ಕರ್ನಾಟಕ

karnataka

ETV Bharat / entertainment

ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರ 'ಲಿಲ್ಲಿ' ಟ್ರೇಲರ್ ರಿಲೀಸ್​ - Lilly songs

ಚಿಕ್ಕ ಮಕ್ಕಳ ಪ್ಯಾನ್​ ಇಂಡಿಯಾ ಸಿನಿಮಾ ನಿರ್ಮಾಣವಾಗಿದೆ.

First pan India children movie Lilly
ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರ 'ಲಿಲ್ಲಿ'

By

Published : Mar 23, 2023, 6:39 PM IST

Updated : Mar 23, 2023, 6:45 PM IST

ಕನ್ನಡ ಚಿತ್ರರಂಗವೀಗ ಯಶಸ್ಸಿನ ಮಾರ್ಗದಲ್ಲಿದೆ. ಸ್ಯಾಂಡಲ್​ವುಡ್​ ಸಿನಿಮಾಗಳ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಇಡೀ ಭಾರತೀಯ ಚಿತ್ರರಂಗದ ಗಮನ ಸ್ಯಾಂಡಲ್​ವುಡ್​ ಮೇಲೆ ಕೇಂದ್ರೀಕೃತವಾಗಿದೆ. ಅತ್ಯುತ್ತಮ ಕಥೆ ಜೊತೆಗೆ ಅದ್ಧೂರಿ ಮೇಕಿಂಗ್​ ಗಮನ ಸೆಳೆಯುತ್ತಿದೆ. ಹೆಚ್ಚಿನ ಸಂಖ್ಯೆ ಪ್ಯಾನ್ ಇಂಡಿಯಾ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಈವರೆಗೆ ದೊಡ್ಡ ಕಲಾವಿದರ ಪ್ಯಾನ್​ ಇಂಡಿಯಾ ಚಿತ್ರಗಳು ಬರುತ್ತಿದ್ದವು. ಇದೀಗ ಚಿಕ್ಕ ಮಕ್ಕಳ ಪ್ಯಾನ್​ ಇಂಡಿಯಾ ಸಿನಿಮಾ ನಿರ್ಮಾಣವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದು ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರ.

ಲಿಲ್ಲಿ ಹಾಡು, ಟ್ರೇಲರ್, ಪೋಸ್ಟರ್ ರಿಲೀಸ್:ಕೆ. ಬಾಬು ರೆಡ್ಡಿ ಹಾಗೂ ಜಿ. ಸತೀಶ್ ಕುಮಾರ್ ನಿರ್ಮಿಸಿರುವ, ಶಿವಂ ನಿರ್ದೇಶನದ ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರ 'ಲಿಲ್ಲಿ'ಯ ಹಾಡು, ಟ್ರೇಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ನೆರವೇರಿದೆ. ಚಿತ್ರಕ್ಕೆ ನಟಿ ರಾಗಿಣಿ ದ್ವಿವೇದಿ, ಡಾ. ಮೌಲಾ ಷರೀಫ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ತೆಲುಗು ಚಿತ್ರನಟ ಶಿವಕೃಷ್ಣ ಸಾಥ್ ನೀಡಿದ್ದಾರೆ.

ಮಾನವೀಯತೆಯ ಕಥಾಹಂದರವುಳ್ಳ ಚಿತ್ರ:ಹಾಡು ಬಿಡುಗಡೆ‌ ಮಾಡಿದ ನಟಿ ರಾಗಿಣಿ ದ್ವಿವೇದಿ ಮಾತನಾಡಿ, 'ಎಲ್ಲದಕ್ಕಿಂತ ಮುಖ್ಯ ಮಾನವೀಯತೆ' ಎಂಬ ಉತ್ತಮ ಕಥಾಹಂದರ ಹೊಂದಿರುವ ಈ ಮಕ್ಕಳ ಚಿತ್ರ ದೊಡ್ಡಮಟ್ಟದ ಯಶಸ್ಸು ಕಾಣಲಿ ಎಂದು ಹಾರೈಸಿದರು. ಉಮೇಶ್ ಬಣಕಾರ್, ಮೌಲಾ ಷರೀಫ್ ಹಾಗೂ ನಟ ಶಿವಕೃಷ್ಣ ಸಹ ಚಿತ್ರತಂಡಕ್ಕೆ ಶುಭ ಕೋರಿದರು.

