ಚೆನ್ನೈ:ಎದೆನೋವು ಕಾಣಿಸಿಕೊಂಡ ಕಾರಣ ಹಿರಿಯ ನಟ-ರಾಜಕಾರಣಿ ಟಿ.ರಾಜೇಂದರ್ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯ ನಂತರ ಹೊಟ್ಟೆಯಲ್ಲಿ ಆಂತರಿಕ ರಕ್ತಸ್ರಾವ ಆಗುತ್ತಿರುವುದು ತಿಳಿದು ಬಂದಿದೆ. ಹೀಗಾಗಿ, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಅವರ ಮಗ ಸಿಲಂಬರಸನ್ ಟಿ ಆರ್ ತಿಳಿಸಿದ್ದಾರೆ.
ಹೊಟ್ಟೆಯಲ್ಲಿನ ಆಂತರಿಕ ರಕ್ತಸ್ರಾವದಿಂದಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿರುವ ಹಿರಿಯ ನಟ-ರಾಜಕಾರಣಿ ಟಿ.ರಾಜೇಂದರ್ ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕೊಂಡೊಯ್ಯಲಾಗುವುದು ಎಂದು ಅವರ ನಟ-ಮಗ ಸಿಲಂಬರಸನ್ ಟಿಆರ್ ಮಂಗಳವಾರ ತಿಳಿಸಿದ್ದಾರೆ.
ತಂದೆಯ ಹೊಟ್ಟೆಯಲ್ಲಿ ಆಂತರಿಕ ರಕ್ತಸ್ರಾವ ಕಂಡುಬಂದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆಯ ಸಲಹೆ ನೀಡಿದ್ದಾರೆ. ಅವರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು, ನಾವು ಅವರನ್ನು ವೈದ್ಯಕೀಯ ಪ್ರಕ್ರಿಯೆಗಾಗಿ ವಿದೇಶಕ್ಕೆ ಕರೆದೊಯ್ಯುತ್ತಿದ್ದೇವೆ. ತಂದೆಯ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತಿರುತ್ತೇನೆ ಎಂದು ಮಗ ಸಿಲಂಬರಸನ್ ಹೇಳಿದ್ದಾರೆ.