ಬೆಂಗಳೂರು: ನಟ ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ 'ಸೂಪರ್ ಸ್ಟಾರ್' ಸಿನಿಮಾ ನಿರ್ದೇಶಕ ವೆಂಕಟೇಶ ಬಾಬು ವಿರುದ್ಧ ಚಿತ್ರದ ನಿರ್ಮಾಪಕ ಮೈಲಾರಪ್ಪ ಎಂಬುವರು ದೂರು ನೀಡಿದ್ದಾರೆ. ವಂಚನೆ ಆರೋಪದ ಮೇಲೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿನಿಮಾ ಚೆನ್ನಾಗಿ ಗಳಿಕೆ ಮಾಡಲಿದೆ ಎಂದು ನಿರ್ದೇಶಕ ವೆಂಕಟೇಶ ಬಾಬು 1.10 ಕೋಟಿ ರೂಪಾಯಿ ಹಣ ಪಡೆದಿದ್ದಾರೆ. ಬಳಿಕ ಕಲಾವಿದರಿಗೂ ಹಣ ನೀಡದೆ ಸ್ವಂತಕ್ಕೆ ಬಳಸಿಕೊಂಡು ಸಿನಿಮಾ ಪ್ರಾರಂಭಿಸಿದ್ದಾರೆ. ಇದಲ್ಲದೆ, ತಮಗೆ ಗೊತ್ತಿಲ್ಲದೆ ಸಿನಿಮಾ ಮಾಲೀಕತ್ವವನ್ನು ಬೇರೆಯವರಿಗೆ ಮಾರಿದ್ದಾರೆ ಎಂದು ದೂರಿನಲ್ಲಿ ಮೈಲಾರಪ್ಪ ಉಲ್ಲೇಖಿಸಿದ್ದಾರೆ.