ಖ್ಯಾತ ತಮಿಳು ಚಲನಚಿತ್ರ ವಿಮರ್ಶಕ ಕೌಶಿಕ್ ನಿಧನ ಹೊಂದಿದ್ದಾರೆ. ಕೌಶಿಕ್ ಎಲ್ಎಂ ಸೋಮವಾರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
ಖ್ಯಾತ ಚಲನಚಿತ್ರ ವಿಮರ್ಶಕ, ಚಲನಚಿತ್ರ ಟ್ರ್ಯಾಕರ್, ಮತ್ತು ಗಲಟ್ಟಾ ವಿಜೆ @LMKMovieManiac ಹೃದಯಾಘಾತದಿಂದ ನಿಧನರಾದರು. ಮೃತ ಕೌಶಿಕ್ ಎಲ್ಎಂ ಕಂಪನಿಯ ವಿಜೆ ಆಗಿ ಕೆಲಸ ಮಾಡಿದ್ದರು. ಈ ದುರದೃಷ್ಟಕರ ಸುದ್ದಿ ತಿಳಿದ ನಂತರ ದುಲ್ಕರ್ ಸಲ್ಮಾನ್ ಮತ್ತು ಕೀರ್ತಿ ಸುರೇಶ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ.
ಈ ಸುದ್ದಿ ತುಂಬಾ ಆಘಾತಕಾರಿಯಾಗಿದೆ. ಎರಡು ದಿನಗಳ ಹಿಂದಷ್ಟೇ ಮಾಧ್ಯಮಗೋಷ್ಟಿಯಲ್ಲಿ ಕೌಶಿಕ್ ಅವರನ್ನು ಭೇಟಿಯಾಗಿದ್ದೆವು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ, ಸಂತಾಪ ಎಂದು ನಟ ಕಾರ್ತಿ ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ತಿಳಿದ ನಂತರ ನನಗೆ ಮಾತೇ ಹೊರಡುತ್ತಿಲ್ಲ, ಇದು ನಂಬಲಸಾಧ್ಯ! ಈ ಸಾವಿಗೆ ನನ್ನ ತೀವ್ರ ಸಂತಾಪ, ಕೌಶಿಕ್ ಇಲ್ಲ ಎಂಬುದನ್ನು ನಂಬಲು ಈಗಲೂ ಸಾಧ್ಯವಾಗುತ್ತಿಲ್ಲ, ಆರ್ಐಪಿ ಕೌಶಿಕ್ ಎಂದು ನಟಿ ಕೀರ್ತಿ ಸುರೇಶ್ ಬರೆದಿದ್ದಾರೆ. ನಟ ವಿಜಯ್ ದೇವರಕೊಂಡ ಸಹ ಕೌಶಿಕ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಿಮ್ಮ ಬಗ್ಗೆಯೇ ಯೋಚಿಸುತ್ತಿದ್ದೇವೆ, ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಎರಡನೇ ಮಗುವಿನ ನಿರೀಕ್ಷೆಯಲ್ಲಿ ಗುರ್ಮೀತ್ ಚೌಧರಿ ಡೆಬಿನಾ ಬೊನ್ನರ್ಜಿ ದಂಪತಿ
ಇದು ನಿಜಕ್ಕೂ ಹೃದಯ ವಿದ್ರಾವಕ. ಇದು ನಿಜವಾಗಬಾರದೆಂದು ನಾನು ಬಯಸುತ್ತೇನೆ. ನಿಮ್ಮ ಕುಟುಂಬಕ್ಕೆ ಏನಾಗುತ್ತಿದೆ ಎಂದು ನಾನು ಊಹಿಸಲು ಸಹ ಸಾಧ್ಯವಿಲ್ಲ. ಕೌಶಿಕ್, ನಾವು ಪರಸ್ಪರ ಹೆಚ್ಚಾಗಿ ಟ್ವಿಟರ್ ಮತ್ತು ಕೆಲವು ವೈಯಕ್ತಿಕ ಸಂವಹನಗಳ ಮೂಲಕ ತಿಳಿದಿರುತ್ತೇವೆ. ನೀವು ಯಾವಾಗಲೂ ನನಗೆ ತುಂಬಾ ಪ್ರೀತಿ ಮತ್ತು ಬೆಂಬಲವನ್ನು ತೋರಿಸಿದ್ದೀರಿ ಎಂದು ದುಲ್ಕರ್ ಸಲ್ಮಾನ್ ಟ್ವೀಟ್ ಮಾಡಿದ್ದಾರೆ.