ಕರ್ನಾಟಕ

karnataka

ETV Bharat / entertainment

ಪ್ರಶಸ್ತಿ ಸಮಾರಂಭ: ರೆಡ್​ ಕಾರ್ಪೆಟ್​ ಮೇಲೆ ಬಾಲಿವುಡ್​ ತಾರೆಯರ ಮೋಹಕ ನೋಟ - ಈಟಿವಿ ಭಾರತ ಕನ್ನಡ

ಶುಕ್ರವಾರ ರಾತ್ರಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾನ್ವಿ ಕಪೂರ್​, ಅನನ್ಯಾ ಪಾಂಡೆ, ಕೃತಿ ಸನೋನ್​ ರೆಡ್​ಕಾರ್ಪೆಟ್​ ಮೇಲೆ ಕಂಗೊಳಿಸಿದರು.

red carpet
ಪ್ರಶಸ್ತಿ ಸಮಾರಂಭ

By

Published : Mar 25, 2023, 12:50 PM IST

ಮುಂಬೈನಲ್ಲಿ ಶುಕ್ರವಾರ ರಾತ್ರಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್​ ತಾರೆಯರು ವಿಶೇಷವಾಗಿ ಗಮನ ಸೆಳೆದರು. ಜಾನ್ವಿ ಕಪೂರ್​, ಅನನ್ಯಾ ಪಾಂಡೆ ಮತ್ತು ಕೃತಿ ಸನೋನ್​ ರೆಡ್ ​ಕಾರ್ಪೆಟ್​ ಮೇಲೆ ತಮ್ಮ ಅಂದವನ್ನು ಪ್ರದರ್ಶಿಸಿದರು. ಉಳಿದಂತೆ ಅನುಷ್ಕಾ ಶರ್ಮಾ, ಶೆಹನಾಜ್​ ಗಿಲ್​, ತೇಜಸ್ವಿ ಪ್ರಕಾಶ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಿಭಿನ್ನವಾಗಿ ಕಾಣಿಸಿಕೊಂಡರು.

ಸೀಕ್ವಿನ್​ ಗೌನ್​ ಧರಿಸಿ ಮಿಂಚಿದ ಜಾನ್ವಿ ಕಪೂರ್​ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಉಡುಗೆ ತೊಟ್ಟ ತಾರೆಯಲ್ಲಿ ಒಬ್ಬರಾಗಿ ಗಮನ ಸೆಳೆದರು. ಯಾವುದೇ ಆಭರಣ ಧರಿಸದೇ ಸರಳ ಮೇಕಪ್​ನಲ್ಲಿ ಸಹಜ ಸುಂದರಿಯಾಗಿ ಕಾಣಿಸಿಕೊಂಡರು. ಅನನ್ಯಾ ಪಾಂಡೆ ಕಪ್ಪು ಬಣ್ಣದ ಎಲಿಸಬೆಟ್ಟ ಫ್ರಾಂಚಿ ಎಂಬ ವಿಭಿನ್ನ ಗೌನ್​ ಧರಿಸಿ ಸಕತ್​ ಸ್ಟೈಲ್​ ಆಗಿ ಕಂಗೊಳಿಸಿದರು. ಕೂದಲನ್ನು ಮೇಲಕ್ಕೆ ಕಟ್ಟಿ ಲೈಟ್​ ಮೇಕಪ್​ನಲ್ಲಿ ಮುದ್ದಾಗಿ ಕಂಡರು. ಇನ್ನು ಕೃತಿ ಸನೋನ್​ ಬ್ಲೂ ಮತ್ತು ಬ್ಲ್ಯಾಕ್​ ಕಾಂಬಿನೇಷನ್​ವುಳ್ಳ ಡ್ರೆಸ್​ ಅನ್ನು ಧರಿಸಿದ್ದರು. ಕಣ್ಣಿಗೆ ದಪ್ಪನೆ ಕಾಜಲ್​ ಹಚ್ಚಿ, ರೆಡ್​ ಕಾರ್ಪೆಟ್​ ಮೇಲೆ ಮೋಹಕ ನೋಟ ಬೀರಿದರು.

