲಿ ಗಣೇಶ್ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ರುಕ್ಮಿಣಿ ವಸಂತ್ ಈಜುಗಾರ್ತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರೀಷ್ಮಾ ನಾಣಯ್ಯ, ರಂಗಾಯಣ ರಘು ಹೀಗೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

ರುಕ್ಮಿಣಿ ವಸಂತ್ - ಗಣೇಶ್

ಮಂಗಳೂರಿನಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ವಾಟರ್‌ ಗೇಮ್ಸ್ ಸೇರಿದಂತೆ ಕೆಲವು ಭಾಗದ ಚಿತ್ರೀಕರಣ ನಾಯಕ ಗಣೇಶ್, ನಾಯಕಿ ರುಕ್ಮಿಣಿ ವಸಂತ್ ಸೇರಿ ಮುಂತಾದವರ ಅಭಿನಯದಲ್ಲಿ ಮಂಗಳೂರಿನಲ್ಲಿ ನಡೆದಿದೆ. ಮೂರನೇ ಹಂತದ ಚಿತ್ರೀಕರಣ ಆಫ್ರಿಕಾದಲ್ಲಿ ನಡೆಯಲಿದ್ದು, ಸದ್ಯದಲ್ಲೇ ಚಿತ್ರತಂಡ ಆಫ್ರಿಕಾಗೆ ಪ್ರಯಾಣ ಬೆಳಸಲಿದೆ.

ಇದನ್ನೂ ಓದಿ:ಸಚಿನ್ ಧನ್​ಪಾಲ್​-ಅದಿತಿ ಪ್ರಭುದೇವ ಅಭಿನಯದ ಚಾಂಪಿಯನ್​ ಟ್ರೈಲರ್ ಬಿಡುಗಡೆ

ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದ ಕಥೆ ಪ್ರೀತಾ ಜಯರಾಂ ಅವರದ್ದು. ಮಾಸ್ತಿ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ.

ABOUT THE AUTHOR

...view details