ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಕೆಜಿಎಫ್ ಚಾಪ್ಟರ್ 2 ಚಿತ್ರ ಅತಿದೊಡ್ಡ ಆ್ಯಕ್ಷನ್ ಎಂಟರ್‌ಟೈನರ್ ಆಗಿದೆ. 'ಕೆಜಿಎಫ್2' ಕನ್ನಡದ ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಮುಂದುವರಿದ ಭಾಗವಾಗಿದೆ. ಭಾರಿ ನಿರೀಕ್ಷೆಯ ನಡುವೆ ಇಂದು ವಿಶ್ವದಾದ್ಯಂತ 11 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಭಾರಿ ಪ್ರಮಾಣದಲ್ಲಿ ಟಿಕೆಟ್ ಬುಕ್ ಮಾಡಲಾಗಿತ್ತು. ಈ ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್‌ಗಳಿಗೆ ಮುಗಿಬಿದ್ದಿದ್ದಾರೆ.
ಬೆನಿಫಿಟ್ ಶೋ ನೋಡಿದವರು.. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಎನ್ನುತ್ತಾರೆ. ಆಕರ್ಷಕ ದೃಶ್ಯಗಳ ಜೊತೆಗೆ, ರಾಕಿಭಾಯ್ ಆಗಿ ಯಶ್-ಅಧಿರಾ ಆಗಿ ಸಂಜಯ್ ದತ್ ಆ್ಯಕ್ಷನ್ ಎಪಿಸೋಡ್‌ಗಳು ವಿಭಿನ್ನ ಮಟ್ಟದಲ್ಲಿವೆ ಎಂದು ವಿದೇಶಿ ಫ್ಯಾನ್ಗಳು ಹೇಳುತ್ತಾರೆ. ನಾಯಕನಿಗೆ ದಿಟು ಎಂಬ ಖಳನಾಯಕನ ಪಾತ್ರವಿದೆ ಎಂದು ಹೇಳಲಾಗುತ್ತದೆ. ಹಿನ್ನೆಲೆ ಸಂಗೀತವು ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಲಾಗುತ್ತದೆ.
ಓದಿ:ರಣ...ರಣ..ಧೀರ ಎನ್ನುತ್ತಾ ಬಂದ ‘ಸುಲ್ತಾನ್’: ಕೆಜಿಎಫ್-2 ಚಿತ್ರದ ಲಿರಿಕಲ್ ಸಾಂಗ್ ರಿಲೀಸ್
ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಕಣ್ಣು ಕುಕ್ಕುವ ಆ್ಯಕ್ಷನ್ ಸೀಕ್ವೆನ್ಸ್ ಬರುತ್ತದೆಯಂತೆ. ಸಿನಿಮಾವನ್ನು ವಿವರಿಸಲು ಪದಗಳೇ ಇಲ್ಲ ಎಂದು ನೆಟಿಜನ್‌ಗಳು ಹೇಳುತ್ತಾರೆ. ಪ್ರಶಾಂತ್ ನೀಲ್ ಚಿತ್ರಕಥೆ ಅದ್ಭುತವಾಗಿದೆ ಮತ್ತು ಪ್ರತಿ ದೃಶ್ಯವನ್ನು ಮಂತ್ರಮುಗ್ಧಗೊಳಿಸುತ್ತದೆ ಎಂದು ಪ್ರೇಕ್ಷಕರು ಎನ್ನುತ್ತಾರೆ. 'ಹೀರೋ ಸೆಟ್ಲ್ಮೆಂಟ್ ಮಾಸ್ ಯೂನಿವರ್ಸ್', 'ಹೀರೋ ಎಂಟ್ರಿ ಸೀನ್ ಊಹಿಸಲು ಸಾಧ್ಯವಾಗದ ಮಟ್ಟಿಗೆ ಇದೆ', 'ಇಂಟರ್ವೆಲ್ ಸೀನ್ ರೋಚಕದಿಂದ ಕೂಡಿದೆ', 'ಇತಿಹಾಸ ಸೃಷ್ಠಿಸುತ್ತದೆ', 'ಕೆಜಿಎಫ್ ಫಸ್ಟ್ಗಿಂತ ಸೂಪರ್ ಆಗಿದೆ' ಎಂದು ವಿದೇಶಿ ಪ್ರೇಕ್ಷಕರ ಪ್ರತಿಕ್ರಿಯೆ ಆಗಿದೆ. ಒಟ್ಟಿನಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಲೆಕ್ಕಾಚಾರ ಬುಡಮೇಲು ಆಗುವುದು ನಿಶ್ಚಿತ. 'ಕೆಜಿಎಫ್3' ಕೂಡ ಬರುವ ಸಾಧ್ಯತೆ ಇದೆ ಎಂದು ಅಭಿಮಾನಿಗಳ ನಿರೀಕ್ಷೆಯಾಗಿದೆ.
