ಫ್ಯಾಶನ್ ಡಿಸೈನರ್‌ಗಳಾದ ಕುನಾಲ್ ರಾವಲ್ ಮತ್ತು ಅರ್ಪಿತಾ ಮೆಹ್ತಾ ಮುಂಬೈನ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರ ವಿವಾಹ ಸಮಾರಂಭದಲ್ಲಿ ಅರ್ಜುನ್ ಕಪೂರ್ ಮತ್ತು ವರುಣ್ ಧವನ್ ಸೇರಿದಂತೆ ಕುಟುಂಬ ಸದಸ್ಯರು ಮತ್ತು ಉದ್ಯಮದ ಆಪ್ತರು ಭಾಗವಹಿಸಿದ್ದರು.
ಕುನಾಲ್ ರಾವಲ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಬಾಲಿವುಡ್ ತಾರಾ ಜೋಡಿ - ಈಟಿವಿ ಭಾರತ್ ಕನ್ನಡ
ಮುಂಬೈನ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ಭಾನುವಾರ ಫ್ಯಾಶನ್ ಡಿಸೈನರ್‌ಗಳಾದ ಕುನಾಲ್ ರಾವಲ್ ಮತ್ತು ಅರ್ಪಿತಾ ಮೆಹ್ತಾ ನವಜೀವನಕ್ಕೆ ಕಾಲಿಟ್ಟರು. ಬಾಲಿವುಡ್ನ ತಾರಾ ಜೋಡಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕುನಾಲ್ ರಾವಲ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಬಾಲಿವುಡ್ ತಾರಾ ಜೋಡಿ
ಮಲೈಕಾ ಅರೋರಾ- ಅರ್ಜುನ್ ಕಪೂರ್, ಶಾಹಿದ್ ಕಪೂರ್- ಮೀರಾ ರಜಪೂತ್ ಮತ್ತು ವರುಣ್ ಧವನ್- ನತಾಶಾ ದಲಾಲ್ ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು. ತಾರಾ ಅಥಿತಿಗಳು ಬಿಳಿಯ ಥಿಮ್ನ ವಸ್ತ್ರ ಧರಿಸಿದ್ದು ವಿಶೇಷವಾಗಿತ್ತು. ಶಾಹಿದ್ ಕಪೂರ್ ಬಿಳಿ ಕುರ್ತಾ ಪ್ಯಾಂಟ್ ಧರಿಸಿದರೆ, ಮೀರಾ ಕೆನೆ ಬಣ್ಣದ ಸೀರೆಯುಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ :ಆಕಾಸ ವೀದುಲ್ಲೋ ಸಿನಿಮಾದ ಲಿಪ್ಲಾಕ್ ಸೀನ್ ವೈರಲ್.. ನಟ ಗೌತಮ್ ಕೃಷ್ಣ ಏನಂದ್ರು ಗೊತ್ತಾ