ಇನ್ನು ಕಾರ್ಯಕ್ರಮದಲ್ಲಿ ಅನುಷ್ಕಾ ಶರ್ಮಾ ಬ್ಲ್ಯಾಕ್​ ಕಲರ್ ಡ್ರೆಸ್​ಗೆ ಡೈಮಂಡ್​ ಜ್ಯುವೆಲ್ಲರಿ ಧರಿಸಿ ಬ್ಯೂಟಿಫುಲ್​ ಆಗಿ ಕಾಣಿಸಿಕೊಂಡರು. ನಟಿ ತನ್ನ ಕೂದಲನ್ನು ನಯವಾಗಿ ಕಟ್ಟಿ ಲೈಟ್​ ಮೇಕಪ್​ನಲ್ಲಿ ಚಂದನೆಯ ನಗು ಬೀರಿದರು. ಇವರಲ್ಲದೇ ಶೆಹನಾಜ್ ಗಿಲ್, ತೇಜಸ್ವಿ ಪ್ರಕಾಶ್, ಮೌನಿ ರಾಯ್, ಅಮೀಶಾ ಪಟೇಲ್ ಮತ್ತು ಅನೇಕರು ಪ್ರಶಸ್ತಿ ಕಾರ್ಯಕ್ರಮಕ್ಕೆ ಸ್ಟೈಲ್ ಆಗಿ ಹಾಜರಾಗಿದ್ದರು. ಅರ್ಜುನ್ ಕಪೂರ್ ಮತ್ತು ವರುಣ್ ಧವನ್ ಕೂಡ ಈವೆಂಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಅರ್ಜುನ್ ಜೊತೆಗೆ ಮಲೈಕಾ ಅರೋರಾ ಇದ್ದರೆ, ವರುಣ್ ರೆಡ್ ಕಾರ್ಪೆಟ್ ಮೇಲೆ ಕೃತಿ ಸನೋನ್​ ಮತ್ತು ಅನುಷ್ಕಾ ಶರ್ಮಾ ಜೊತೆ ಪೋಸ್​ ನೀಡುತ್ತಿರುವುದು ಕಂಡುಬಂತು.

ಇದನ್ನೂ ಓದಿ:ಆಸ್ಕರ್​: ಬೊಮ್ಮನ್​, ಬೆಳ್ಳಿಗೆ ಇಂಡಿಗೋ ವಿಮಾನದಲ್ಲಿ ವಿಶೇಷ ಗೌರವ.. ಪ್ರಯಾಣಿಕರಿಂದ ಕರತಾಡನ

ಇನ್ನು ಅನುಷ್ಕಾ ಶರ್ಮಾ ಸೇರಿದಂತೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಕ್ರಿಕೆಟ್​ ತಾರೆಯರನ್ನು ಮದುವೆಯಾಗಿದ್ದಾರೆ. ಗುರುವಾರ ರಾತ್ರಿ ಮುಂಬೈನಲ್ಲಿ ನಾಲ್ಕನೇ ಆವೃತ್ತಿಯ ಇಂಡಿಯನ್​ ಸ್ಪೋರ್ಟ್ಸ್​ ಆನರ್ಸ್​ ಸಮಾರಂಭವು ನಡೆದಿತ್ತು. ಈ ಕಾರ್ಯಕ್ರಮದಲ್ಲಿ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್​ ಕೊಹ್ಲಿ ಹಾಗೂ ಬಾಲಿವುಡ್​ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ವಿಶೇಷವಾಗಿ ಗಮನ ಸೆಳೆದಿದ್ದರು.

ಇದನ್ನೂ ಓದಿ:ಪ್ರೇಕ್ಷಕರ ನಡುವೆ ಪ್ರಜ್ವಲ್​ ದೇವರಾಜ್​ ಅಭಿನಯದ ವೀರಂ ಚಿತ್ರದ ಟ್ರೈಲರ್​ ಬಿಡುಗಡೆ

ರೆಡ್​ ಕಾರ್ಪೆಟ್​ ಮೇಲೆ ವಿರುಷ್ಕಾ ದಂಪತಿ ಜೊತೆಯಾಗಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಪೋಸ್​ ನೀಡಿದ್ದರು. ಪಠಾಣ್​ ನಟಿ ದೀಪಿಕಾ ಪಡುಕೋಣೆ ತಂದೆ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್​ ಪಡುಕೋಣೆ ಮತ್ತು ಪತಿ, ನಟ ರಣವೀರ್​ ಸಿಂಗ್​ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಎಲ್ಲೆಡೆ ಮೆಚ್ಚುಗೆ ಗಳಿಸಿತ್ತು.

ಇದನ್ನೂ ಓದಿ:ರಾಜನೀತಿ ಬಗ್ಗೆ ಕೇಳಿ, ಪರಿಣಿತಿ ಬಗ್ಗೆ ಅಲ್ಲ: ಡೇಟಿಂಗ್ ವದಂತಿ ಬಗ್ಗೆ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಪ್ರತಿಕ್ರಿಯೆ

For All Latest Updates

ABOUT THE AUTHOR

...view details