ಫಿಲ್ಮ್‌ಫೇರ್ ಅವಾರ್ಡ್ಸ್ ಕಾರ್ಯಕ್ರಮ ಹಿಂದಿ ಚಲನಚಿತ್ರೋದ್ಯಮಕ್ಕೆ ಮೀಸಲಾದ ಅತ್ಯಂತ ಹಳೆಯ ಮತ್ತು ಪ್ರಮುಖ ಚಲನಚಿತ್ರ ಸಮಾರಂಭಗಳಲ್ಲಿ ಒಂದಾಗಿದೆ. ಪ್ರಶಸ್ತಿಗಳನ್ನು ಮೊದಲು 1954 ರಲ್ಲಿ ಪರಿಚಯಿಸಲಾಯಿತು. 68ನೇ ಆವೃತ್ತಿಯ ಸಮಾರಂಭವು ಏಪ್ರಿಲ್ 27, ಗುರುವಾರದಂದು ಮುಂಬೈನಲ್ಲಿ ನಡೆಯಿತು. ಅನೇಕ ಕಲಾವಿದರು ಈ ಕಾರ್ಯಕ್ರಮದಲ್ಲಿ ಐಕಾನಿಕ್ ಬ್ಲ್ಯಾಕ್ ಲೇಡಿಯನ್ನು ಗೆಲ್ಲುವ ತಮ್ಮ ಕನಸುಗಳನ್ನು ಈಡೇರಿಸಿಕೊಂಡರು.
ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸುವುದರಿಂದ ಹಿಡಿದು ರಾಜ್‌ಕುಮಾರ್ ರಾವ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಫಿಲ್ಮ್‌ಫೇರ್ ಅವಾರ್ಡ್ಸ್ 2023 ರಲ್ಲಿ ಮುಖ್ಯವಾಗಿ ಗಂಗೂಬಾಯಿ ಕಥಿಯಾವಾಡಿ ಮತ್ತು ಬದಾಯಿ ದೋ ಸಿನಿಮಾವು ಹೆಚ್ಚು ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅದರಲ್ಲೂ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಬರೋಬ್ಬರಿ 10 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಫಿಲ್ಮ್‌ಫೇರ್ ಅವಾರ್ಡ್ಸ್ 2023 ವಿಜೇತರ ಪಟ್ಟಿ ಇಲ್ಲಿದೆ...
- ಅತ್ಯುತ್ತಮ ಸಿನಿಮಾ: ಗಂಗೂಬಾಯಿ ಕಥಿಯಾವಾಡಿ
- ಅತ್ಯುತ್ತಮ ಸಿನಿಮಾ (ವಿಮರ್ಶೆ): ಬದಾಯಿ ದೋ
- ಅತ್ಯುತ್ತಮ ನಟ: ರಾಜ್‌ಕುಮಾರ್ ರಾವ್ (ಬದಾಯಿ ದೋ)
- ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಥಿಯಾವಾಡಿ)
- ಅತ್ಯುತ್ತಮ ನಟ (ವಿಮರ್ಶೆ): ಸಂಜಯ್ ಮಿಶ್ರಾ (ವಧ್)
- ಅತ್ಯುತ್ತಮ ನಟಿ (ವಿಮರ್ಶೆ): ಭೂಮಿ ಪಡ್ನೇಕರ್ (ಬದಾಯಿ ದೋ) ಮತ್ತು ತಬು (ಭೂಲ್ ಭೂಲಿಯಾ 2)
- ಅತ್ಯುತ್ತಮ ನಿರ್ದೇಶಕ: ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಥಿಯಾವಾಡಿ)
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ: ಅನಿಲ್ ಕಪೂರ್ (ಜಗ್ ಜಗ್ ಜಿಯೋ)
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಶೀಬಾ ಚಡ್ಡಾ (ಬದಾಯಿ ದೋ)
- ಬೆಸ್ಟ್ ಮ್ಯೂಸಿಕ್ ಆಲ್ಬಮ್: ಪ್ರೀತಂ (ಬ್ರಹ್ಮಾಸ್ತ್ರ)
- ಅತ್ಯುತ್ತಮ ಸಂಭಾಷಣೆ: ಪ್ರಕಾಶ್ ಕಪಾಡಿಯಾ ಮತ್ತು ಉತ್ಕರ್ಷಿಣಿ ವಶಿಷ್ಠ (ಗಂಗೂಬಾಯಿ ಕಥಿಯಾವಾಡಿ)
