ಮುಂಬೈ:ಈ ವರ್ಷ ನೆಟ್‌ಫ್ಲಿಕ್ಸ್‌ನ ಜಾಗತಿಕ ಟಾಪ್ 10 ಪಟ್ಟಿಗಳಲ್ಲಿ ಐದು ಭಾರತೀಯ ಸಿನಿಮಾಗಳು ಸ್ಥಾನ ಪಡೆದುಕೊಂಡಿದೆ ಎಂದು ನೆಟ್‌ಫ್ಲಿಕ್ಸ್ ಭಾರತದ ಉಪಾಧ್ಯಕ್ಷ (ಕಂಟೆಂಟ್) ಮೋನಿಕಾ ಶೆರ್ಗಿಲ್ ಹೇಳಿದ್ದಾರೆ. ಸ್ಟ್ರೀಮಿಂಗ್ ಸೇವೆಯಲ್ಲಿ ಭಾರತೀಯ ಚಲನಚಿತ್ರಗಳ ವೀಕ್ಷಕರ ಸಂಖ್ಯೆ ಕಳೆದ ವರ್ಷಕ್ಕಿಂತ 50 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಖಾಸಗೀ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.
ನೆಟ್‌ಫ್ಲಿಕ್ಸ್‌ನ ಜಾಗತಿಕ ಟಾಪ್ 10 ಸ್ಥಾನ ಪಡೆದ ಗಂಗೂಬಾಯಿ, ಆರ್‌ಆರ್‌ಆರ್, ಭೂಲ್ ಭುಲೈಯಾ 2 - ಈಟಿವಿ ಭಾರತ್ ಕನ್ನಡ
ಭಾರತೀಯ ಐದು ಸಿನಿಮಾಗಳು ನೆಟ್‌ಫ್ಲಿಕ್ಸ್‌ನ ಜಾಗತಿಕ ಟಾಪ್ 10 ಪಟ್ಟಿಗಳಲ್ಲಿ ಸ್ಥಾನ ಪಡೆದಿವೆ ಎಂದು ನೆಟ್‌ಫ್ಲಿಕ್ಸ್ ಭಾರತದ ಉಪಾಧ್ಯಕ್ಷ (ಕಂಟೆಂಟ್) ಮೋನಿಕಾ ಶೆರ್ಗಿಲ್ ಹೇಳಿದ್ದಾರೆ.
ನೆಟ್‌ಫ್ಲಿಕ್ಸ್‌ನ ಜಾಗತಿಕ ಟಾಪ್ 10 ಸ್ಥಾನ ಪಡೆದ ಗಂಗೂಬಾಯಿ
ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಥಿಯವಾಡಿ, ರಾಜಮೌಳಿ ನಿರ್ದೇಶಿಸಿ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್ಟಿಆರ್ ನಟಿಸಿರುವ ಪ್ಯಾನ್-ಇಂಡಿಯಾ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಮತ್ತು ಕಾರ್ತಿಕ್ ಆರ್ಯನ್ ಮತ್ತು ತಬು ಅಭಿನಯದ ಭೂಲ್ ಭುಲೈಯಾ 2 ಹೆಚ್ಚಿನ ವೀಕ್ಷಣೆಯನ್ನು ಗಳಿಸಿದೆ. ನೆಟ್‌ಫ್ಲಿಕ್ಸ್‌ನ ಇಂಗ್ಲಿಷ್ ಅಲ್ಲದ ಸಿನಿಮಾಗಳು 34ವಾರಗಳ ಚಾರ್ಟ್ನಲ್ಲಿ 31 ವಾರಗಳು ಭಾರತೀಯ ಸಿನಿಮಾಗಳ ಸ್ಥಾನ ಪಡೆದು ಕೊಂಡಿದ್ದವು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ಪರಭಾಷೆಯಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡ ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