ಕರ್ನಾಟಕ

karnataka

ETV Bharat / entertainment

ಪವರ್​ ಸ್ಟಾರ್ ತೆಗೆದುಬಿಡಿ ಎಂದಿದ್ರು ಪುನೀತ್​: ಗಂಧದಗುಡಿ ನಿರ್ಮಾಣದ ಕಥೆ ತೆರೆದಿಟ್ಟ ನಿರ್ದೇಶಕ ಅಮೋಘವರ್ಷ - ಈಟಿವಿ ಭಾರತ ಕನ್ನಡ

ಗಂಧದಗುಡಿ ನಿರ್ದೇಶ, ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘವರ್ಷ ಪುನೀತ್ ರಾಜ್ ಕುಮಾರ್ ಬಗ್ಗೆ ಈಟಿವಿ ಭಾರತ ಜೊತೆ ಸಾಕಷ್ಟು ಇಂಟ್ರಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡಿರುವ ಸಂದರ್ಶನ ಇಲ್ಲಿದೆ.

Etv Bharatgandhadagudi-director-amogha-varsha-interview
Etv Bharatಗಂಧದಗುಡಿ ನಿರ್ದೇಶಕ ಅಮೋಘವರ್ಷ

By

Published : Oct 10, 2022, 6:19 PM IST

Updated : Oct 11, 2022, 6:50 PM IST

ಗಂಧದಗುಡಿ ದಿವಗಂತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಹಳ ಇಷ್ಟ ಪಟ್ಟು ಮಾಡಿದ ಸಿನಿಮಾ. ನ್ಯಾಷಿನಲ್ ಆವಾರ್ಡ್ ವಿನ್ನರ್ ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘವರ್ಷ ನಿರ್ದೇಶನದಲ್ಲಿ ಮೂಡಿ ಬಂದಿರೋ ಗಂಧದಗುಡಿ ಚಿತ್ರದ ಟ್ರೈಲರ್​ ಅನ್ನು ಬರೋಬ್ಬರಿ 10 ಮಿಲಿಯನ್​ ಜನ ನೋಡಿ ಮೆಚ್ಚಿಕೊಂಡಿದ್ದಾರೆ.

ಇಲ್ಲಿ ಏನಾದರೂ ಬೇರೆ ತರ ಪಕ್ಷಿ ತೋರ್ಸೋಕೆ ಕರ್ಕೊಂಡು ಬಂದಿದ್ದೀರಾ ಸಮುದ್ರದ ಹತ್ರ ಎಂದು, ಜೀಪ್‌ನಲ್ಲಿ ಅಪ್ಪು ಕುಳಿತುಕೊಂಡು ಮಾತನಾಡುತ್ತಿರುವ ದೃಶ್ಯದ ಮೂಲಕ ಟ್ರೈಲರ್ ಆರಂಭವಾಗುತ್ತದೆ. ಇಲ್ಲ ಇಲ್ಲೊಂದು ಸ್ಪೆಷಲ್ ಐಲ್ಯಾಂಡ್‌ ಇದೆ ಎಂದು ಅಮೋಘ್ ಹೇಳಿದಾಗ ಅಪ್ಪು ತುಂಬಾನೇ ಖುಷಿಯಿಂದ ಓ ಜುರಾಸಿಕ್‌ ಪಾರ್ಕ್ ಎಂದು ಹೇಳುವ ಮಾತಿನಿಂದ ಟ್ರೈಲರ್ ಅನಾವರಣಗೊಳ್ಳುತ್ತೆ.

