ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ದಿ. ನಟ ಅಕ್ಕಿನೇನಿ ನಾಗೇಶ್ವರ್ ರಾವ್ ಅವರ 100ನೇ ಜನ್ಮ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿ ಆಚರಿಸಲಾಗಿದೆ. ಟಾಲಿವುಡ್ ನಟರಾದ ನಾಗಾರ್ಜುನ, ನಾಗಚೈತನ್ಯ, ಅಖಿಲ್ ಅಮಲ ಸೇರಿದಂತೆ ಇಡೀ ಅಕ್ಕಿನೇನಿ ಕುಟುಂಬ ಅನ್ನಪೂರ್ಣ ಸ್ಟುಡಿಯೋದಲ್ಲಿ ಸಮಾಗಮಗೊಂಡಿತ್ತು. ನಾಗೇಶ್ವರ್ ರಾವ್ ಅವರ ಪಂಚಲೋಹದ ಪ್ರತಿಮೆಯನ್ನು ಉದ್ಘಾಟಿಸಿ, ಗೌರವ ಸಲ್ಲಿಸಲಾಯಿತು..
ಕಾರ್ಯಕ್ರಮದ ಫೋಟೋ, ವಿಡಿಯೋಗಳು ವೈರಲ್: ಟಾಲಿವುಡ್ ಸ್ಟಾರ್ಸ್ ಸಾಕ್ಷಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಪಂಚಲೋಹದ ಪ್ರತಿಮೆಯನ್ನು ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಉದ್ಘಾಟಿಸಿದರು. ದಕ್ಷಿಣ ಚಿತ್ರರಂಗದ ಕಲಾವಿದರಾದ ರಾಮ್ ಚರಣ್, ಜಯಸುಧಾ, ಮೋಹನ್ ಬಾಬು, ಮಹೇಶ್ ಬಾಬು, ನಮ್ರತಾ ಶಿರೋಡ್ಕರ್ ಸೇರಿದಂತೆ ಹಲವರು ಇಂದು ನಡೆದ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಮಾರಂಭಕ್ಕೆ ಸಾಕ್ಷಿಯಾದ ಸೌತ್ ಸ್ಟಾರ್ಸ್: ಸೋಷಿಯಲ್ ಮೀಡಿಯಾ ಸುತ್ತುವರಿಯುತ್ತಿರುವ ಫೋಟೋ, ವಿಡಿಯೋಗಳಲ್ಲಿ ಆರ್ಆರ್ಆರ್ ಸ್ಟಾರ್ ರಾಮ್ಚರಣ್, ಗುಂಟೂರು ಕಾರಂ ಸಿನಿಮಾದಲ್ಲಿ ಬ್ಯುಸಿಯಾಗಿರುವ ಮಹೇಶ್ ಬಾಬು ಮತ್ತು ಮಹೇಶ್ ಪತ್ನಿ ನಮ್ರತಾ ಶಿರೋಡ್ಕರ್ ಅವರನ್ನು ಕಾಣಬಹುದು. ನಾನಿ ಮತ್ತು ಆರ್ಆರ್ಆರ್ ಖ್ಯಾತಿಯ ಎಸ್ಎಸ್ ರಾಜಮೌಳಿ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.