ಕರ್ನಾಟಕ

karnataka

ETV Bharat / entertainment

2ನೇ ವಾರವೂ ಬೇಡಿಕೆ ಹೆಚ್ಚಿಸಿಕೊಂಡ ಯೋಗರಾಜ್ ಭಟ್ಟರ 'ಗರಡಿ' - ಯೋಗರಾಜ್ ಭಟ್

Garadi movie update: ಯೋಗರಾಜ್ ಭಟ್ ನಿರ್ದೇಶನದ 'ಗರಡಿ‌' ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

garadi movie
ಗರಡಿ

By ETV Bharat Karnataka Team

Published : Nov 17, 2023, 9:03 AM IST

ಬೆಂಗಳೂರು:ವಿಕಟಕವಿ ಜನಪ್ರಿಯತೆಯ ಯೋಗರಾಜ್ ಭಟ್ ನಿರ್ದೇಶನದಲ್ಲಿ ಬಿ.ಸಿ.ಪಾಟೀಲ್, ಯಶಸ್ ಸೂರ್ಯ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಗರಡಿ‌' ಸಿನಿಮಾ ನವೆಂಬರ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗರಡಿ ಮನೆ ಸುತ್ತ ನಡೆಯುವ ಅಪ್ಪಟ ದೇಸಿ ಸಿನಿಮಾವನ್ನು ಸಿನಿಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ‌.

ಮೊದಲ ವಾರ ಮಲ್ಟಿಪ್ಲೆಕ್ಸ್ ಹಾಗು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನದಲ್ಲಿರುವ ಗರಡಿ ಎರಡನೇ ವಾರದಲ್ಲೂ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ. ದೀಪಾವಳಿ ಪ್ರಯುಕ್ತ ಸಾಲು ಸಾಲು ರಜೆಗಳಿದ್ದ ಕಾರಣ ಪ್ರೇಕ್ಷಕರು ಚಿತ್ರಮಂದಿರದ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡಿದ್ದಾರೆ.

ನೆಲದ ಸಂಸ್ಕೃತಿಯ ಕುಸ್ತಿ, ಪೈಲ್ವಾನ್​ಗಳ ಕಥೆ, ಅಣ್ಣ-ತಮ್ಮನ ಸಂಬಂಧ, ದಶಕಗಳ ಹಿಂದೆ ಹಳ್ಳಿಗಳಲ್ಲಿ ಕುಸ್ತಿಪಟುಗಳನ್ನು ಪೊಲೀಸರಿಗೆ ಹೋಲಿಸುತ್ತಿದ್ದರು ಎಂಬೆಲ್ಲ ವಿಚಾರಗಳು ಸಿನಿಮಾದಲ್ಲಿವೆ.

ಬೆಂಗಳೂರಿನ ಕೆ.ಜಿ‌ ರಸ್ತೆಯಲ್ಲಿರುವ ಅನುಪಮ ಹಾಗು ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ಗರಡಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಬುಕ್ ಮೈ ಶೋನಲ್ಲೂ ಸಿನಿಮಾದ ಕ್ರೇಜ್ ಜೋರಾಗಿದೆ. ಸಲ್ಮಾನ್ ಖಾನ್ ಟೈಗರ್ 3 ಸಿನಿಮಾದ ಮಧ್ಯೆಯೂ ಗರಡಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಕುಸ್ತಿ ಮನೆ ಯಜಮಾನನ ಪಾತ್ರದಲ್ಲಿ ಬಿ.ಸಿ‌.ಪಾಟೀಲ್ ಖಡಕ್‌ ಆಗಿ ಅಭಿನಯಿಸಿದ್ದಾರೆ. ಸೋನಾಲ್ ಮಂಟೊರ್ ಟಿಕ್ ಟಾಕ್ ಸ್ಟಾರ್ ಪಾತ್ರದಲ್ಲಿ ಪಡ್ಡೆಹುಡುಗರಿಗೆ ಇಷ್ಟವಾಗ್ತಾರೆ.‌ ಆರ್ಮುಗಂ ರವಿಶಂಕರ್ ಕಣ್ಣು ಮಿಟುಕಿಸುವ ರಾಣೇ ಮನೆತನದ ನಾಯಕನಾಗಿ ಮಿಂಚಿದ್ದಾರೆ. ಧರ್ಮಣ್ಣ ಸೂರ್ಯ ಗೆಳೆಯನಾಗಿ ಇಷ್ಟ ಆಗುತ್ತಾರೆ. ನಿಶ್ವಿಕಾ ನಾಯ್ಡು ಸ್ಪೆಷಲ್ ಸಾಂಗ್​ನಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ. ಇವರ ಮಧ್ಯೆ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಎಂಟ್ರಿ ಹಾಗು ಪಂಚಿಂಗ್ ಡೈಲಾಗ್
ಸಿನಿಮಾಗೆ ದೊಡ್ಡ ಪ್ಲಸ್​ ಪಾಯಿಂಟ್ ಆಗಿದೆ.

ನಿರಂಜನ್ ಬಾಬು ಕ್ಯಾಮರಾ ವರ್ಕ್, ವಿ.ಹರಿಕೃಷ್ಣ ಸಂಗೀತ ನಿರ್ದೇಶನವಿದೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ. ಸೌಮ್ಯ ಫಿಲಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:'ಬ್ಯಾಡ್ ಮ್ಯಾನರ್ಸ್' ಬಿಡುಗಡೆಗೆ ದಿನಗಣನೆ: ಪ್ರಚಾರ ಜೋರು, ದರ್ಶನ್​ ಸಾಥ್

ABOUT THE AUTHOR

...view details