ಕನ್ನಡ ಚಿತ್ರರಂಗದಲ್ಲಿ ಸಂಕಷ್ಟ ಕರ ಗಣಪತಿ, ಪಿಆರ್ಕೆ ಪ್ರೊಡಕ್ಷನ್ಸ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರಗಳ ಮೂಲಕ ಕನ್ನಡಿಗರ ಮನೆಗೆದ್ದಿರುವ ನಟ ಲಿಖಿತ್ ಶೆಟ್ಟಿ. ತಮ್ಮ ನಟನೆ ಮೂಲಕ ಮೋಡಿ ಮಾಡಿದ್ದ ಲಿಖಿತ್ ಇದೀಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೌದು, ಲಿಖಿತ್ ಶೆಟ್ಟಿ ಅವರು ನಟನೆ ಜೊತೆ ಜೊತೆಗೆ ನಿರ್ಮಾಣಕ್ಕೂ ಮುಂದಾಗಿದ್ದಾರೆ. ನಾಯಕ ನಟರು ನಿರ್ದೇಕರಾಗಿ, ನಿರ್ಮಾಪಕರಾಗಿ ಯಶಸ್ಸು ಗಳಿಸಿರುವ ಕೆಲ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅದರಂತೆ ನಿರ್ಮಾಣಕ್ಕೆ ಇಳಿದಿರುವ ನಟ ಲಿಖಿತ್ ಶೆಟ್ಟಿ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತಾರೆಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.
'ಫುಲ್ ಮೀಲ್ಸ್'....ನಟ ಲಿಖಿತ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಚಿತ್ರವೇ 'ಫುಲ್ ಮೀಲ್ಸ್'. ಇದೊಂದು ಕಂಪ್ಲೀಟ್ ಎಂಟರ್ಟೈನ್ಮೆಂಟ್ ಸಿನಿಮಾ ಎಂದು ಶೀರ್ಷಿಕೆ ಸೂಚಿಸಿದೆ. ಈ ಚಿತ್ರದ ನಾಯಕ ನಟಿ ತೇಜಸ್ವಿನಿ ಶರ್ಮಾ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಪ್ರಮುಖ ನಟಿ ತೇಜಸ್ವಿನಿ ಶರ್ಮಾ ಅವರ ಹುಟ್ಟುಹಬ್ಬದ ಸಲುವಾಗಿ ಚಿತ್ರತಂಡ ಪ್ರಮೋಶನಲ್ ವಿಡಿಯೋ ಮತ್ತು ಬರ್ತ್ ಡೇ ಫೋಸ್ಟರ್ ಬಿಡುಗಡೆ ಮಾಡಿದೆ.
ಮೇಕಪ್ ಆರ್ಟಿಸ್ಟ್ ಪಾತ್ರದಲ್ಲಿ ತೇಜಸ್ವಿನಿ ಶರ್ಮಾ: ನಟಿ ತೇಜಸ್ವಿನಿ ಶರ್ಮಾ ಅವರು ಈ 'ಫುಲ್ ಮೀಲ್ಸ್' ಚಿತ್ರದಲ್ಲಿ ಮೇಕಪ್ ಆರ್ಟಿಸ್ಟ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮೇಕಪ್ ಆರ್ಟಿಸ್ಟ್ಗಳ ಬವಣೆಯನ್ನು ತೋರಿಸಲಿರುವ ಚಿತ್ರವಿದು. ಸಖತ್ ಮನೋರಂಜನೆಯಿಂದ ಕೂಡಿರುವ ವಿಡಿಯೋ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸ್ಪೆಷಲ್ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.