ಇದರಲ್ಲಿ ನಮ್ಮ ಕರ್ನಾಟಕದ ರಾಜ್ಯದ ಅರಣ್ಯ ಹಾಗೂ ಪ್ರಾಣಿ ಪಕ್ಷಿಗಳ ಜೀವ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವ ಈ ಟ್ರೈಲರ್ ಒಳಗೊಂಡಿದೆ. ಇಂತಹ ಗಂಧದ ಗುಡಿ ಬಗ್ಗೆ ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘ ವರ್ಷ ಪುನೀತ್ ರಾಜ್ ಕುಮಾರ್ ಬಗ್ಗೆ ಈಟಿವಿ ಭಾರತ ಜೊತೆ ಸಾಕಷ್ಟು ಇಂಟ್ರಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪುನೀತ್​ ಅವರೇ ಸಿನಿಮಾ ಮಾಡಿಸಿದ್ದು : ಅಷ್ಟಕ್ಕೂ ಈ ಗಂಧದಗುಡಿ ಶುರವಾಗಿದ್ದು ಪುನೀತ್ ರಾಜ್ ಕುಮಾರ್ ಅವರಿಂದ. ನನ್ನ ವೈಲ್ಡ್ ಲೈಫ್ ಸಿನಿಮಾಗಳನ್ನ ನೋಡಿ ಪುನೀತ್ ಸಾರ್ ಒಮ್ಮೆ ನನ್ನನ್ನ ಕರೆಯಿಸಿ ಮೀಟ್ ಮಾಡಿದರು. ಹಾಗೇ ಮಾತನಾಡುತ್ತಾ ಅಪ್ಪು ಸಾರ್ ಬನ್ನಿ ನಾವು ಕೂಡ ಕಾಡು ಸುತ್ತೋಣ ಅಂತಾ ಹೇಳಿದರು. ಸಣ್ಣದಾಗಿ ಶುರುವಾದ ಗಂಧದ ಗುಡಿ ತುಂಬಾ ಪ್ರೊಫೆಷನಲ್ ಆಗಿ, ಇವತ್ತು ಇಷ್ಟು ದೊಡ್ಡ ಮಟ್ಟಕ್ಕೆ ಬಂದು ನಿಂತಿರೋದಿಕ್ಕೆ ಕಾರಣ ಅಪ್ಪು ಸಾರ್ ಅಂತಾರೆ ಅಮೋಘವರ್ಷ ಅವರು.
ತಾನೊಬ್ಬ ಸ್ಟಾರ್ ನಟ ಅಂತಾ ಎಂದು ತೋರಿಸಿಕೊಳ್ಳಲಿಲ್ಲ

ಅಮೋಘವರ್ಷ ಅವರು ಹೇಳುವಾಗೆ ಈ ಗಂಧದಗುಡಿ ಚಿತ್ರ ಮಾಡಬೇಕು ಅಂತಾ ಅನಿಸಿದ್ದು ಅಪ್ಪು ಸಾರ್ ಕಾರಣ. ಯಾಕಂದ್ರೆ ಅಪ್ಪು ಸಾರ್ ಹೇಳಿದಾಗೆ ಶುರುವಾದ ಸಿನಿಮಾ ಇದು. ಅಪ್ಪು ಸಾರ್ ನಿರ್ದೇಶಕ ಹೇಳಿದಂತೆ ನಟಿಸುವ ನಟ.‌ ಈ ಕಾರಣಕ್ಕೆ ಅವರ ಕನಸು, ಯೋಚನೆಗಳು, ಕಲ್ಪನೆ ಎಲ್ಲಾ ಅವರದ್ದು. ನನ್ನ ಜೊತೆ ಪ್ರತಿಬಾರಿ ಮಾತುಕತೆ ಮಾಡ್ತಾ ಇದ್ದರು.

ಒಂದು ವರ್ಷ ಶೂಟಿಂಗ್​ : ನಾನು 20 ವರ್ಷದಿಂದ‌ ಕರ್ನಾಟಕದ ಎಲ್ಲ ಭಾಗದ ಅರಣ್ಯಗಳನ್ನ ಸುತ್ತಿದ್ದೇನೆ. ಇದರಿಂದ ಈ ಗಂಧದ ಗುಡಿ ಮಾಡೋದಿಕ್ಕೆ ಸಾಧ್ಯ ಆಯಿತ್ತು. ಈ ಸಿನಿಮಾವನ್ನು ಸತತ ಒಂದು ವರ್ಷ ಎಲ್ಲಾ ಕಾಲ ಘಟ್ಟದಲ್ಲಿ ಚಿತ್ರೀಕರಣ ಮಾಡಿದ್ವಿ. ಅಪ್ಪು ಸಾರ್ ಕೂಡ ತಮ್ಮ ಸಿನಿಮಾ ಶೂಟಿಂಗ್​ನಲ್ಲಿ ಎಷ್ಟೇ ಬ್ಯೂಸಿ ಇದ್ದರೂ ಕೂಡ, ಬಿಡುವು ಮಾಡಿಕೊಂಡು ನಮ್ಮ ಜೊತೆ ಶೂಟಿಂಗ್ ಬರ್ತಾ ಇದ್ದರು. ಒಂದು ಜಾಗಕ್ಕೆ ಹೋಗುವ ಮುನ್ನ ಸಾಕಷ್ಟು ಕೇಳಿ ತಿಳಿದು ಕೊಳ್ಳುತ್ತಿದ್ದರು. ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬ ಸೂಪರ್ ಸ್ಟಾರ್ ಜೊತೆ ಈ ಪಾರ್ಮೆಟ್ ನಲ್ಲಿ ಇಷ್ಟು ವರ್ಷ ಚಿತ್ರೀಕರಣ ಯಾರು ಮಾಡಿಲ್ಲ ಇದೇ ಮೊದಲು ಅಂತಾರೆ ಅಮೋಘ.

