2023ರಲ್ಲಿ ಸಾಲು ಸಾಲಾಗಿ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸಿದೆ. ಈಗಾಗಲೇ ಹಲವು ಸಿನಿಮಾಗಳು ಬಿಡುಗಡೆ ಆಗಿದ್ದು, ಕೆಲ ಚಿತ್ರಗಳು ರಿಲೀಸ್ಗೆ ರೆಡಿಯಾಗಿವೆ. ಕಳೆದ ವಾರ ತೆರೆಕಂಡ ಕೆಲ ಚಿತ್ರಗಳು ಪ್ರದರ್ಶನ ಮುಂದುವರಿಸಿದ್ದು, ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕಂಗನಾ ರಣಾವತ್ ಅಭಿನಯದ ಚಂದ್ರಮುಖಿ 2, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ವ್ಯಾಕ್ಸಿನ್ ವಾರ್ ಜೊತೆಗೆ ಕಾಮಿಡಿ ಮೂವಿ ಫುಕ್ರೆ 3 ಕಳೆದ ಗುರುವಾರ ಥಿಯೇಟರ್‌ಗಳಲ್ಲಿ ಪ್ರದರ್ಶನ ಪ್ರಾರಂಭಿಸಿತು. ಚಿತ್ರಮಂದಿರಗಳಲ್ಲಿ ಈ ಸಿನಿಮಾಗಳು ಒಂದು ವಾರ ಪೂರ್ಣಗೊಳಿಸಿದ್ದು, ಪ್ರದರ್ಶನ ಮುಂದುವರಿಸಿದೆ. ಆ ಪೈಕಿ ಹಾಸ್ಯಚಿತ್ರ ಫುಕ್ರೆ 3 ಕಲೆಕ್ಷನ್ ವಿಚಾರದಲ್ಲಿ ಮುಂಚೂಣಿಯಲ್ಲಿದೆ.
ಫುಕ್ರೆ 3 ಕಲೆಕ್ಷನ್:ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಫುಕ್ರೆ 3 ತನ್ನ ಮೊದಲ ದಿನ 8.82 ಕೋಟಿ ರೂ. ಸಂಗ್ರಹಿಸುವ ಮೂಲಕ ಉತ್ತಮ ಕಲೆಕ್ಷನ್ ಅಂಕಿ ಅಂಶ ಆರಂಭಗೊಂಡಿತು. ಸಿನಿಮಾ 6ನೇ ದಿನದವರೆಗೆ ಕಲೆಕ್ಷನ್ ವಿಚಾರದಲ್ಲಿ ಉತ್ತಮ ಅಂಕಿ ಅಂಶ ಹೊಂದಿತ್ತು. ನಂತರ ಚಿತ್ರದ ಗಳಿಕೆ ಇಳಿಮುಖವಾಯಿತು. ಮೃಗ್ದೀಪ್ ಸಿಂಗ್ ಲಂಬಾ ನಿರ್ದೇಶನದ ಈ ಸಿನಿಮಾ 8ನೇ ದಿನ (ಇಂದು) 3.74 ಕೋಟಿ ರೂ. ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಹಾಗಾದಲ್ಲಿ, ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್ 66.74 ಕೋಟಿ ರೂ. ಆಗಲಿದೆ. ಉಳಿದ ಎರಡು ಚಿತ್ರಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಕಾಯ್ದುಕೊಳ್ಳುವಲ್ಲಿ ಫುಕ್ರೆ 3 ಯಶಸ್ವಿಯಾಗಿದೆ.