ಕರ್ನಾಟಕ

karnataka

ETV Bharat / entertainment

'ಘೋಸ್ಟ್' ಅಬ್ಬರ ಶುರು: ಚಿತ್ರಮಂದಿರಗಳತ್ತ ಮುಗಿಬಿದ್ದ ಸಿನಿಪ್ರಿಯರು-ಫ್ಯಾನ್ಸ್ ಸೆಲೆಬ್ರೇಶನ್​ ವಿಡಿಯೋ ನೋಡಿ

Ghost movie: ಬಹುನಿರೀಕ್ಷಿತ ಘೋಸ್ಟ್ ಸಿನಿಮಾ ತೆರೆಕಂಡಿದ್ದು, ಇಂಟರ್​ನೆಟ್​ನಲ್ಲಿ ಫ್ಯಾನ್ಸ್ ಸೆಲೆಬ್ರೇಶನ್​ ವಿಡಿಯೋ ವೈರಲ್​ ಆಗಿದೆ.

Ghost movie
ಘೋಸ್ಟ್ ಸಿನಿಮಾ

By ETV Bharat Karnataka Team

Published : Oct 19, 2023, 9:28 AM IST

Updated : Oct 19, 2023, 10:04 AM IST

'ಘೋಸ್ಟ್' ಅಬ್ಬರ ಶುರು: ಚಿತ್ರಮಂದಿರಗಳತ್ತ ಮುಗಿಬಿದ್ದ ಸಿನಿಪ್ರಿಯರು-ಫ್ಯಾನ್ಸ್ ಸೆಲೆಬ್ರೇಶನ್

ಟೈಟಲ್​, ಕಾಸ್ಟ್, ಟ್ರೇಲರ್​​ನಿಂದಲೇ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಸದ್ದು ಮಾಡಿದ್ದ ಘೋಸ್ಟ್ ಇಂದು ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಅಭಿಮಾನಿಗಳ ಕಾಯುವಿಕೆ ಕೊನೆಗೂ ಮುಕ್ತಾಯವಾಗಿದೆ. ಕರುನಾಡ ಚಕ್ರವರ್ತಿ ಶಿವರಾಜ್​​ಕುಮಾರ್​ ಅವರನ್ನು ಒರಿಜಿನಲ್ ಗ್ಯಾಂಗ್​ಸ್ಟರ್ ಅವತಾರದಲ್ಲಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.

ಒರಿಜಿನಲ್ ಗ್ಯಾಂಗ್​ಸ್ಟರ್ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ:ದಕ್ಷಿಣ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಾದ ಘೋಸ್ಟ್ ಹಾಗೂ ಲಿಯೋ ಇಂದು ಒಟ್ಟಿಗೆ ತೆರೆಗಪ್ಪಳಿಸಿವೆ. ನಿರ್ದೇಶಕ ಶ್ರೀನಿ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ಕಾಂಬಿನೇಶನ್​ನ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ 'ಘೋಸ್ಟ್' ಅನ್ನು ಚಿತ್ರಮಂದಿರಗಳಲ್ಲಿ ಸಿನಿಪ್ರಿಯರು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಚಿತ್ರಮಂದಿರಗಳತ್ತ ಸಿನಿಪ್ರಿಯರು ಮುಗಿಬಿದ್ದಿದ್ದು, ಫ್ಯಾನ್ಸ್ ಸೆಲೆಬ್ರೇಶನ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚನಂತೆ ವೈರಲ್​ ಆಗಿದೆ.

300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಘೋಸ್ಟ್' ಅಬ್ಬರ:ರಾಜ್ಯದ 300ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ 'ಘೋಸ್ಟ್' ಅಬ್ಬರ ಶುರುವಾಗಿದೆ. ಮೆಜೆಸ್ಟಿಕ್ ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ರಾತ್ರಿ 12 ಗಂಟೆಗೆ ಅಭಿಮಾನಿಗಳಿಗೆ ಸ್ಪೆಷಲ್ ಶೋ ಹಮ್ಮಿಕೊಳ್ಳಲಾಗಿತ್ತು. ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಾಗರ ಹರಿದುಬಂದಿತ್ತು.

