ಕರ್ನಾಟಕ

karnataka

ETV Bharat / entertainment

ನಟ ಶಾರುಖ್​ ಖಾನ್​ಗೆ ಮುತ್ತಿಟ್ಟ ಮಹಿಳಾ ಅಭಿಮಾನಿ: ವಿಡಿಯೋ ವೈರಲ್, ನೆಟಿಜನ್ಸ್​ ಅಸಾಮಾಧಾನ - ಬಾಲಿವುಡ್​ ಸೂಪರ್​​ಸ್ಟಾರ್​

ಮಹಿಳಾ ಅಭಿಮಾನಿಯೊಬ್ಬರು ನಟ ಶಾರುಖ್​ ಖಾನ್​ಗೆ ಮುತ್ತಿಟ್ಟ ವಿಡಿಯೋವನ್ನು ರೆಡ್ಡಿಟ್‌ನಲ್ಲಿ ಕಾರ್ಯಕ್ರಮ ಆಯೋಜಕರು ಹಂಚಿಕೊಂಡಿದ್ದಾರೆ.

Female fan kisses actor Shah Rukh Khan
ನಟ ಶಾರುಖ್​ ಖಾನ್​ಗೆ ಮುತ್ತಿಟ್ಟ ಮಹಿಳಾ ಅಭಿಮಾನಿ

By

Published : Jun 14, 2023, 3:57 PM IST

ದುಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಲಿವುಡ್​ ಸೂಪರ್​​ಸ್ಟಾರ್​ ಶಾರುಖ್​ ಖಾನ್​ ಅವರಿಗೆ ಮಹಿಳಾ ಅಭಿಮಾನಿಯೊಬ್ಬರು ಕಿಸ್​ ಮಾಡಿರುವ ಘಟನೆ ನಡೆದಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಮಂಗಳವಾರ ದುಬೈನಲ್ಲಿ ತಮ್ಮ ಸ್ನೇಹಿತರೊಬ್ಬರ ಒಡೆತನದ ರಿಯಲ್ ಎಸ್ಟೇಟ್ ಬ್ರಾಂಡ್‌ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್​ ಬಾದ್​ಶಾ​ ಶಾರುಖ್​ ಖಾನ್​ ಭಾಗವಹಿದ್ದರು. ಅಲ್ಲಿ ಕೆಲವು ಅತಿಥಿಗಳು ಸೇರಿದಂತೆ ಶಾರುಖ್​ ಖಾನ್​ ಅಭಿಮಾನಿಗಳು ಕೂಡ ಸೇರಿದ್ದರು.

ಅಭಿಮಾನಿಗಳ ಜೊತೆ ಮಾತುಕತೆ, ಸೆಲ್ಫಿ ವೇಳೆಯಲ್ಲಿ ಅನಿರೀಕ್ಷಿತವಾಗಿ ಮಹಿಳಾ ಅಭಿಮಾನಿಯೊಬ್ಬರು, ಅತಿಯಾದ ಖುಷಿಯಿಂದ ನಟ ಶಾರುಖ್​ ಖಾನ್​ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಈ ಘಟನೆ ನಟ ಶಾರುಖ್​ ಖಾನ್​ ಅವರಿಗೆ ಇರಿಸುಮುರುಸಾಗಿದೆ. ರೆಡ್ಡಿಟ್​ ತಾಣದಲ್ಲಿ ಈವೆಂಟ್​ ಆಯೋಜಕರು ಅಪ್​ಲೋಡ್​ ಮಾಡಿದ್ದು, ಆ ವಿಡಿಯೋದಲ್ಲಿ ನಟ ಶಾರುಖ್​ ಅವರು ತಮ್ಮ ಮ್ಯಾನೇಜರ್​ ಪೂಜಾ ದದ್ಲಾನಿ ಹಾಗೂ ಭದ್ರತಾ ಸಿಬ್ಬಂದಿ ಜೊತೆ ಬ್ಯಾಕ್​ ಸ್ಟೇಜ್​ ಗೆ ಹೋಗುತ್ತಿರುವುದನ್ನು ನೋಡಬಹುದು.