15 ವಿಭಿನ್ನ ಬಗೆಯ ಕ್ಯಾಮರಾ ಬಳಕೆ : ಈ ಗಂಧದ ಗುಡಿ ಸಿನಿಮಾಕ್ಕಾಗಿ ಬರೋಬ್ಬರಿ 15 ವಿಭಿನ್ನ ಬಗೆಯ ಕ್ಯಾಮರಾಗಳನ್ನ ಬಳಸಿ ಚಿತ್ರೀಕರಣ ಮಾಡಲಾಗಿದೆಯಂತೆ. ಟೆಕ್ನಾಲಜಿ ಬಗ್ಗೆ ಅವ್ರಿಗೆ ತುಂಬಾನೇ ಇಷ್ಟ.‌ ನನಗೂ ಟೆಕ್ನಾಲಜಿ ಹಿನ್ನೆಲೆ ಇರುವುದರಿಂದ‌ ಮಾರ್ಕೆಟ್ ನಲ್ಲಿ ಯಾವುದೇ ಹೊಸ‌ ಕ್ಯಾಮರಾ ಬಂದ್ರೆ ಅದನ್ನ ಬಳಸುತ್ತಿದ್ದೀವಿ‌. ನಾವು ಬಳಸಿರೋ ಟೆಕ್ನಾಲಜಿಯನ್ನ ಹಾಲಿವುಡ್ ಸಿನಿಮಾಗಳಲ್ಲಿ ಬಳಸುತ್ತಾರೆ. ಸ್ಥಳಕ್ಕೆ ಅನುಗುಣವಾಗಿ ಕ್ಯಾಮರಗಳನ್ನ ಬಳಸಿದ್ವಿ ಅಂತಾರೆ.

ಈ ಗಂಧದಗುಡಿಯಲ್ಲಿ ಪುನೀತ್​ ಅಪ್ಪು ತರ ಇರ್ತಾರೆ. ನಿಜ ಜೀವನದ ಹೇಗೆ ಪುನೀತ್ ಇದ್ದರೋ ಹಾಗೇ ಈ ಗಂಧದ ಗುಡಿಯಲ್ಲಿ ಇರ್ತಾರೆ.‌ ಇದು ಸಿನಿಮಾದ ತರ ಕಥೆಯಲ್ಲ ಇದೊಂದು ಡಿಫ್ರೆಂಟ್ ಫಾರ್ಮೆಟ್ ನ ಸಿನಿಮಾ.‌ ಇದನ್ನ ಎಕ್ಸ್ ಪಿರಿಯನ್ಸ್ ತರ ಫೀಲ್ ಮಾಡಬೇಕು ಅಂತಾರೆ ಅಮೋಘ.

ಗಂಧದಗುಡಿ ನಿರ್ದೇಶಕನ ಸಂದರ್ಶನ

ಈ ಸಿನಿಮಾವೂ ಸ್ಪೂರ್ತಿ ಆಗಬೇಕು : ಇನ್ನು ಗಂಧದ ಗುಡಿ ಸಿನಿಮಾ ಮಾಡೋದಿಕ್ಕೆ ನಮಗೆಲ್ಲ ಈ ರಾಜ್ ಕುಮಾರ್ ಸಾರ್‌ ಸ್ಪೂರ್ತಿ. ‌ಯಾಕಂದ್ರೆ ಅವರು ನಟಿಸಿದ ಗಂಧದಗುಡಿ ಸಿನಿಮಾ ನೋಡಿ ‌‌‌ಕಲಿತಿದ್ವಿ. ಅದರಲ್ಲಿ ಅಪ್ಪು ಸಾರ್ ಗಂಧದಗುಡಿ ಸಿನಿಮಾ‌ ಅಂದ್ರೆ ಇಷ್ಟ. ಈ ಕಾರಣಕ್ಕೆ ಪುನೀತ್ ಸಾರ್ ಆಸೆಯಂತೆ ಗಂಧದಗುಡಿ ಅಂತಾ ಟೈಟಲ್ ಇಟ್ಟಿದ್ದೇವೆ ಅಂದರು.

