ಕರ್ನಾಟಕ

karnataka

ETV Bharat / entertainment

Kiara Advani: ನಾಳೆ ಕಿಯಾರಾ ಬರ್ತ್​​ಡೇ - ಅನಾವರಣಗೊಳ್ಳಲಿದೆ 'ಗೇಮ್​ ಚೇಂಜರ್' ಫಸ್ಟ್ ಲುಕ್​ - ಗೇಮ್​ ಚೇಂಜರ್ ಫಸ್ಟ್ ಲುಕ್​

Game Changer - Kiara Advani: ನಾಳೆ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ಜನ್ಮದಿನ ಹಿನ್ನೆಲೆ ಗೇಮ್​ ಚೇಂಜರ್ ಫಸ್ಟ್ ಲುಕ್​ ಅನಾವರಣಗೊಳ್ಳುವ ಸಾಧ್ಯತೆ ಇದೆ.

Game Changer makers likely to unveil Kiara Advani first look on her birthday
ನಾಳೆ ಗೇಮ್​ ಚೇಂಜರ್ ಫಸ್ಟ್ ಲುಕ್​ ಅನಾವರಣ

By

Published : Jul 30, 2023, 5:33 PM IST

ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ನಾಳೆ 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆ ಬಹುಬೇಡಿಕೆಯ ನಟಿಯ ಅಭಿಮಾನಿಗಳು ಅವರ ಮುಂಬರುವ ಸಿನಿಮಾ ಕುರಿತ ಅಪ್​ಡೇಟ್ಸ್​​ಗಾಗಿ ಕಾಯುತ್ತಿದ್ದಾರೆ.

ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ನಟಿಸುತ್ತಿರುವ ಮುಂಬರುವ ಬಹು ನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್‌'. ನಟಿಯ ಜನ್ಮದಿನ ಹಿನ್ನೆಲೆ, ಪ್ರೇಕ್ಷಕರು ಸಿನಿಮಾದಿಂದ ಸರ್​ಪ್ರೈಸ್​​ ನಿರೀಕ್ಷಿಸುತ್ತಿದ್ದಾರೆ. ಮಾಹಿತಿ ಪ್ರಕಾರ, ಗೇಮ್ ಚೇಂಜರ್‌ ಚಿತ್ರದಿಂದ ಕಿಯಾರಾ ಅಡ್ವಾಣಿ ಫಸ್ಟ್ ಲುಕ್​ ಅನ್ನು ನಾಳೆ ಅನಾವರಣಗೊಳಿಸಲಾಗುವುದು. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರದಿದ್ದರೂ, ಅಭಿಮಾನಿಗಳು ಸಿನಿಮಾ ಅಪ್​ಡೇಟ್ಸ್ ಸಿಗುವ ಭರವಸೆಯಲ್ಲಿದ್ದಾರೆ. ಕಿಯಾರಾ ಅಭಿಮಾನಿಗಳು, ಸಿನಿಪ್ರಿಯರು ಅಪ್​ಡೇಟ್ಸ್​ಗೆ ಕುತೂಹಲದಿಂದ ಕಾಯುತ್ತಿದ್ದಾರೆ.

ಶಂಕರ್ ಆ್ಯಕ್ಷನ್​ ಕಟ್​ ಹೇಳುತ್ತಿರುವ 'ಗೇಮ್ ಚೇಂಜರ್' ಸೆಟ್ಟೇರಿ ಬಹುಸಮಯವಾಗಿದೆ. ನಿರ್ಮಾಣ ಹಂತದಲ್ಲಿರುವ ಗೇಮ್ ಚೇಂಜರ್​ ಅಪ್​​ಡೇಟ್ಸ್​ಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಅಪ್​​ಡೇಟ್ಸ್ ವಿರಳವಾಗಿದ್ದು, ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲ ಮಾತ್ರ ಬಲವಾಗಿ ಬೆಳೆದಿದೆ. ಕಿಯಾರಾ ಅಡ್ವಾಣಿ ಫಸ್ಟ್ ಲುಕ್ ನಾಳೆ ಬಹಿರಂಗಗೊಂಡರೆ, ಅವರ ಕಟ್ಟಾ ಅಭಿಮಾನಿಗಳಿಗೆ ಬರ್ತ್ ಡೇ ಟ್ರೀಟ್ ಸಿಗೋದು ಪಕ್ಕಾ. ಕೊನೆಯ ಸಿನಿಮಾ ಸಲುವಾಗಿ ನಟಿಯ ಮೇಲೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದಾರೆ.

