ಕರ್ನಾಟಕ

karnataka

ETV Bharat / entertainment

ಸಲ್ಮಾನ್​ ಖಾನ್​​ ಕೈಗೆ ಮುತ್ತಿಕ್ಕಿದ ಮಹಿಳಾ ಅಭಿಮಾನಿ: ವಿಡಿಯೋ ವೈರಲ್ - Salman khan video

ನಟ ಸಲ್ಮಾನ್ ಖಾನ್ ಅವರಿಗೆ ಮಹಿಳಾ ಅಭಿಮಾನಿ ಮುತ್ತಿಟ್ಟಿದ್ದು, ವಿಡಿಯೋ ವೈರಲ್ ಆಗುತ್ತಿದೆ.

female fan kisses Salman khan
ಸಲ್ಮಾನ್​ಗೆ ಮಹಿಳಾ ಅಭಿಮಾನಿಯಿಂದ ಕಿಸ್

By ETV Bharat Karnataka Team

Published : Dec 22, 2023, 5:47 PM IST

ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಆನಂದ್ ಪಂಡಿತ್ ಗುರುವಾರ 60ನೇ ಜನ್ಮದಿನ ಆಚರಿಸಿಕೊಂಡರು. ಸಂಜೆ ಮುಂಬೈನಲ್ಲಿ ತಾರೆಯರಿಗಾಗಿ ಗ್ರ್ಯಾಂಡ್​​ ಬರ್ತ್ ಡೇ ಪಾರ್ಟಿ ಆಯೋಜಿಸಿದ್ದರು. ಶಾರುಖ್ ಖಾನ್, ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್, ಸಲ್ಮಾನ್​ ಖಾನ್​, ಜಾಕಿ ಶ್ರಾಫ್, ಟೈಗರ್ ಶ್ರಾಫ್, ಕಾರ್ತಿಕ್ ಆರ್ಯನ್, ಹೃತಿಕ್ ರೋಷನ್ ಸೇರಿ ಹಲವರು ಸಮಾರಂಭಕ್ಕೆ ಆಗಮಿಸಿದ್ದರು. ಈವೆಂಟ್​ನ ಹಲವು ವಿಡಿಯೋ ಹಾಗು ಫೋಟೋಗಳು ವೈರಲ್​ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಸಲ್ಮಾನ್​​ ಖಾನ್​ಗೆ ಸಂಬಂಧಿಸಿದ ವಿಡಿಯೋಗಳು ಸಖತ್​ ಸದ್ದು ಮಾಡುತ್ತಿದೆ.

ಪಾರ್ಟಿ ನಡೆದ ಸ್ಥಳದ ಹೊರಗೆ ಸಲ್ಮಾನ್ ಕಾಣಿಸಿಕೊಂಡರು. ಎಂದಿನಂತೆ ತಮ್ಮ ಮೆಚ್ಚಿನ ನಟನೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಸಲ್ಮಾನ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಲು ಅವರ ಕಾರಿನ ಬಳಿ ಮಹಿಳೆ ಮತ್ತು ಮಕ್ಕಳು ಆಗಮಿಸಿದ್ದು, ನಟ ನಮ್ರತೆಯಿಂದ ಪ್ರತಿಕ್ರಿಯಿಸಿದರು.

ಕಿಸ್: 'ಭಾಯಿಜಾನ್' ತಮ್ಮ ಕಾರಿನ ಬಳಿ ಇದ್ದರು. ಸುತ್ತಲೂ ಭದ್ರತೆಯೂ ಇತ್ತು. ಅವರನ್ನು ನೋಡಿದ ಮಹಿಳಾ ಅಭಿಮಾನಿಗೆ ಸಂತಸ ನಿಯಂತ್ರಿಸಲಾಗಿಲ್ಲ. ಜೋರಾಗಿ ಸಲ್ಮಾನ್​ ಹೆಸರು ಹೇಳುತ್ತಾ ಸಮೀಪ ಬಂದರು. ಆಕೆ ತನ್ನ ನೆಚ್ಚಿನ ನಟನೊಂದಿಗೆ ಫೊಟೋ ಕ್ಲಿಕ್ಕಿಸಿಕೊಳ್ಳಲು ಹಾತೊರೆಯುತ್ತಿದ್ದರು. ಸಲ್ಮಾನ್​ ಫೋಟೋಗೆ ಪೋಸ್ ನೀಡಿದರು. ಫೋಟೋ ಕ್ಲಿಕ್ಕಿಸಿಕೊಂಡ ಮಹಿಳೆ ಸಲ್ಮಾನ್ ಕೈಗೆ ಮುತ್ತಿಟ್ಟಿದ್ದಾರೆ. ಇದಾದ ನಂತರ ಮತ್ತೊಬ್ಬ ಮಹಿಳಾ ಅಭಿಮಾನಿ ಮಕ್ಕಳೊಂದಿಗೆ ಬಂದು ಸೆಲ್ಫಿ ತೆಗೆದುಕೊಂಡರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಯೋರ್ವ ಸಲ್ಮಾನ್ ಖಾನ್ ಅವರನ್ನು 'ಪ್ರೀತಿಪಾತ್ರ ವ್ಯಕ್ತಿ' ಎಂದು ಕರೆದರೆ, ಮತ್ತೊಬ್ಬರು ನಟನ ನಡೆಗೆ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:ಪಠಾಣ್​, ಜವಾನ್​​, ಲಿಯೋ.. 2023ರ ಹಿಟ್​ ಸಿನಿಮಾಗಳ ದಾಖಲೆ ಪುಡಿಗಟ್ಟಲಿದೆ 'ಸಲಾರ್​'!

ಸಲ್ಮಾನ್​ ಖಾನ್​ ಕೊನೆಯದಾಗಿ ಟೈಗರ್ 3 ಸಿನಿಮಾದಲ್ಲಿ ಕಾಣಿಸಿಕೊಂಡರು. ಕತ್ರಿನಾ ಕೈಫ್​ ಜೊತೆ ತೆರೆ ಹಂಚಿಕೊಂಡ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 450 ಕೋಟಿ ರೂಪಾಯಿಗೂ ಹೆಚ್ಚು ವ್ಯವಹಾರ ನಡೆಸಿದೆ. ಸಲ್ಮಾನ್ ಡಿಸೆಂಬರ್ 27ರಂದು ತಮ್ಮ 58ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ'ಯಲ್ಲಿ ದೀಕ್ಷಿತ್ ಶೆಟ್ಟಿ; ಹಾಸ್ಯಪ್ರಧಾನ ಸಿನಿಮಾದಲ್ಲಿ 'ದಿಯಾ' ನಟ

ಇದಲ್ಲದೇ ಸಲ್ಮಾನ್​ ಖಾನ್​ಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಕೂಡ ಸದ್ದು ಮಾಡುತ್ತಿದೆ. ಇದೇ ಈವೆಂಟ್​ನಲ್ಲಿ ಹಿರಿಯ ನಟ ಅಮಿತಾಭ್​ ಬಚ್ಚನ್​, ಪುತ್ರ ಅಭಿಷೇಕ್​ ಬಚ್ಚನ್​​​ ಅವರನ್ನು ಸಲ್ಮಾನ್​ ಅಪ್ಪಿಕೊಂಡಿದ್ದು, ವಿಡಿಯೋ ವೈರಲ್​ ಆಗಿದೆ. ಐಶ್ವರ್ಯಾ ರೈ ಅವರ ಹೆಸರು ತೆಗೆದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ. ​​

ABOUT THE AUTHOR

...view details