ರೋಮ್: 1950 ಮತ್ತು 1960ರ ದಶಕದಲ್ಲಿ ತಮ್ಮ ಮಾದಕ ಮೈಮಾಟದ ಮೂಲಕವೇ ಖ್ಯಾತಿ ಗಳಿಸಿದವರು ಇಟಾಲಿಯನ್ ನಟಿ ಗಿನಾ ಲೊಲೋ ಬ್ರಿಗಿಡಾ. ಇದೀಗ ತಮ್ಮ 95ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸಿನಿಮಾ, ಸಿನಿಮೇತರ ಸುದ್ದಿಗಳಿಂದಲೂ ಇವರು ಸಾಕಷ್ಟು ಸುದ್ದಿಯಲ್ಲಿ ಇರುತ್ತಿದ್ದರು. ಇವರನ್ನು ಜಗತ್ತಿನ ಅತ್ಯಂತ ಸುಂದರ ಮಹಿಳೆ ಎಂದೂ ಬಣ್ಣಿಸಲಾಗಿತ್ತು.
ಗಿನಾಗೂ ಭಾರತಕ್ಕೂ ಇದೆ ಸಂಬಂಧ:20ನೇ ಶತಮಾನದಲ್ಲಿ ಮೋನಾಲಿಸಾನಂತಹ ಜಗತ್ತಿನ ಸುಂದರ ಮಹಿಳೆಯೆಂದು ಕರೆಯಲಾದ ಗಿನಾ ಲೊಲೋ ಬ್ರಿಗಿಡಾ ಅವರನ್ನು ಲಾ ಲೊಲೊ ಎಂಬ ನಿಕ್ ನೇಮ್ನಿಂದಲೂ ಕರೆಯಲಾಗುತ್ತಿತ್ತು. ಇದೇ ಹೆಸರನ್ನು ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಕೂಡ ಅಳವಡಿಸಿಕೊಂಡಿದ್ದರು. ಗಿನಾ ಅವರ ಅತ್ಯಂತ ಪ್ರಖ್ಯಾತ ಸಿನಿಮಾವಾದ 1961ರಲ್ಲಿ ಕಂ ಸೆಪ್ಟೆಂಬರ್ ಭಾರತೀಯರ ಮೆಚ್ಚುಗೆ ಗಳಿಸಿತ್ತು. ಇಂದಿಗೂ ಈ ಚಿತ್ರದ ಹಾಡುಗಳನ್ನು ಮದುವೆಗಳನ್ನು ಕೇಳಬಹುದು. ಅಂತಾರಾಷ್ಟ್ರೀಯ ಹಿಟ್ ನೀಡುವ ಮೂಲಕ ಅವರು ಬಾಲಿವುಡ್ನ ಭಾಗವಾಗಿದ್ದರು. 1977ರಲ್ಲಿ ಕೃಷ್ಣಾ ಶಾ ಅವರ ಶಾಲಿಮಾರ್ ಚಿತ್ರದ ಪ್ರಮುಖ ಪಾತ್ರಕ್ಕೆ ಗಿನಾ ಹೆಸರು ಕೇಳಿ ಬಂದಿತ್ತು. ಆದರೆ, ಬಾಂಬೆ ಟರ್ಫ್ ಕ್ಲಬ್ನಲ್ಲಿ ನಡೆದ ಮುಹೂರ್ತದ ವೇಳೆ ಹೆಚ್ಚು ಧೈರ್ಯ ಪ್ರದರ್ಶಿಸಿದ ಜೀನತ್ ಅಮಾನ್ ಕಾಣಿಸಿಕೊಂಡ ಬಳಿಕ ಇವರು ಚಿತ್ರದಿಂದ ಹೊರನಡೆದಿದ್ದರು.
ಗಿನಾ ಅದ್ಭುತ ಪ್ರದರ್ಶನಗಳು:ತಮ್ಮ ಸಮಕಾಲೀನ ನಟಿಯರಾದ ಸೋಫಿಯಾ ಲೊರೆನ್ ಅಥವಾ ಇತರರಿಗಿಂತ ಗಿನಾ ಉತ್ತಮ ಪಾತ್ರಗಳಿಂದ ಗಮನ ಸೆಳೆಯಲಿಲ್ಲ. ಐದು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ಕೇವಲ 70 ಚಿತ್ರಗಳಲ್ಲಿ ಇವರು ಬಣ್ಣ ಹಚ್ಚಿದ್ದರು. ಈ ಪೈಕಿ ರಾಕ್ ಹುಡ್ಸನ್ ಅವರೊಟ್ಟಿಗಿನ ಕಂ ಸೆಪ್ಟೆಂಬರ್, ಸೊಲೊಮಾನ್ ಮತ್ತು ಶೆಬಾ ಅತ್ಯುತ್ತಮ ಸಿನಿಮಾಗಳಾಗಿದ್ದವು. ಶೆಬಾ ಚಿತ್ರದ ಬಳಿಕ ಅವರ ಪ್ರಸಿದ್ಧ ವೇಶ್ಯೆಯ ಪಾತ್ರದಿಂದ ತೊಂದರೆಗೆ ಒಳಗಾದರು. ಇಂತಹ ಪಾತ್ರಗಳು ಪ್ರತಿಕೂಲ ಪರಿಣಾ ಬೀರುತ್ತವೆ ಎಂದು ಗಿನಾ ತಿಳಿಸಿದ್ದರು.
ಮಿಸ್ ಇಟಾಲಿಯನ್ ರನ್ನರ್ ಅಪ್:1927ರಲ್ಲಿ ಜುಲೈ 4ರಂದು ರೋಮ್ನ ಸುಬಿಕೊ ಬಳಿಕ ಗ್ರಾಮವೊಂದರಲ್ಲಿ ಗಿನಾ ಜನಿಸಿದ್ದರು. ನಾಲ್ಕು ಹೆಣ್ಣು ಮಕ್ಕಳಲ್ಲಿ ಎರಡನೇಯವರು ಗಿನಾ ಲೊಲೊ ಬ್ರಿಗಿಡಾ. 1945ರಲ್ಲಿ ಇಟಾಲಿಯನ್ ನಾಟಕಗಳಲ್ಲಿ ಸಣ್ಣ ಕಾಮಿಡಿ ಪಾತ್ರಗಳ ಮೂಲಕ ನಟನೆ ಆರಂಭಿಸಿದ್ದರು. 1947ರಲ್ಲಿ ಮಿಸ್ ಇಟಾಲಿಯನ್ ಸ್ಪರ್ಧೆಯ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು.