ಕನ್ನಡ ಮಾತ್ರವಲ್ಲದೇ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ 'ಘೋಸ್ಟ್'. ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಮತ್ತು ನಿರ್ದೇಶಕ ಶ್ರೀನಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಮೋಷನ್ ಪೋಸ್ಟರ್ನಿಂದಲೇ ಸಾಕಷ್ಟು ಟಾಕ್ ಆಗುತ್ತಿರುವ 'ಘೋಸ್ಟ್' ಸಿನಿಮಾದ 'BIG DADDY' ಫಸ್ಟ್ ಲುಕ್ ರಿಲೀಸ್ ಆಗಿದೆ.
ಜುಲೈ 12 ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆ 'BIG DADDY' ಎಂಬ ಸ್ಪೆಷಲ್ ವಿಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಅದಕ್ಕೂ ಮುನ್ನ ಇಂದು ನಿರ್ದೇಶಕ ಶ್ರೀನಿ ಅವರ ಹುಟ್ಟುಹಬ್ಬದ ಸಲುವಾಗಿ 'ಬಿಗ್ ಡ್ಯಾಡಿ' ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಶಿವಣ್ಣ ರೈಫಲ್ ಹಿಡಿದು ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಕಾಣಿಸಿದ ಹೊಸ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ನಿಮ್ಮ ಮುಂದೆ ಬರಲಿದ್ದಾರೆ.
'ಶ್ರೀನಿವಾಸ ಕಲ್ಯಾಣ', 'ಓಲ್ಡ್ ಮಾಂಕ್' ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಶ್ರೀನಿ 'ಘೋಸ್ಟ್' ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ರೀನಿ ನಿರ್ದೇಶನವಾಗಿರುವುದರಿಂದ 'ಘೋಸ್ಟ್' ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಮುಗಿಲೆತ್ತರದಲ್ಲಿದೆ. ಜನ್ಮದಿನ ಆಚರಿಸಿಕೊಳ್ಳುತ್ತಿರುವ 'ಘೋಸ್ಟ್' ಒಡೆಯನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಿನಿಮಾ ಸೆಲೆಬ್ರಿಟಿಗಳು, ಸ್ನೇಹಿತರು, ಕುಟುಂಬಸ್ಥರು ಸೇರಿದಂತೆ ಅನೇಕರು ವಿಶ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಶ್ರೇಷ್ಠ ಸಾಹಿತಿ ರವೀಂದ್ರನಾಥ್ ಠಾಗೋರ್ ಪಾತ್ರದಲ್ಲಿ ಅನುಪಮ್ ಖೇರ್: ಹಿರಿಯ ನಟನ 538ನೇ ಸಿನಿಮಾ!