ಕರ್ನಾಟಕ

karnataka

ETV Bharat / entertainment

ತೆರೆಕಂಡ ಎರಡೇ ದಿನದಲ್ಲಿ 83 ಕೋಟಿ ರೂ. ಸಂಪಾದಿಸಿದ ಗದರ್ 2: ಓಎಂಜಿ 2 ಕಲೆಕ್ಷನ್​? - ಅಕ್ಷಯ್​​ ಕುಮಾರ್

Gadar 2 vs OMG 2: ಗದರ್ 2 ಮತ್ತು ಓಎಂಜಿ 2 ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಬಾಕ್ಸ್ ಆಫೀಸ್​ ಕಲೆಕ್ಷನ್​ ಮಾಹಿತಿ ಈ ಕೆಳಗಿನಂತಿದೆ.

gadar 2 and omg 2
ಗದರ್ 2 ಓಎಂಜಿ 2 ಕಲೆಕ್ಷನ್​

By

Published : Aug 13, 2023, 1:21 PM IST

ಬಾಲಿವುಡ್​ನ ಎರಡು ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ಚಿತ್ರಮಂದಿರಗಳಲ್ಲಿ ತೆರೆಕಂಡು, ಬಾಕ್ಸ್​ ಆಫೀಸ್​ನಲ್ಲಿ ಪೈಪೋಟಿ ಏರ್ಪಟ್ಟಿದೆ. ಎರಡೂ ಸಿನಿಮಾಗಳು ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದ್ದು, ಒಂದು ಸಿನಿಮಾದ ಕಲೆಕ್ಷನ್​ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ.

ಗದರ್ 2 VS ಓಎಂಜಿ 2:ಶುಕ್ರವಾರ ಅಂದ್ರೆ ಆಗಸ್ಟ್ 11 ರಂದು ಬಾಲಿವುಡ್​ ಕಿಲಾಡಿ ಅಕ್ಷಯ್​​ ಕುಮಾರ್​ ಮತ್ತು ಸೂಪರ್ ಸ್ಟಾರ್ ಸನ್ನಿ ಡಿಯೋಲ್​​ ಮುಖ್ಯಭೂಮಿಕೆಯ ಓ ಮೈ ಗಾಡ್​ 2, ಗದರ್​ 2 ಚಿತ್ರಗಳು ತೆರೆಕಂಡಿವೆ. ಇವರೆಡೂ ಕೂಡ ಸೂಪರ್​ ಹಿಟ್​ ಸಿನಿಮಾಗಳ ಸೀಕ್ವೆಲ್ಸ್. ಸನ್ನಿ ಡಿಯೋಲ್​ ಮತ್ತು ಅಮಿಷಾ ಪಟೇಲ್​​ ನಟನೆಯ ಗದರ್​ 2 ಮೇಲೆ ಭಾರಿ ನಿರೀಕ್ಷೆ ಹೊಂದಲಾಗಿತ್ತು. 20 ವರ್ಷಗಳ ಬಳಿಕ ಬಂದ ಸೀಕ್ವೆಲ್​ ವಿಮರ್ಷಕರು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ. ಇನ್ನು, ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​, ಪಂಕಜ್​ ತ್ರಿಪಾಠಿ, ಯಾಮಿ ಗೌತಮ್​ ಸಿನಿಮಾ ಕಥೆಗೂ ವಿಮರ್ಷಕರು, ಪ್ರೇಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಲೆಕ್ಷನ್​ ಅಂಕಿ ಅಂಶ ಉತ್ತಮವಾಗಿದೆ.

ಗದರ್ 2 ಬಾಕ್ಸ್ ಆಫೀಸ್​ ಕಲೆಕ್ಷನ್​: ಸನ್ನಿ ಡಿಯೋಲ್​ ಪ್ರಮುಖ ಪಾತ್ರದ ಗದರ್ 2 ಬಾಕ್ಸ್ ಆಫೀಸ್​ ಕಲೆಕ್ಷನ್​ ಸಂಖ್ಯೆಗೆ ಸಾಟಿ ಮತ್ತೊಂದಿಲ್ಲ. ಸಿನಿ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್ ಪ್ರಕಾರ, ಆ್ಯಕ್ಷನ್​ ಪ್ಯಾಕ್ಡ್​ ಸಿನಿಮಾ ತೆರೆಕಂಡ ಎರಡನೇ ದಿನ 42 ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ. 'ಗದರ್ 2' ಚಲನಚಿತ್ರ 2001 ರ ಬ್ಲಾಕ್​ ಬಸ್ಟರ್ 'ಗದರ್​ : ಏಕ್​ ಪ್ರೇಮ್​ ಕಥಾ ಸಿನಿಮಾ'ದ ಮುಂದುವರಿದ ಭಾಗ. ಅನಿಲ್​ ಶರ್ಮಾ ಆ್ಯಕ್ಷನ್​ ಕಟ್​ ಹೇಳಿರುವ ಗದರ್​ 2 ಸಿನಿಮಾ ಎರಡು ದಿನಗಳಲ್ಲಿ 43.10 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವಲ್ಲಿ ಯಶ ಕಂಡಿದೆ.

