ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ ಅಭಿನಯನದ 'ಘೋಸ್ಟ್' ಚಿತ್ರ ಇದೀಗ ತನ್ನ ಶೀರ್ಷಿಕೆಯಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡಿದೆ. ಹೌದು ಗ್ಯಾಂಗ್ ಸ್ಟಾರ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಕರುನಾಡ ಚಕ್ರವರ್ತಿಯ 'ಘೋಸ್ಟ್' ಚಿತ್ರದ ಬಿಡುಗಡೆಗೂ ಮುಂಚೆ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ. ಸದ್ಯ ಮೋಷನ್ ಪಿಕ್ಚರ್ನಿಂದಲೇ ದಕ್ಷಿಣ ಭಾರತದಲ್ಲಿ ಟಾಕ್ ಆಗುತ್ತಿರುವ 'ಘೋಸ್ಟ್' ಚಿತ್ರ ಶೂಟಿಂಗ್ ಹಂತದಲ್ಲಿಯೇ ಸಿನಿಮಾ ಬಿಸಿನೆಸ್ ಮಾಡಿದೆ.
ಶ್ರೀನಿವಾಸ್ ಕಲ್ಯಾಣ, ಬೀರ್ ಬಲ್ ಚಿತ್ರಗಳಿಂದ ಭರವಸೆ ನಿರ್ದೇಶಕ ಅಂತಾ ಕರೆಸಿಕೊಂಡಿರುವ ಶ್ರೀನಿವಾಸ್ ಫಸ್ಟ್ ಟೈಮ್ ಸೆಂಚುರಿ ಸ್ಟಾರ್ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿಸಿರೋ ಘೋಸ್ಟ್ ಚಿತ್ರದ ಆಡಿಯೋ ಹಕ್ಕನ್ನು ಪ್ರತಿಷ್ಠಿತ ಆಡಿಯೋ ಕಂಪನಿ ಆನಂದ್ ಆಡಿಯೋ ಸಂಸ್ಥೆ ಈ ಚಿತ್ರದ ಆಡಿಯೋವನ್ನು ಭಾರಿ ಮೊತ್ತಕ್ಕೆ ಖರೀದಿ ಮಾಡಿದೆ. ನಿರ್ಮಾಪಕ ಸಂದೇಶ್ ನಾಗರಾಜ್ ಆಪ್ತರು ಹೇಳುವ ಮೂಲಕ 1.5 ಕೋಟಿ ರೂ ಮೊತ್ತಕ್ಕೆ ಆಡಿಯೋ ರೈಟ್ಸ್ ಖರೀದಿಸಲಾಗಿದೆ ಎನ್ನಲಾಗಿದೆ. ಈ ಮೂಲಕ 'ಘೋಸ್ಟ್' ಚಿತ್ರಕ್ಕೆ ಟಿವಿ ರೈಟ್ಸ್ ಹಾಗೂ ಡಿಜಿಟಲ್ ರೈಟ್ಸ್ಗೆ ಡಿಮ್ಯಾಂಡ್ ಬಂದಿದೆಯಂತೆ.
ಇನ್ನು ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರ ದೊಡ್ಡ ತಾರಾಬಳಗವೇ ಇದೆ. ನಿರ್ದೇಶಕ ಶ್ರೀನಿವಾಸ್ರವರೆ ಮೂವಿಗೆ ಕಥೆ, ಚಿತ್ರಕಥೆ ಬರೆದರೆ, ಸಂಭಾಷಣೆಯನ್ನು ಮಾಸ್ತಿ ಹಾಗೂ ಪ್ರಸನ್ನ ಅವರಿಂದ ಸಿದ್ಧವಾಗಿದೆ. ಇನ್ನು ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಘೋಸ್ಟ್ ಚಿತ್ರಕ್ಕಿದೆ.
ಈಗಾಗಲೇ ಬೆಂಗಳೂರಿನ ಮಿನರ್ವ ಮಿಲ್ನಲ್ಲಿ ಅಪಾರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿರುವ 15ಕ್ಕೂ ಅಧಿಕ ಸೆಟ್ಗಳಲ್ಲಿ 28 ದಿನಗಳ ಕಾಲ ಘೋಸ್ಟ್ ಚಿತ್ರೀಕರಣ ಮಾಡಲಾಗಿದೆ. ಈ ಸನ್ನಿವೇಶದಲ್ಲಿ ಶಿವರಾಜಕುಮಾರ್, ತೆಲುಗು ನಟ ಜಯರಾಮ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್ ಮುಂತಾದ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಮಿನರ್ವ ಮಿಲ್ಸ್ ನಲ್ಲಿ ಹಾಕಲಾಗಿದ್ದ ಅದ್ದೂರಿ ಸೆಟ್ಟುಗಳೊಂದಿಗೆ ಘೋಸ್ಟ್ ಚಿತ್ರದ ಶೂಟಿಂಗ್ ಮಾಡಲಾಗಿದೆ. ಮುಖ್ಯವಾಗಿ ಈ ಚಿತ್ರವು ಐದು ಸಾಹಸ ಸನ್ನಿವೇಶಗಳನ್ನು ಒಳಗೊಂಡಿದೆ.
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ಈ ಸಿನಿಮಾವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಚಿತ್ರದ ಪೋಸ್ಟರ್ ಸಿನಿ ಅಭಿಮಾನಿಗಳಲ್ಲಿ ಈಗಲೇ ಕುತೂಹಲ ಮೂಡಿಸಿದೆ. 22 ಹಾಗೂ 25 ವರ್ಷದ ಯಂಗ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್ ಕುಮಾರ್ರವರ ಪೋಸ್ಟರ್ ಸಖತ್ ಟ್ರೆಂಡ್ ಆಗಿದ್ದು, ಅವರ ಕೋಟ್ಯಾಂತರ ಅಭಿಮಾನಿಗಳಲ್ಲಿ ಘೋಸ್ಟ್ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಕ್ರಿಯೇಟ್ ಆಗಿರೊದಂತು ನಿಜ.
ಇದನ್ನೂ ಓದಿ:ಪ್ರಜಾರಾಜ್ಯ ಚಿತ್ರದ ಮತ್ತೊಂದು ಹಾಡು ಬಿಡುಗಡೆಗೆ ಸಿದ್ದ..