ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಕಂಟೆಂಟ್ ಹೊಂದಿರುವ ಸಿನಿಮಾಗಳು ನಿರ್ಮಾಣವಾಗುತ್ತಿವೆ. ವಿಭಿನ್ನ ಕಥೆಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗುತ್ತಿದೆ. ಉತ್ತಮ ಕಥಾಹಂದರದ ಜೊತೆಗೆ ಮೇಕಿಂಗ್ ವಿಷಯದಲ್ಲೂ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. 2022ರಲ್ಲಿ ಸ್ಯಾಂಡಲ್ವುಡ್ ಅದ್ಭುತ ಯಶಸ್ಸು ಸಾಧಿಸಿದ್ದು, ಅದೇ ಹಾದಿಯಲ್ಲಿ ಸಾಗಲು ಪ್ರತಿ ಚಿತ್ರತಂಡವೂ ಪೂರ್ಣ ಪ್ರಮಾಣದಲ್ಲಿ ಶ್ರಮ ಹಾಕುತ್ತಿದೆ. ಸದ್ಯ 'ಫುಲ್ ಮೀಲ್ಸ್' ಚಿತ್ರ ಕೂಡ ಅದರ ಹೊರತಾಗಿಲ್ಲ.
ಸ್ಯಾಂಡಲ್ವುಡ್ನಲ್ಲಿ 'ಸಂಕಷ್ಟಕರ ಗಣಪತಿ' ಮತ್ತು ದಿವಂಗತ ಡಾ.ಪುನೀತ್ ರಾಜ್ಕುಮಾರ್ ನಿರ್ಮಿಸಿದ್ದ 'ಫ್ಯಾಮಿಲಿ ಪ್ಯಾಕ್' ಸಿನಿಮಾಗಳ ಮೂಲಕ ಮನರಂಜಿಸಿರುವ ಲಿಖಿತ್ ಶೆಟ್ಟಿ ಹೊಸ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಫುಲ್ ಮೀಲ್ಸ್' ಎಂಬ ಟೈಟಲ್ ನೀಡಲಾಗಿದ್ದು, ಸ್ವತಃ ಅವರೇ ನಾಯಕನಾಗಿ ನಟಿಸುತ್ತಿದ್ದಾರೆ. ಸಿನಿಮಾದ ನೂತನ ಪೋಸ್ಟರ್ ಬಿಡುಗಡೆಗೊಂಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ ಸಿನಿಮಾ ಕೂಡಾ ನಿರೀಕ್ಷೆ ಹೆಚ್ಚಿಸಿದೆ.
ಫೋಟೋಗ್ರಾಫರ್ ಆದ್ರು ಲಿಖಿತ್: ಫುಲ್ ಮೀಲ್ಸ್‌ನಲ್ಲಿ ಲಿಖಿತ್ ಶೆಟ್ಟಿ ಫೋಟೋಗ್ರಾಫರ್ ಪಾತ್ರ ನಿರ್ವಹಿಸಲಿದ್ದಾರೆ. ಮದುವೆ ಮನೆಗೆ ಫೋಟೋ ತೆಗೆಯಲು ಹೋದಾಗ ಮದುಮಗಳ ಮೇಲೆಯೇ ಪ್ರೀತಿ ಆಗುತ್ತದೆ. ಆನಂತರ ಏನಾಗುತ್ತದೆ? ಎಂಬುದೇ ಕಥೆ. ಅವನ ಪ್ರೀತಿ ಅಲ್ಲಿಗೆ ಕೊನೆಗೊಳ್ಳುತ್ತಾ? ಅಥವಾ ಮದುವೆ ನಿಶ್ಚಯವಾಗಿರುವ ಹುಡುಗಿಯ ಜೊತೆಗೆ ಮದುವೆಯಾಗುತ್ತಾ? ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಫುಲ್ ಮೀಲ್ಸ್ ಚಿತ್ರ ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಅನ್ನೋದು ಚಿತ್ರತಂಡದ ಮಾತು.
ಇದನ್ನೂ ಓದಿ:ಬಾಲಿವುಡ್ ಲೈಫ್ ಅವಾರ್ಡ್ಸ್: 'ಕಾಂತಾರ' ಅತ್ಯುತ್ತಮ ಚಿತ್ರ, ರಿಷಬ್ ಶೆಟ್ಟಿ ಅತ್ಯುತ್ತಮ ನಟ