ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ 2 ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ಖಾಸಗಿ ಹೋಟೆಲ್ನಲ್ಲಿ ಸೇರಿ ಅನುಭವ ಹಂಚಿಕೊಂಡಿತ್ತು. ಈ ವೇಳೆ ಮಾತನಾಡಿದ ಹಿರಿಯ ನಟ ಅನಂತ್ ನಾಗ್, ನಟ ಗಣೇಶ್ ಗುಣಗಾನ ಮಾಡಿದರು.
"ನನ್ನದು ಹಾಗೂ ಗಣೇಶ್ ಅವರ ಸ್ಟೈಲ್ ಆಫ್ ಆ್ಯಕ್ಟಿಂಗ್ ಒಂದೇ ರೀತಿ ಇದೆ. ಗಣೇಶ್ ಎದುರಿಗಿದ್ದರೆ ನನ್ನ ಅಭಿನಯ ಮತ್ತಷ್ಟು ಚೆನ್ನಾಗಿ ಆಗುತ್ತದೆ" ಎಂದರು. ಈ ಸಂದರ್ಭದಲ್ಲಿ ಗಣೇಶ್ ಕೂಡ ಅನಂತ್ನಾಗ್ ಮಾತುಗಳಿಗೆ ಮನಸೋತು ಅವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.