ಕರ್ನಾಟಕ

karnataka

ETV Bharat / entertainment

ಗಾಳಿಪಟ 2 ಚಿತ್ರತಂಡದಿಂದ ಬರ್ತೀದೆ ಕಿಕ್ಕೇರಿಸುವ 'ಎಣ್ಣೆ ಸಾಂಗ್' - ವಿಜಯ ಪ್ರಕಾಶ್

ಎಣ್ಣೆ ಹಾಡಿನ ಹಿಟ್​ ಜೋಡಿ ಎಂದು ಕರೆಸಿಕೊಳ್ಳುವ ಯೊಗರಾಜ್​ ಭಟ್​, ಅರ್ಜುನ್​ ಜನ್ಯ ಮತ್ತು ವಿಜಯ ಪ್ರಕಾಶ್​ ಅವರಿಂದ ಗಾಳಿಪಟ-2 ಚಿತ್ರಕ್ಕೆ ಮತ್ತೊಂದು ಎಣ್ಣೆ ಸಾಂಗ್ ತಯಾರಾಗಿದ್ದು, ಜುಲೈ 14 ರಂದು ಬಿಡುಗಡೆಯಾಗಲಿದೆ.

Gaalipata 2 film next song  release on July 14th
ಗಾಳಿಪಟ 2 ಚಿತ್ರತಂಡದಿಂದ ಬರ್ತೀದೆ ಕಿಕ್ಕೇರಿಸುವ ಎಣ್ಣೆ ಸಾಂಗ್

By

Published : Jul 12, 2022, 9:15 PM IST

ಗಾಳಿಪಟ ಸಿನಿಮಾದ ಎಲ್ಲ ಹಾಡುಗಳು ಹಿಟ್​ ಆಗಿದ್ದವು. ಈಗ ಗಾಳಿಪಟ-2 ಸಿನಿಮಾ ಬರುತ್ತಿದ್ದು ಅದರ ಹಾಡುಗಳು ಅಷ್ಟೇ ನಿರೀಕ್ಷೆ ಹುಟ್ಟಿಸಿವೆ. ಈಗಾಗಲೇ ಬಿಡುಗಡೆ ಆಗಿರುವ ರೊಮ್ಯಾಂಟಿಕ್​ 'ನಾನಾಡದ ಮಾತೆಲ್ಲವ' ಹಾಡಿಗೆ ಯೂಟ್ಯೂಬ್​ನಲ್ಲಿ 20 ಲಕ್ಷ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫಾರಿನ್ ಲೋಕೇಶನಲ್ಲಿ ಎಣ್ಣೆ ಹಾಡಿಗೆ ಸ್ಟೆಪ್​ ಹಾಕಲಿರುವ ದಿಗಿ, ಗಣಿ ಮತ್ತು ಪವನ್​

ಈಗ ಗಾಳಿಪಟ 2 ಚಿತ್ರದ ಮತ್ತೊಂದು ಎಣ್ಣೆ ಹಾಡನ್ನ ಬಿಡುಗಡೆ ಮಾಡಲಾಗುತ್ತಿದ್ದು, ಯೋಗರಾಜ್​ ಭಟ್​ ಸಾಹಿತ್ಯದಲ್ಲಿ ಈ ಹಾಡು ಹುಟ್ಟಿಕೊಂಡಿದೆ. 'ಖಾಲಿ ಕ್ವಾಟರ್​ ಬಾಟ್ಲಿ ಹಂಗೆ ಲೈಫು' ಸಾಂಗಿನ ಕಾಂಬಿನೇಷನ್​ ಇಲ್ಲಿ ಮತ್ತೆ ಒಂದಾಗಿದೆ. ಯೋಗರಾಜ್​ ಭಟ್​ ಸಾಹಿತ್ಯಕ್ಕೆ ಅರ್ಜುನ್​ ಜನ್ಯ ಸಂಗೀತ ನೀಡಿದ್ದು, ವಿಜಯ ಪ್ರಕಾಶ್​ ಧ್ವನಿಯಾಗಿದ್ದಾರೆ. ಜುಲೈ 14 ರಂದು ಆನಂದ್ ಆಡಿಯೋ ಮೂಲಕ ಗಾಳಿಪಟ-2 ಚಿತ್ರದ ಎಣ್ಣೆ ಹಾಡು ಬಿಡುಗಡೆಯಾಗಲಿದೆ. ಈ ಹಾಡಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಫಾರಿನ್ ಲೋಕೇಶನಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ.

ಜುಲೈ 14ಕ್ಕೆ ಮತ್ತೊಂದು ಹಾಡು ಬಿಡುಗಡೆ

ಇನ್ನು ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಜೋಡಿಗಳಾಗಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ಅಭಿನಯಿಸಿದ್ದಾರೆ. ಇದರ ಜೊತೆಗೆ ಅನಂತ್ ನಾಗ್, ರಂಗಾಯಣ ರಘು ಹೀಗೆ ದೊಡ್ಡ ತಾರ ಬಳಗ ಈ ಚಿತ್ರದಲ್ಲಿದೆ. ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ ಗಾಳಿಪಟ-2 ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ಎರಡು ಹಾಡುಗಳು ಈಗಾಗಲೇ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಸದ್ಯ ಬಿಡುಗಡೆ ಆಗಲಿರುವ ಎಣ್ಣೆ ಸಾಂಗ್ ಮೇಲೆ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಆಗಸ್ಟ್ 12ಕ್ಕೆ ಬಿಡುಗಡೆ ಆಗೋದಿಕ್ಕೆ ಸಜ್ಜಾಗಿರೋ ಗಾಳಿಪಟ 2 ಚಿತ್ರ, ಗಣೇಶ್ ಹಾಗು ಯೋಗರಾಜ್ ಭಟ್ ಜೋಡಿ ಮತ್ತೆ ಸಿಲ್ವರ್ ಸ್ಕ್ರೀನ್ ಮೇಲೆ ಮ್ಯಾಜಿಕ್ ಮಾಡುತ್ತಾ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ಇದನ್ನೂ ಓದಿ :ಸ್ಯಾಂಡಲ್​ವುಡ್​ನ ಮೇಕಪ್ ಮ್ಯಾನ್​​ ಈಗ ತಾಜ್​​ಮಹಲ್ 2 ಸಿನಿಮಾದ ನಾಯಕ ನಟ!

ABOUT THE AUTHOR

...view details