- ಅತ್ಯುತ್ತಮ ಚಿತ್ರಕಥೆ: ಅಕ್ಷತ್ ಗಿಲ್ಡಿಯಾಲ್, ಸುಮನ್ ಅಧಿಕಾರಿ ಮತ್ತು ಹರ್ಷವರ್ಧನ ಕುಲಕರ್ಣಿ (ಬದಾಯಿ ದೋ)
- ಅತ್ಯುತ್ತಮ ಕಥೆ: ಅಕ್ಷತ್ ಗಿಲ್ಡಿಯಾಲ್ ಮತ್ತು ಸುಮನ್ ಅಧಿಕಾರಿ (ಬದಾಯಿ ದೋ)
- ಅತ್ಯುತ್ತಮ ಡೆಬ್ಯೂಟ್ (ನಟ): ಅಂಕುಶ್ ಗೇಡಮ್ (ಜುಂಡ್)
- ಅತ್ಯುತ್ತಮ ಡೆಬ್ಯೂಟ್ (ನಟಿ): ಆಂಡ್ರಿಯಾ ಕೆವಿಚುಸಾ (ಅನೆಕ್)
- ಅತ್ಯುತ್ತಮ ಡೆಬ್ಯೂಟ್ ನಿರ್ದೇಶಕ: ಜಸ್ಪಾಲ್ ಸಿಂಗ್ ಸಂಧು ಮತ್ತು ರಾಜೀವ್ ಬರ್ನ್ವಾಲ್ (ವಧ್)
- ಜೀವಮಾನ ಸಾಧನೆ ಪ್ರಶಸ್ತಿ: ಪ್ರೇಮ್ ಚೋಪ್ರಾ
- ಅತ್ಯುತ್ತಮ ಸಾಹಿತ್ಯ: ಅಮಿತಾಭ್ ಭಟ್ಟಾಚರ್ಯ (ಕೇಸರಿಯ ಹಾಡು, ಬ್ರಹ್ಮಾಸ್ತ್ರ-ಪಾರ್ಟ್ 1 ಶಿವ)
- ಅತ್ಯುತ್ತಮ ಹಿನ್ನೆಲೆ ಗಾಯಕ: ಬ್ರಹ್ಮಾಸ್ತ್ರದಿಂದ ಕೇಸರಿಯಾಗಾಗಿ ಅರಿಜಿತ್ ಸಿಂಗ್
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಜಗ್ ಜಗ್ ಜಿಯೋ ಚಿತ್ರದ ರಂಗೀಸಾರಿಗಾಗಿ ಕವಿತಾ ಸೇಠ್
- ಮುಂಬರುವ ಸಂಗೀತ ಪ್ರತಿಭೆಗಾಗಿ ಆರ್ಡಿ ಬರ್ಮನ್ ಪ್ರಶಸ್ತಿ: ಜಾಹ್ನವಿ ಶ್ರೀಮಾನ್ಕರ್ (ಗಂಗೂಭಾಯಿ ಕಥಿಯಾವಾಡಿಯ ಧೋಲಿಗಾಗಿ)
- ಅತ್ಯುತ್ತಮ ವಿಎಫ್ಎಕ್ಸ್: ಡಿಎನ್ಇಜಿ ಮತ್ತು ರೆಡ್ಫೈನ್ (ಬ್ರಹ್ಮಾಸ್ತ್ರ:ಪಾರ್ಟ್ 1-ಶಿವ)
- ಅತ್ಯುತ್ತಮ ಸಂಕಲನ: ನಿನಾದ್ ಖಾನೋಲ್ಕರ್ (ಆಕ್ಷನ್ ಹೀರೋ)
- ಅತ್ಯುತ್ತಮ ವಸ್ತ್ರ ವಿನ್ಯಾಸ: ಶೀತಲ್ ಶರ್ಮಾ (ಗಂಗೂಬಾಯಿ ಕಥಿಯಾವಾಡಿ)
- ಅತ್ಯುತ್ತಮ ನಿರ್ಮಾಣ ವಿನ್ಯಾಸ: ಸುಬ್ರತಾ ಚಕ್ರವರ್ತಿ ಮತ್ತು ಅಮಿತ್ ರೇ (ಗಂಗೂಬಾಯಿ ಕಥಿಯಾವಾಡಿ)
- ಅತ್ಯುತ್ತಮ ಧ್ವನಿ ವಿನ್ಯಾಸ: ಬಿಶ್ವದೀಪ್ ದೀಪಕ್ ಚಟರ್ಜಿ (ಬ್ರಹ್ಮಾಸ್ತ್ರ: ಭಾಗ 1:ಶಿವ)
- ಅತ್ಯುತ್ತಮ ಹಿನ್ನೆಲೆ ಸಂಗೀತ: ಸಂಚಿತ್ ಬಲ್ಹರಾ ಮತ್ತು ಅಂಕಿತ್ ಬಲ್ಹರಾ (ಗಂಗೂಬಾಯಿ ಕಥಿಯಾವಾಡಿ)
- ಅತ್ಯುತ್ತಮ ನೃತ್ಯ ಸಂಯೋಜನೆ: ಕೃತಿ ಮಹೇಶ್ (ಗಂಗೂಬಾಯಿ ಕಥಿಯಾವಾಡಿ)
- ಅತ್ಯುತ್ತಮ ಛಾಯಾಗ್ರಹಣ: ಸುದೀಪ್ ಚಟರ್ಜಿ (ಗಂಗೂಬಾಯಿ ಕಥಿಯಾವಾಡಿ)
- ಅತ್ಯುತ್ತಮ ಆಕ್ಷನ್: ಪರ್ವೇಜ್ ಶೇಖ್ (ವಿಕ್ರಮ್ ವೇದಾ)
2023ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಕಾರ್ಯಕ್ರಮವನ್ನು ಸೂಪರ್‌ಸ್ಟಾರ್ ಸಲ್ಮಾನ್ ಖಾನ್, ಮನೀಶ್ ಪಾಲ್ ಮತ್ತು ಆಯುಷ್ಮಾನ್ ಖುರಾನಾ ನಡೆಸಿಕೊಟ್ಟರು.
ಇದನ್ನೂ ಓದಿ:ಸೆಲೆಬ್ರಿಟಿಗಳಿಗಾಗಿ 'ರಾಘವೇಂದ್ರ ಸ್ಟೋರ್ಸ್' ಸ್ಪೆಷಲ್ ಶೋ: ಕನ್ನಡ ತಾರೆಯರಿಂದ ಮೆಚ್ಚುಗೆಯ ಸುರಿ ಮಳೆ