ಟ್ವೀಟ್ನಲ್ಲಿ ಕೆಲವರು ನೆಗೆಟಿವ್ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ದ್ವಿತೀಯಾರ್ಧದಲ್ಲಿ ಕಥೆ ಸ್ವಲ್ಪ ನಿಧಾನವಾಯಿತು ಎಂದು ಪ್ರೇಕ್ಷಕರು ಟ್ವೀಟ್ ಮಾಡುತ್ತಿದ್ದಾರೆ. ಚಿತ್ರ ವಿಶ್ಲೇಷಕ ತರುಣ್ ಆದರ್ಶ್ ಕೂಡ ಚಿತ್ರಕ್ಕೆ 5ಕ್ಕೆ 4.5 ರೇಟಿಂಗ್ ನೀಡಿ ಕೆಜಿಎಫ್ 2 ಭರ್ಜರಿ ಯಶಸ್ಸು ಕಂಡಿದೆ ಎಂದಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅದ್ಭುತ ಕಥೆಗಾರ. ಸಾಹಸ ದೃಶ್ಯಗಳನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ಒಟ್ಟಿನಲ್ಲಿ ಚಿತ್ರ ದೊಟ್ಟಮಟ್ಟದ ಎಂಟರ್‌ಟೈನರ್ ಆಗಿದೆ. ಎಲ್ಲರೂ ಈ ಚಿತ್ರವನ್ನು ನೋಡಲೇಬೇಕು. ಯಶ್ ಅವರ ಅಸಾಧಾರಣ ನಟನೆ ಮತ್ತು ಸಂಭಾಷಣೆಗಳು ಹೇರಳವಾಗಿವೆ. ಅಧಿರಾ ಸಂಜಯ್ ದತ್ ಪ್ರೇಕ್ಷಕರಿಗೆ ದೊಡ್ಡ ಹಿಟ್ ಆಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಓದಿ:ಮಲೆನಾಡಿನಲ್ಲಿ ಕೆಜಿಎಫ್ ಗೆ ಅದ್ಧೂರಿ ಸ್ವಾಗತ: ಮದುವೆ ಮರುದಿನವೇ ಚಿತ್ರ ವೀಕ್ಷಿಸಿದ ನವಜೋಡಿ
ಚಿತ್ರದಲ್ಲಿ ನಾಯಕ ಯಶ್ ಜೊತೆಗೆ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ಶ್ರೀನಿಧಿ ಶೆಟ್ಟಿ ಮತ್ತು ರಮೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾಸ್ ಎಲಿಮೆಂಟ್ಸ್‌ನೊಂದಿಗೆ ಸಾಗಿದ ತೂಫಾನ್ ಹಾಡಿನ ನಂತರ ಅಧಿರಾ ಚಿತ್ರದ ದೃಶ್ಯಗಳು ಪ್ರಾರಂಭವಾಗುತ್ತವೆ.