ಅದಲ್ಲದೆ ಒಬ್ಬ ವ್ಯಕ್ತಿ ಶಾರುಖ್​ ಖಾನ್​ ಅವರನ್ನು ಹಿಂಬಾಲಿಸುತ್ತ ಹೋಗಿ, ನಟನ ಕೈ ಕುಲುಕಿ, ಕೈಗೆ ಮುತ್ತಿಟ್ಟು ನಂತರ ತಬ್ಬಿಕೊಳ್ಳುತ್ತಾನೆ. ಆಗ ಕಪ್ಪು ವಸ್ತ್ರ ಧರಿಸಿದ ಮಹಿಳೆಯೊಬ್ಬರು ಕಿಂಗ್​ ಖಾನ್​ ಬಳಿ ಬಂದು, ನಾನು ನಿಮಗೆ ಮುತ್ತು ಕೊಡಬಹುದೇ? ಎಂದು ಪ್ರಶ್ನಿಸುತ್ತಾರೆ. ಆದರೆ ಶಾರುಖ್​ ಆಪ್ರಶ್ನೆಗೆ ಪ್ರತಿಕ್ರಿಯೆ ನೀಡುವ ಮೊದಲೇ ಆ ಮಹಿಳೆ ಶಾರುಖ್​ ಕೆನ್ನೆಗೆ ಮುತ್ತು ಕೊಟ್ಟಿರುವುದು ವಿಡಿಯೋದಲ್ಲಿದೆ. ವಿಡಿಯೋದಲ್ಲಿ ಮಹಿಳೆ ಮುತ್ತು ಕೊಡುತ್ತಿರುವಾಗ ಶಾರುಖ್​ ಖಾನ್​ ಅವರು ಕಣ್ಣು ಮುಚ್ಚಿ ನಗುತ್ತಿರುವುದನ್ನು ಕಾಣಬಹುದು. ನಂತರ ಆ ಮಹಿಳೆ ತಾನು ಮಾಡಿದರ ಬಗ್ಗೆ ಮೆಲುಕು ಹಾಕುತ್ತಾ ಸಂತೋಷದಿಂದ ನಗುತ್ತಾ ಹೊರಟು ಹೋಗುತ್ತಾರೆ.

ಮಹಿಳೆಗೆ ತನ್ನ ಫೇವರಿಟ್​ ಆ್ಯಕ್ಟರ್​ಗೆ ಮುತ್ತು ಕೊಟ್ಟ ಖುಷಿಯಾಗಿದ್ದರೆ, ಇತ್ತ ಕಡೆ ರೆಡ್ಡಿಟರ್​ಗಳು ಇದು ಅಸಮರ್ಪಕ ವರ್ತನೆ ಎಂದು ಕಮೆಂಟ್​ ಮಾಡಿದ್ದಾರೆ. ಒಬ್ಬ ವ್ಯಕ್ತಿ, "ಜೈಲ್ ಮಿ ದಾಲೋ ಲಡ್ಕಿ ಕೋ (ಹುಡುಗಿಯನ್ನು ಜೈಲಿಗೆ ಹಾಕಿ)." ಬರೆದಿದ್ದಾರೆ. "ಮಧ್ಯವಯಸ್ಸಿನ ಸಣ್ಣ ಹುಡುಗ ಮಾಧುರಿ ಅಥವಾ ಬೇರೆ ಹೀರೋಯಿನ್​ ಜೊತೆ ಅದೇ ಕೆಲಸವನ್ನು ಮಾಡಲು ಸಾಧ್ಯನಾ, ಒಂದು ವೇಳೆ ಮಾಡಿದರೂ ಅದನ್ನು ಒಪ್ಪುತ್ತಾರಾ? ನೋಡೋಣ" ಎಂದು ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ.

1988 ರಿಂದ ಲಕ್ಷಾಂತರ ಜನರನ್ನು ರಂಜಿಸುತ್ತ ಬರುತ್ತಿರುವ ಕಿಂಗ್​ ಖಾನ್​ ತಮ್ಮದೇ ಒಂದು ಸ್ಥಾನವನ್ನು ರೂಪಿಸಿಕೊಂಡಿದ್ದಾರೆ. ಎಸ್‌ಆರ್‌ಕೆ ಗೆ ಅಭಿಮಾನಿಗಳ ಬಳಗವೇ ಇದೆ. ಶಾರುಖ್​ ಖಾನ್​ ಸಿನಿಮಾಗಳನ್ನು ನೋಡುವುದಾದರೆ, ಕಾಲಿವುಡ್​ ನಿರ್ದೇಶಕ ಅಟ್ಲೀ ಕುಮಾರ್​ ನಿರ್ದೇಶನ ಜವಾನ್​ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಸೆಪ್ಟೆಂಬರ್​ 7 ರಂದು ತೆರೆಗೆ ಬರಲು ತಯಾರಾಗಿದೆ. ಅದಲ್ಲದೆ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರ ಡುಂಕಿ ಚಿತ್ರದಲ್ಲಿ ತಾಪ್ಸಿ ಪನ್ನು ಜೊತೆ ಖಾನ್​ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಶಾರುಖ್ ಮನ್ನತ್​ ಬಂಗಲೆಯೆದುರು ನಿಂತ Swiggy ಡೆಲಿವರಿ ಏಜೆಂಟ್ಸ್‌, ಯಾಕೆ ಗೊತ್ತಾ?

ABOUT THE AUTHOR

...view details