ಪಂಚಭಾಷೆಗಳಲ್ಲಿ ಲಿಲ್ಲಿ ತೆರೆಗೆ

ಪಂಚಭಾಷೆಗಳಲ್ಲಿ ತೆರೆಗೆ:ನಿರ್ದೇಶಕ ಶಿವಂ ಮಾತನಾಡಿ, ನಾನು ಕನ್ನಡದಲ್ಲಿ ಕೆಲ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಆದರೆ ಇದು ನಿರ್ದೇಶಕನಾಗಿ ನನ್ನ ಮೊದಲ ಚಿತ್ರ. ಮಾನವೀಯತೆಯ ಮೌಲ್ಯವನ್ನು ಸಾರುವ ಸಿನಿಮಾ ಇದು. ಯಾವುದೇ ಒಂದು ವಿಷಯವನ್ನು ಮಕ್ಕಳ ಮೂಲಕ ಹೇಳಿದಾಗ ಬೇಗ ತಲುಪುತ್ತದೆ. ಈ ಹಿಂದೆ ಮಣಿರತ್ನಂ ಸರ್ ಅವರ ಅಂಜಲಿ ಚಿತ್ರ ಎಲ್ಲರ ಮನ ಗೆದ್ದಿತ್ತು. ಈಗ ನಮ್ಮ ಲಿಲ್ಲಿ ಚಿತ್ರ ಸಹ ಮಕ್ಕಳ ಜೊತೆಗೆ ಹಿರಿಯರಿಗೂ ಇಷ್ಟವಾಗುತ್ತದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಮ್ಮ ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ. ನೋಡಿ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು.

ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರ 'ಲಿಲ್ಲಿ'

ಇದನ್ನೂ ಓದಿ:ಬಾಲಿವುಡ್​ ಕ್ವೀನ್‌ಗಿಂದು ಹುಟ್ಟುಹಬ್ಬದ ಸಂಭ್ರಮ​​: 'ನನ್ನಿಂದ ದುಃಖವಾಗಿದ್ದರೆ ಕ್ಷಮಿಸಿ'- ಕಂಗನಾ ರಣಾವತ್

ಎಲ್ಲಾ ಭಾಷೆಯವರಿಗೂ ತಲುಪಬೇಕು..ನಿರ್ಮಾಪಕ ಬಾಬು ರೆಡ್ಡಿ ಮಾತನಾಡಿ, 'ಮಕ್ಕಳ ಚಿತ್ರ ಅಂತಾ ಯಾವುದಕ್ಕೂ ಕೊರತೆ ಬಾರದ ಹಾಗೆ ಈ ಸಿನಿಮಾ ನಿರ್ಮಾಣವಾಗಬೇಕು. ಉತ್ತಮ ಕಥೆಯಿರುವ ಈ ಚಿತ್ರ ಎಲ್ಲಾ ಭಾಷೆಯ ಜನರಿಗೂ ತಲುಪಬೇಕು' ಎಂದು ನಾನು ನಿರ್ದೇಶಕರಿಗೆ ಹೇಳಿದ್ದೆ. ಅಂದುಕೊಂಡದ್ದಕ್ಕಿಂತ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು. ಚಿತ್ರದ ಪ್ರಮುಖ ಪಾತ್ರದಲ್ಲಿ ಬೇಬಿ ನೇಹಾ, ಮಾಸ್ಟರ್ ವೇದಾಂತ್ ವರ್ಮ, ಬೇಬಿ ಪ್ರಣೀತಾ ರೆಡ್ಡಿ ಹಾಗೂ ರಾಜ್ ವೀರ್ ನಟಿಸಿದ್ದಾರೆ‌.

ಇದನ್ನೂ ಓದಿ:ಸಿಹಿ ಸುದ್ದಿ ನೀಡಿದ ರಿಷಬ್ ಶೆಟ್ಟಿ: 'ಕಾಂತಾರ 2' ಸಿನಿಮಾದ ಬರವಣಿಗೆ ಪ್ರಾರಂಭ

Last Updated : Mar 23, 2023, 6:45 PM IST

ABOUT THE AUTHOR

...view details