ಫ್ಯಾನ್ಸ್ ಸೆಲೆಬ್ರೇಶನ್​ ವಿಡಿಯೋ: ರಾತ್ರಿ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ನೂಕು ನುಗ್ಗಲು ಎದುರಿಸಿದ್ದರು. 1,200 ಆಸನ ಸಾಮರ್ಥ್ಯದ ಚಿತ್ರಮಂದಿರದಲ್ಲಿ ಸುಮಾರು 3,000 ಜನರು ಆಗಮಿಸಿದ್ದರು. ಹ್ಯಾಟ್ರಿಕ್ ಹೀರೋನನ್ನು ಗ್ಯಾಂಗ್​​ಸ್ಟರ್ ಅವತಾರದಲ್ಲಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದು, ಅಭಿಮಾನಿಗಳ ಸೆಲೆಬ್ರೇಶನ್ ವಿಡಿಯೋ ಆನ್​ಲೈನ್​ನಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ತೆರೆಗಪ್ಪಳಿಸಿದ 'ಲಿಯೋ': ಮಿಶ್ರ ಪ್ರತಿಕ್ರಿಯೆ ವ್ಯಕ್ತ - ಆರಂಭಿಕ ಟ್ವಿಟರ್ ವಿಮರ್ಶೆ ಇಲ್ಲಿದೆ

'ಘೋಸ್ಟ್​​ನಲ್ಲಿ ಕೆಜಿಎಫ್ ನಿರೀಕ್ಷಿಸಬೇಡಿ' ಎಂದಿದ್ದ ಶಿವಣ್ಣ: ಅದ್ಭುತ ಸಿನಿಮೀಯ ಅನುಭವ ಒದಗಿಸಲು ಘೋಸ್ಟ್ ಚಿತ್ರತಂಡ ಸಾಕಷ್ಟು ಶ್ರಮ ಪಟ್ಟಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರೆಡಿಯಾದ ಸಿನಿಮಾವನ್ನು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸಲು ಶಿವಣ್ಣ ಆ್ಯಂಡ್​ ಟೀಮ್ ದೇಶದ ಪ್ರಮುಖ ನಗರಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡಿತ್ತು. ಟ್ರೇಲರ್​, ಪೋಸ್ಟರ್​​ನಲ್ಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ಸಿನಿಮಾ, ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಯಶಸ್ವಿ ಆಗಿದೆ. ಆರಂಭಿಕ ವಿಮರ್ಷೆಗಳು ಉತ್ತಮವಾಗಿದ್ದು, ಸಿನಿಮಾ ಗೆಲ್ಲೋದು ಬಹುತೇಕ ಖಚಿತವಾಗಿದೆ. ಸಿನಿಮಾ ಪ್ರಮೋಶನ್​ ವೇಳೆ 'ಘೋಸ್ಟ್' ಮಾಸ್ ಚಿತ್ರವಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಶಿವಣ್ಣ, "ಘೋಸ್ಟ್​​ನಲ್ಲಿ ಕೆಜಿಎಫ್ ನಿರೀಕ್ಷೆ ಬೇಡ, ಕೆಜಿಎಫ್ ಸಿನಿಮಾದಲ್ಲೇ ಕೆಜಿಎಫ್ ಕಥೆ ಪೂರ್ಣಗೊಂಡಿದೆ. ಕೆಜಿಎಫ್ ಕಥೆಯೇ ಬೇರೆ - ಘೋಸ್ಟ್ ಚಿತ್ರವೇ ಬೇರೆ" ಎಂದು ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ:'ಘೋಸ್ಟ್​​ನಲ್ಲಿ ಕೆಜಿಎಫ್ ನಿರೀಕ್ಷಿಸಬೇಡಿ': ಸಿನಿಮಾ, ರಜನಿಕಾಂತ್, ಮೋಹನ್​ ಲಾಲ್​ ಬಗ್ಗೆ ಶಿವಣ್ಣ ಹೇಳಿದ್ದಿಷ್ಟು!

Last Updated : Oct 19, 2023, 10:04 AM IST

ABOUT THE AUTHOR

...view details