ಮುಂಬೈ :'ದಿ ರೊಮ್ಯಾಂಟಿಕ್ಸ್' ಎಂಬ ಡಾಕ್ಯುಮೆಂಟರಿ ಟ್ರೈಲರ್ ಅನ್ನು ನೆಟ್‌ಫ್ಲಿಕ್ಸ್‌ನಲ್ಲಿ ಇಂದು ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ಖ್ಯಾತ ಹಿಂದಿ ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ ಮತ್ತು ಅವರ ನಿರ್ಮಾಣ ಸಂಸ್ಥೆಯಾದ ಯಶ್ ರಾಜ್ ಫಿಲ್ಮ್ಸ್ ಗೆ ಸಂಬಂಧಿಸಿರುವುದಾಗಿದೆ. ಸಂಸ್ಥೆದೊಂದಿಗೆ 50 ವರ್ಷಗಳ ಕಾಲ ನಿಕಟವಾಗಿ ಕೆಲಸ ಮಾಡಿದ ಬಾಲಿವುಡ್ನ 35 ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಿರುವ ಡಾಕ್ಯುಮೆಂಟರಿ ಇದಾಗಿದೆ. ಇಂಡಿಯನ್ ಮ್ಯಾಚ್‌ಮೇಕಿಂಗ್ ಖ್ಯಾತಿಯ ಸ್ಮೃತಿ ಮುಂದ್ರಾ ಅವರು ಈ ಡಾಕ್ಯುಮೆಂಟ್ರಿ ಅನ್ನು ನಿರ್ದೇಶಿಸಿದ್ದು ಪ್ರೇಮಿಗಳ ದಿನವಾದ ಫೆ.14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಹೀಗಾಗಿ ಅಭಿಮಾನಿಗಳು ಈ ಥ್ರಿಲ್ಲಿಂಗ್ ಡಾಕ್ಯುಮೆಂಟರಿ ನೋಡಲು ಕಾತರರಾಗಿದ್ದಾರೆ.
ಈ ಟ್ರೇಲರ್ನಲ್ಲಿ ಮೂರು ತಲೆಮಾರಿನ ನಟ ನಟಿರಾದ ರಿಷಿ ಕಪೂರ್, ಅಮಿತಾಭ್ ಬಚ್ಚನ್, ಶಾರುಖ್ ಖಾನ್, ರಾಣಿ ಮುಖರ್ಜಿ, ರಣಬೀರ್ ಕಪೂರ್, ಅಭಿಷೇಕ್ ಬಚ್ಚನ್, ಭೂಮಿ ಪೆಡ್ನೇಕರ್ ಮತ್ತು ರಣವೀರ್ ಸಿಂಗ್, ದಿವಂಗತ ಚಿತ್ರನಿರ್ಮಾಪಕ ಯಶ್ ಚೋಪ್ರಾ ಅವರ ಬಗ್ಗೆ ಕುರಿತು ಮಾತನಾಡುವುದು ಈ ಕಿರುಚಿತ್ರದಲ್ಲಿ ಚಿತ್ರೀಕರಿಸಲಾಗಿದೆ. ಇವರೆಲ್ಲರ ಇತಿಹಾಸವೂ ಈ ಚಿಕ್ಕ ಕಥೆಯಲ್ಲಿ ಇದೆ ಎಂದು ಚಿತ್ರತಂಡ ಹೇಳಿದೆ.
ಟ್ರೇಲರ್ ಏನು ಹೇಳುತ್ತದೆ ಗೊತ್ತಾ?:ಸಲೀಂ ಖಾನ್ ಮತ್ತು ರಣಬೀರ್ ಕಪೂರ್ "ಬಾಲಿವುಡ್" ಪದದ ಬಗ್ಗೆ ತಮ್ಮ ದ್ವೇಷವನ್ನು ವ್ಯಕ್ತಪಡಿಸುವುದರೊಂದಿಗೆ ಟ್ರೈಲರ್ ಪ್ರಾರಂಭವಾಗುತ್ತದೆ. ಅಮೀರ್ ಖಾನ್, ಹೃತಿಕ್ ರೋಷನ್, ಮಾಧುರಿ ದೀಕ್ಷಿತ್, ಕಾಜೊಲ್, ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್, ಆಯುಷ್ಮಾನ್ ಖುರಾನಾ ಮತ್ತು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಅಡಿಯಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಪ್ರಖ್ಯಾತಿಗಳಿಸಿದ ಅನೇಕ ತಾರೆಯರು ಮನಬಿಚ್ಚಿ ಬಾಲಿವುಡ್ ಮತ್ತು ಭಾರತೀಯ ಸಿನಿರಂಗದ ಬಗ್ಗೆ ಮಾತನಾಡಿದ್ದಾರೆ.