ಕರ್ನಾಟಕ

karnataka

ETV Bharat / entertainment

ಟ್ವಿಟರ್​​ನಿಂದ ಹೊರ ನಡೆದ ಚಲನಚಿತ್ರ ನಿರ್ಮಾಪಕ ಕರಣ್​ ಜೋಹರ್ - karan johar twitter

ಅನೇಕ ಹಿಟ್​ ಸಿನಿಮಾಗಳನ್ನು ಕೊಟ್ಟ ಖ್ಯಾತಿ ಹೊಂದಿರುವ ನಿರ್ಮಾಪಕ ಕರಣ್​ ಜೋಹರ್ ನಿನ್ನೆ ಟ್ವಿಟರ್​ ಖಾತೆಯಿಂದ ಹೊರ ನಡೆದಿದ್ದಾರೆ.

film maker karan johar quits twitter
ಟ್ವಿಟರ್​​ನಿಂದ ಹೊರ ನಡೆದ ಚಲನಚಿತ್ರ ನಿರ್ಮಾಪಕ ಕರಣ್​ ಜೋಹರ್

By

Published : Oct 11, 2022, 3:48 PM IST

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್​ ಜೋಹರ್ ನಿನ್ನೆ ಟ್ವಿಟರ್​ ಖಾತೆಯಿಂದ ಹೊರನಡೆದಿದ್ದಾರೆ.

ಸೆಲೆಬ್ರಿಟಿಗಳ ಪಾಲಿಗೆ ಸೋಷಿಯಲ್​ ಮೀಡಿಯಾ ಒಂದು ದೊಡ್ಡ ಮಾಧ್ಯಮ. ತಮ್ಮ ಸಿನಿಮಾಗಳ ಪ್ರಚಾರಕ್ಕೆ ಈ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಅದರಲ್ಲೂ ನಿರ್ದೇಶಕ ಕರಣ್​ ಜೋಹರ್ ಸೋಷಿಯಲ್​ ಮೀಡಿಯಾ ಬಳಕೆದಾರರಲ್ಲಿ ಅಗ್ರಸ್ಥಾನದಲ್ಲಿದ್ದವರು. ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದವರು. ಅನೇಕ ಕಲಾವಿದರಿಗೆ ಅವರೇ ಗಾಡ್​ ಫಾದರ್​. ಅನೇಕ ಹಿಟ್​ ಸಿನಿಮಾಗಳನ್ನು ಕೊಟ್ಟ ಖ್ಯಾತಿ ಹೊಂದಿದವರು. ಆದರೆ, ಏಕಾಏಕಿ ಟ್ವಿಟರ್​ ಖಾತೆಯಿಂದ ಹೊರನಡೆದಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ಗೆ ಎಂಟ್ರಿ ಕೊಡ್ತಿದ್ದಾರೆ ಶಿಖರ್​ ಧವನ್​.. ಗಬ್ಬರ್​ ಜೊತೆ ಹೆಜ್ಜೆ ಹಾಕಿದ ಆ ದಪ್ಪ ನಟಿ ಯಾರು!?

ಈ ಬಗ್ಗೆ ಅವರು ಪೋಸ್ಟ್​ ಮಾಡಿ ತಿಳಿಸಿದ್ದು,​ ಅವರ ಈ ನಿರ್ಧಾರದಿಂದ ಅನೇಕರಿಗೆ ಅಚ್ಚರಿ ಆಗಿದೆ. ನೆಗೆಟಿವಿಟಿಯಿಂದ ದೂರ ಇರಬೇಕು ಎಂಬ ಕಾರಣಕ್ಕಾಗಿ ಅವರು ಈ ರೀತಿ ಮಾಡುತ್ತಿದ್ದಾರೆ. ಮತ್ತೆ ಯಾವಾಗ ಅವರು ಟ್ವಿಟರ್​ಗೆ ಮರಳುತ್ತಾರೋ ಎಂಬ ಪ್ರಶ್ನೆ ಎದ್ದಿದೆ. 'ಧನಾತ್ಮಕ​ ಶಕ್ತಿಗಳಿಗೆ ಜಾಗ ಮಾಡಿಕೊಡುವ ಸಲುವಾಗಿ ಮೊದಲ ಹೆಜ್ಜೆ ಇಟ್ಟಿದ್ದೇನೆ. ಟ್ವಿಟರ್​ಗೆ ವಿದಾಯ' ಎಂದು ನಿರ್ಮಾಪಕ ಕರಣ್​ ಜೋಹರ್ ಅವರು ಪೋಸ್ಟ್​ ಮಾಡಿದ್ದಾರೆ. ಈ ಬಗ್ಗೆ ಜನರು ಬಗೆಬಗೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.

ABOUT THE AUTHOR

...view details