ಮೊದಲ ದಿನ (ಶುಕ್ರವಾರ) 40.10 ಕೋಟಿ ರೂಪಾಯಿ ಗಳಿಸಿತ್ತು. ಕಿಂಗ್​ ಖಾನ್​​ ಶಾರುಖ್​ ಅವರ ಬ್ಲಾಕ್​​ ಬಸ್ಟರ್ ಪಠಾಣ್​ ಬಳಿಕ, ಅತ್ಯುತ್ತಮ ಓಪನಿಂಗ್​ ಪಡೆದ 2023 ರ ಮತ್ತೊಂದು ಚಿತ್ರ (ಮೊದಲ ದಿನದ ಕಲೆಕ್ಷನ್​ ವಿಚಾರ) ಗದರ್ 2 ಆಗಿದೆ. ಇದರಲ್ಲಿ ಅಮಿಷಾ ಪಟೇಲ್​ ಮತ್ತು ಉತ್ಕರ್ಷ್ ಶರ್ಮಾ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗದರ್ ಮೊದಲ ಭಾಗಕ್ಕೂ ಅನಿಲ್​ ಶರ್ಮಾ ಅವರೇ ನಿರ್ದೇಶನದ ಸಾರಥ್ಯ ವಹಿಸಿದ್ದರು.

ಇದನ್ನೂ ಓದಿ:Actor Rajinikanth: ಭಾರತದಲ್ಲಿ ಜೈಲರ್​ ಅಬ್ಬರ.. ಆಧ್ಯಾತ್ಮಿಕ ಪ್ರವಾಸದಲ್ಲಿ ರಜನಿಕಾಂತ್​ ಬದ್ರಿನಾಥ್ ದೇವಸ್ಥಾನದಲ್ಲಿ ವಿಶೇಷ ಪೂಜೆ

ಓಎಂಜಿ 2 ಬಾಕ್ಸ್ ಆಫೀಸ್ ಕಲೆಕ್ಷನ್​:ಇನ್ನು ಅಕ್ಷಯ್​ ಕುಮಾರ್​ ನಟನೆಯ ಓ ಮೈ ಗಾಡ್​ ಸಿನಿಮಾ ಕೂಡ ಬಹು ನಿರೀಕ್ಷೆಗಳೊಂದಿಗೆ ತೆರೆ ಕಂಡಿತು. ಎರಡನೇ ದಿನ ಕಲೆಕ್ಷನ್​ ಸಂಖ್ಯೆ ಏರಿಕೆ ಕಂಡಿದೆ. ​​ಶುಕ್ರವಾರ ಅಂದ್ರೆ ಆಗಸ್ಟ್ 11 ರಂದು ತೆರೆಕಂಡ ಓಎಂಜಿ 2 ಎರಡು ದಿನಗಳಲ್ಲಿ ಒಟ್ಟು 25.56 ಕೋಟಿ ರೂ. ಸಂಪಾದಿಸಿದೆ. ಎರಡನೇ ದಿನದ ಕಲೆಕ್ಷನ್​ ಸಂಖ್ಯೆ 15.30 ಕೋಟಿ ರೂಪಾಯಿ. ಚಿತ್ರದಲ್ಲಿ ಯಾಮಿ ಗೌತಮ್​ ಮತ್ತು ಪಂಕಜ್​ ತ್ರಿಪಾಠಿ ಪ್ರಮುಖ ಪಾತ್ರ ವಹಿಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ. ಪಾಸಿಟಿವ್​ ಟಾಕ್​​ ಚಿತ್ರದ ಯಶಸ್ಸಿಗೆ ದಾರಿ ಮಾಡಿಕೊಟ್ಟಿದೆ. ಇಂದು ವಾರಾಂತ್ಯ ಆದ ಹಿನ್ನೆಲೆ ಕಲೆಕ್ಷನ್​​ ಸಂಖ್ಯೆ ಏರುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ:Ramya Krishnan: ರಮ್ಯಾ ಕೃಷ್ಣನ್​ ಕಾಲಿವುಡ್​ನಿಂದ ಟಾಲಿವುಡ್​ಗೆ ಜಂಪ್​.. ಕಾರಣ ಬಹಿರಂಗಪಡಿಸಿದ ಶಿವಗಾಮಿ

ABOUT THE AUTHOR

...view details