ಬಾಲಿವುಡ್ ನಟ ಟೈಗರ್ ಶ್ರಾಫ್ ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಗಣಪತ್- ಭಾಗ 1'. ಕ್ವೀನ್ ಖ್ಯಾತಿಯ ನಿರ್ದೇಶಕ ವಿಕಾಸ್ ಬಹ್ಲ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಕೃತಿ ಸನೋನ್ ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸಿರುವ ಚಿತ್ರತಂಡ ಇದೀಗ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದೆ.
ಹಾಲಿವುಡ್ ರೇಂಜ್ನಲ್ಲಿದೆ ಟೀಸರ್: 'ಗಣಪತ್- ಭಾಗ 1' ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಇಂದು ಬಿಡುಗಡೆಯಾಗಿರುವ ಟೀಸರ್ ಹಾಲಿವುಡ್ ರೇಂಜ್ನಲ್ಲಿದೆ. ಸಾಮಾನ್ಯವಾಗಿ ಟೈಗರ್ ಶ್ರಾಫ್ ಸಿನಿಮಾಗಳೆಂದರೆ ಅಲ್ಲಿ ಆ್ಯಕ್ಷನ್ ಸೀನ್ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿರುತ್ತಾರೆ. 'ಗಣಪತ್- ಭಾಗ 1' ಕೂಡ ಅದೇ ಹಾದಿಯಲ್ಲಿ ಸಾಗಿದೆ. ಚಿತ್ರದಲ್ಲಿನ ಆಕ್ಷನ್ ಸೀನ್ಗಳನ್ನು ಕೇವಲ ಟೀಸರ್ ಮೂಲಕವೇ ಸವಿಯುವಂತೆ ಮಾಡಿದೆ ಚಿತ್ರತಂಡ. ಅಷ್ಟೊಂದು ಅದ್ಭುತವಾಗಿ ಟೀಸರ್ ಮೂಡಿ ಬಂದಿದೆ.
ತುಣುಕು ನೋಟದ ಪ್ರತಿ ಫ್ರೇಮ್ ಕೂಡ ಆ್ಯಕ್ಷನ್ನಿಂದ ಕೂಡಿದೆ. 2070 AD ಎಂಬ ಬರಹದೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ಟೈಗರ್ ಶ್ರಾಫ್ ಮತ್ತು ಕೃತಿ ಸನೋನ್ ಆಕ್ಷನ್ ದೃಶ್ಯದೊಂದಿಗೆ ಪ್ರೇಕ್ಷಕರ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಅಮಿತಾಭ್ ಬಚ್ಚನ್ ಅವರನ್ನು ಗುರುಗಳಾಗಿ ತೋರಿಸಲಾಗಿದೆ. ಇಡೀ ಟೀಸರ್ ಹೊಚ್ಚ ಹೊಸದಾಗಿದೆ. ಇದನ್ನು ನೋಡಿದ ಮೇಲೆ ಸಿನಿಮಾ ಹೊಚ್ಚ ಹೊಸ ಕಾನ್ಸೆಪ್ಟ್ನೊಂದಿಗೆ ಬರುವುದಂತೂ ಕನ್ಫರ್ಮ್ ಆಗಿದೆ. ಇದು ಆಕ್ಷನ್ ಸಿನಿಮಾ ಪ್ರಿಯರಿಗೆ ಇಷ್ಟವಾಗುವುದಂತೂ ಪಕ್ಕಾ.