ಕಿಯಾರಾ ಅಡ್ವಾಣಿ ತಮ್ಮ ನಟನಾ ಕೌಶಲ್ಯದಿಂದ ಪ್ರೇಕ್ಷಕರು ಮತ್ತು ವಿಮರ್ಶಕರನ್ನು ಮೆಚ್ಚಿಸುತ್ತ ಬಂದಿದ್ದಾರೆ. ನಟಿಯ ಕೊನೆಯ ಸಿನಿಮಾ 'ಸತ್ಯಪ್ರೇಮ್ ಕಿ ಕಥಾ' ಮೆಚ್ಚುಗೆಯನ್ನು ಸ್ವೀಕರಿಸಿದೆ. ಬಹು ಬೇಡಿಕೆಯಿರುವ ನಟಿಯರ ಪೈಕಿ ಕಿಯಾರಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಜೊತೆಗೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ.

ಗೇಮ್ ಚೇಂಜರ್‌ನಲ್ಲಿ ಕಿಯಾರಾ ಆರ್​ಆರ್​ಆರ್​ ಸ್ಟಾರ್ ರಾಮ್ ಚರಣ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. 2019 ರಲ್ಲಿ ತೆರೆಕಂಡ ವಿನಯ ವಿಧೇಯ ರಾಮ ಸಿನಿಮಾದಲ್ಲಿ ಮೊದಲ ಬಾರಿ ತೆರೆ ಹಂಚಿಕೊಂಡಿದ್ದರು. ಗೇಮ್​ ಚೇಂಜರ್ ಈ ಜೋಡಿಯ ಎರಡನೇ ಸಿನಿಮಾ. ಆನ್​ ಸ್ಕ್ರೀನ್​​ನಲ್ಲಿ ಈ ಜೋಡಿಯ ಕೆಮಿಸ್ಟ್ರಿ ಅದ್ಭುತವಾಗಿದ್ದರೆ, ಆಫ್​ ಸ್ಕ್ರೀನ್​ನಲ್ಲೂ ಉತ್ತಮ ಸ್ನೇಹಿತರಾಗಿ ಮುಂದುವರಿದಿದ್ದಾರೆ.

ಇದನ್ನೂ ಓದಿ:Deepika Padukone: ಗಂಡನ ಸಿನಿಮಾ ವೀಕ್ಷಿಸಿದ ದೀಪಿಕಾ ಪಡುಕೋಣೆ; ಜಾಕೆಟ್​​ನಲ್ಲಿ ರಣ್​​​ವೀರ್​ ಭಾವಚಿತ್ರ

ಪ್ರತಿಭಾವಂತ ನಿರ್ದೇಶಕ ಶಂಕರ್ ಮತ್ತು ನಟ ರಾಮ್ ಚರಣ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಈ ಹಿಂದೆ ಕಿಯಾರಾ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದರು. ಈ ಸಿನಿಮಾ ನನಗೆ ಅಮೂಲ್ಯ ಕಲಿಕೆಯ ಅನುಭವ ನೀಡಲಿದೆ ಎಂದು ತಿಳಿಸಿದ್ದರು. ಈ ಪ್ರಾಜೆಕ್ಟ್​​ ನಟಿಗೆ ಬಹಳ ಪ್ರಮುಖವಾಗಿದೆ. ಏಕೆಂದರೆ ಇದು ನಟಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಪ್ರಾದೇಶಿಕ ಗಡಿ ಮೀರಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲಿದ್ದಾರೆ. ಇನ್ನು, ರಾಮ್ ಚರಣ್ ಸಿನಿಮಾ ಬಗ್ಗೆ ಕುತೂಹಲ, ನಿರೀಕ್ಷೆ ಬೆಟ್ಟದಷ್ಟಿದೆ. ಆರ್​ಆರ್​ಆರ್​ ಸಿನಿಮಾದ ಅದ್ಭುತ ಯಶಸ್ಸಿನ ನಂತರ ನಟಿಸುತ್ತಿರುವ ಚಿತ್ರವಿದು.

ಇದನ್ನೂ ಓದಿ:Sonu Nigam Birthday: ಗಾನ ಗಾರುಡಿಗ ಸೋನು ನಿಗಮ್‌ 50ನೇ ಬರ್ತ್‌ಡೇ; ಶುಭಾಶಯಗಳ ಮಹಾಪೂರ

ABOUT THE AUTHOR

...view details