ಇನ್ನು ಶೂಟಿಂಗ್ ಟೈಮಲ್ಲಿ ಪುನೀತ್ ರಾಜ್‍ಕುಮಾರ್ ಎಷ್ಟು ಸಿಂಪಲ್ ಎಲ್ಲರಿಗೂ ಗೊತ್ತಿದೆ. ಯಾಕೆಂದರೆ ಶೂಟಿಂಗ್ ಟೈಮಲ್ಲಿ ಬನ್ನಿ ಈ ಜಾಗಕ್ಕೆ ಹೋಗಣ ಅಂದ್ರೆ ನಡೀರಿ ಅಂತಾ ಹೇಳುತ್ತಿದ್ದರು‌. ಯಾಕೆಂದರೆ ಅವರು ಊಟದ ಪ್ರಿಯ. ರೋಡ್ ಸೈಡ್​ನಲ್ಲಿ ಒಳ್ಳೆ ಟೇಸ್ಟ್ ಸಿಕ್ಕರೇ ಅಲ್ಲೆ ಊಟ ಮಾಡುತ್ತಿದ್ದರು. ಯಾವುದು ಬೇಡ ಅಂತಾ ಹೇಳುತ್ತಿರಲಿಲ್ಲ. ಬಹಳ ಸರಳ ವ್ಯಕ್ತಿತ್ವ ಒಂದು ಕಡೆಯಾದರೆ ಮತ್ತೊಂದು ಕಡೆ ನಾನೊಬ್ಬ ದೊಡ್ಡ ಸ್ಟಾರ್ ಅಂತಾ ಯಾವತ್ತು ತೋರಿಸಿಕೊಂಡಿಲ್ಲ.

ಟ್ರೈಲರ್​ಗೆ ಸಖತ್ ರೆಸ್ಪಾನ್ಸ್ : ಈ ಗಂಧದ ಗುಡಿ ಶೂಟಿಂಗ್ ಟೈಮಲ್ಲಿ ಆ ವಿಷ್ಯೂಲ್ಸ್ ‌ನೋಡಿ ನಾನು ಪವರ್ ಸ್ಟಾರ್ ಅಂತಾ ಟೈಟಲ್ ಇಡೋಣ ಅಂತಾ ಹೇಳಿದ್ದೆ. ಆದರೆ ಅವರು ಬೇಡ ಅಂತಾ ಗಂಧದಗುಡಿ ಅಂತಾ ಟೈಟಲ್ ಇಟ್ಟರು.‌ ಟ್ರೈಲರ್​ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಪ್ರಶಾಂತ್ ನೀಲ್‌ ನಮ್ಮ ನಾಡಿನಲ್ಲಿ ಇಂತಹದೊಂದು ಸಿನಿಮಾ ಬರ್ತಾ ಇರೋದು ನಮ್ಮ ನಾಡಿಗೆ ಹೆಮ್ಮೆ.‌ ಜೊತೆಗೆ ಅಪ್ಪು ಸಾರ್ ಇದ್ದಿದ್ದರೆ ಇದು ಮತ್ತಷ್ಟು ದೊಡ್ಡ ಮಟ್ಟಕ್ಕೆ‌‌ ಮಾರ್ಕೆಟಿಂಗ್ ಮಾಡ್ತಾ ಇದ್ದರು‌. ಆದರೂ ಅವ್ರ ಅಭಿಮಾನಿಗಳು ಪ್ರಚಾರ ಮಾಡ್ತಾ ಇದ್ದಾರೆ‌.

ಈ ಸಿನಿಮಾವನ್ನ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನೋಡುಬೇಕು ಅನ್ನೋದು. ಯಾಕಂದ್ರೆ ಇದು ಅಪ್ಪು ಸಾರ್ ಕನಸು ಕೂಡ. ನಮ್ಮ ಅರಣ್ಯ ಸಂಪತ್ತು ಪ್ರಾಣಿ ಸಂಕುಲದ ಬಗ್ಗೆ ಪುಸ್ತಕದಲ್ಲಿ ನೋಡುವ ಕಾಲ ಬರ್ತಾ ಇದೆ. ಈ ಕಾರಣಕ್ಕೆ ಅಪ್ಪು ಸಾರ್ ಈ ಗಂಧದ ಗುಡಿ ಸಿನಿಮಾವನ್ನ ಮಾಡಿರೋದು ಅಂತಾ ಅಮೋಘ ವರ್ಷ ಕೆಲ ಅಚ್ಚರಿ ಸಂಗತಿಗಳನ್ನ ಹಂಚಿಕೊಂಡರು.

ಇದನ್ನೂ ಓದಿ :ಗಂಧದಗುಡಿ ಪ್ರೀ ರಿಲೀಸ್ ಇವೆಂಟ್​.. ಅಪ್ಪು ಕೊನೆ ಚಿತ್ರದ ಕಾರ್ಯಕ್ರಮಕ್ಕೆ ದೇಶದ ಟಾಪ್​ ಸ್ಟಾರ್ಸ್​ಗೆ ಆಹ್ವಾನ

Last Updated : Oct 11, 2022, 6:50 PM IST

ABOUT THE AUTHOR

...view details