ಕರ್ನಾಟಕ

karnataka

ETV Bharat / entertainment

Shiva Rajkumar : ಶಿವರಾಜ್‌ ಕುಮಾರ್‌ ಅಭಿನಯದ 'ಘೋಸ್ಟ್' ಶೂಟಿಂಗ್ ಕಂಪ್ಲಿಟ್​ - ಈಟಿವಿ ಭಾರತ್​ ಕನ್ನಡ ನ್ಯೂಸ್

Ghost Movie: ಘೋಸ್ಟ್ ಚಿತ್ರದಲ್ಲಿ ನಿರ್ದೇಶಕ ಶ್ರೀನಿ ವಿಶೇಷ ಪಾತ್ರದಲ್ಲಿ ಕಾಣಿಕೊಂಡಿದ್ದಾರೆ. ಇದೀಗ ಚಿತ್ರೀಕರಣ ಮುಗಿದಿದೆ.

ಘೋಸ್ಟ್
ಘೋಸ್ಟ್

By

Published : Aug 11, 2023, 9:08 AM IST

'ಘೋಸ್ಟ್' ತನ್ನ ಶೀರ್ಷಿಕೆಯಿಂದಾಗಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡಿರುವ ಕನ್ನಡದ ಮತ್ತೊಂದು ಫ್ಯಾನ್​ ಇಂಡಿಯಾ ಚಿತ್ರ. ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿರುವ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರಿನಲ್ಲಿ ಮುಕ್ತಾಯವಾಗಿತ್ತು. ಚಿತ್ರದ ಇನ್ನೊಂದು ವಿಶೇಷತೆ, ನಿರ್ದೇಶಕ ಶ್ರೀನಿ 'ಬೀರ್ ಬಲ್' ಪಾತ್ರದಲ್ಲಿ ಕಾಣಿಸಿಕೊಂಡಿವುದು.

ಈ ಹಿಂದೆಯೂ ಕೂಡ ಶ್ರೀನಿ 'ಬೀರ್ ಬಲ್' ಚಿತ್ರದಲ್ಲಿ ಅಭಿನಯಿಸಿದ್ದರು. ಮತ್ತೆ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಬೀರ್ ಬಲ್' ಭಾಗ 2 ಬರಬಹುದಾ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದೆ. ಈಗಾಗಲೇ ಘೋಸ್ಟ್ ಫಸ್ಟ್ ಲುಕ್ 'BIG DADDY' ಟೀಸರ್ ಮಿಲಿಯನ್ ವೀಕ್ಷಣೆ ಪಡೆದಿದೆ. ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತುರ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ :Shiva Rajkumar:''ನೀವ್ ಗನ್​ನಲ್ಲಿ ಹೆದರಿಸಿದ್ರೆ, ನಾನ್ ಬರೀ ಕಣ್ಣಲ್ಲೇ...ಒರಿಜಿನಲ್​ ಗ್ಯಾಂಗ್​ಸ್ಟರ್''

ಶಿವ ರಾಜ್‌ಕುಮಾರ್‌ ಲುಕ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್.ನಿರ್ಮಾಣದ ಜೊತೆಗೆ ಮಹೇಂದ್ರ ಸಿಂಹ ಕ್ಯಾಮರಾ ವರ್ಕ್, ಅರ್ಜುನ್ ಜನ್ಯ ಸಂಗೀತವಿದೆ. ಸಂಭಾಷಣೆ ಕೆಲಸವನ್ನು ಮಾಸ್ತಿ, ಪ್ರಸನ್ನ ನಿರ್ವಹಿಸಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಚಿತ್ರ ದಸರಾ ವೇಳೆಗೆ ಬಿಡುಗಡೆ ಆಗುತ್ತಿದೆ.

'BIG DADDY' ಸ್ಪೆಷಲ್​ ವಿಡಿಯೋ: ಜುಲೈ 12ರಂದು ಶಿವಣ್ಣನ ಜನ್ಮದಿನದ ಹಿನ್ನೆಲೆಯಲ್ಲಿ ಚಿತ್ರತಂಡ 'BIG DADDY' ಎಂಬ ಸ್ಪೆಷಲ್​ ವಿಡಿಯೋ ಅನಾವರಣಗೊಳಿಸಿತ್ತು. ಆ್ಯಕ್ಷನ್​ ಸೀನ್​ನಲ್ಲಿ ಸ್ಟೈಲಿಶ್​ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆ, ದೃಶ್ಯ, ನಟನ ಡೈಲಾಗ್ಸ್​ ವಿಭಿನ್ನವಾಗಿ ಮೂಡಿಬಂದಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಶ್ರೀನಿವಾಸ ಕಲ್ಯಾಣ', 'ಓಲ್ಡ್ ಮಾಂಕ್' ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಶ್ರೀನಿ 'ಘೋಸ್ಟ್​' ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಇದನ್ನೂ ಓದಿ :ಅಭಿಮಾನಿಗಳೇ ಕೇಳಿ, ಮೂಡಿಬರಲಿದೆ 'ಘೋಸ್ಟ್ 2': ಹ್ಯಾಟ್ರಿಕ್​ ಹೀರೋ ಮುಂದಿನ ಸಿನಿಮಾಗಳು ಹೀಗಿವೆ

ABOUT THE AUTHOR

...view details