ಕರ್ನಾಟಕ

karnataka

ETV Bharat / entertainment

ಹಿಂದಿ ಬಿಗ್ ಬಾಸ್ 16: ಶುಕ್ರವಾರದ ವಿಶೇಷ ಸಂಚಿಕೆಗೆ ಕರಣ್ ಜೋಹರ್ ನಿರೂಪಣೆ - ಕರಣ್ ಜೋಹರ್

ಹಿಂದಿ 'ಬಿಗ್ ಬಾಸ್ 16'ರ ಶುಕ್ರವಾರದ ವಿಶೇಷ ಸಂಚಿಕೆಯನ್ನು ಕರಣ್ ಜೋಹರ್ ನಿರೂಪಿಸಲಿದ್ದಾರೆ.

film maker Karan Johar
ಬಾಲಿವುಡ್​ನ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್

By

Published : Oct 20, 2022, 5:31 PM IST

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬದಲಿಗೆ 'ಬಿಗ್ ಬಾಸ್ 16'ರ ಶುಕ್ರವಾರದ ವಿಶೇಷ ಸಂಚಿಕೆಯನ್ನು ಬಾಲಿವುಡ್​ನ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಹೋಸ್ಟ್ ಮಾಡಲಿದ್ದಾರೆ.

ಶನಿವಾರದ ವೀಕೆಂಡ್ ಕ ವಾರ್ ಸಂಚಿಕೆಯಲ್ಲಿ ಸಲ್ಮಾನ್ ಕಾಣಿಸಿಕೊಳ್ಳುವರು. ಆದರೆ, ಶುಕ್ರವಾರದ ಸಂಚಿಕೆಯನ್ನು ಕರಣ್​ ನಿರ್ವಹಿಸಲಿದ್ದಾರೆ. ಕರಣ್ 'ಬಿಗ್ ಬಾಸ್ OTT' ಶೋ ಸಹ ಹೋಸ್ಟ್ ಮಾಡಿದ್ದರು. ನಾಳೆ ಅವರು ಸ್ಪರ್ಧಿಗಳೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಮತ್ತು ಶೋನಲ್ಲಿ ಸ್ಪರ್ಧಿಗಳನ್ನು ಹೇಗೆ ಹುರಿದುಂಬಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಸುಂಬುಲ್ ತೌಕೀರ್ ಖಾನ್, ಮಾನ್ಯ ಸಿಂಗ್ ಮತ್ತು ಶಾಲಿನ್ ಭಾನೋಟ್ ಈ ವಾರ ನಾಮಿನೇಟ್ ಆದ ಸ್ಪರ್ಧಿಗಳು. ವೀಕೆಂಡ್ ಕ ವಾರ್ ಸಂಚಿಕೆಯಲ್ಲಿ ಸಲ್ಮಾನ್ ಸ್ಪರ್ಧಿಗಳೊಂದಿಗೆ ಟಾಸ್ಕ್ ಕುರಿತು ಚರ್ಚಿಸುತ್ತಾರೆ. ಆಟ ಮತ್ತು ಮನೆಯವರೊಂದಿಗೆ ಇರುವ ರೀತಿ ಕುರಿತು ಮಾರ್ಗದರ್ಶನ ನೀಡುತ್ತಾರೆ. ಅಗತ್ಯವಿದ್ದಾಗ ಸ್ಪರ್ಧಿಗಳನ್ನು ತರಾಟೆಗೂ ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ:ದೇವರನಾಡಿನಲ್ಲಿ ಪಂಜುರ್ಲಿ ಅಬ್ಬರ.. ಮಲೆಯಾಳಂನಲ್ಲಿ ಕಾಂತಾರ ರಿಲೀಸ್​​

ABOUT THE AUTHOR

...view details