ಬಹುಮುಖ ಪ್ರತಿಭೆ ಫರ್ಹಾನ್ ಅಖ್ತರ್ ಪ್ರಸ್ತುತ ಬಹುನಿರೀಕ್ಷಿತ ಡಾನ್ 3 ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ಇಂದು ಮುದ್ದಿನ ಮಗಳು ಅಕಿರಾ ಅಖ್ತರ್ ಅವರ ಶಾರ್ಟ್ ಫಿಲ್ಮ್ 'ಹೋಮ್ಸಿಕ್'ನ ಟ್ರೇಲರ್ ಅನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.
ಹೋಮ್ಸಿಕ್ ಟ್ರೇಲರ್ ಅನಾವರಣ: ಬಾಲಿವುಡ್ನಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಫರ್ಹಾನ್ ಅಖ್ತರ್ ಇಂದು ಸೋಷಿಯಲ್ ಮೀಡಿಯಾದಲ್ಲಿ ಹೋಮ್ಸಿಕ್ ಟ್ರೇಲರ್ ಅನ್ನು ಹಂಚಿಕೊಂಡಿದ್ದಾರೆ. ಹೋಮ್ಸಿಕ್ ಶೀರ್ಷಿಕೆಯ ಕಿರುಚಿತ್ರ ಇದೇ ಆಗಸ್ಟ್ 15 ರಂದು ತೆರೆಕಾಣಲಿದೆ. ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ತಂದೆ ಫರ್ಹಾನ್ ಅಖ್ತರ್ ಕಿರುಚಿತ್ರದ ಟ್ರೇಲರ್ ಅನ್ನು ಹಂಚಿಕೊಂಡಿದ್ದಾರೆ. ಮಗಳು ಅಕಿರಾ ಅಖ್ತರ್ ಅವರನ್ನೊಳಗೊಂಡ ಹೋಮ್ಸಿಕ್ ಕಿರುಚಿತ್ರವನ್ನು ಎರಡು ವಾರಗಳ ಹಿಂದೆ ಮುಂಬೈ ಮನೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಸಹ ತಿಳಿಸಿದರು.
ಇಂದು (ಆಗಸ್ಟ್ 12, ಶನಿವಾರ) ಉದಯೋನ್ಮುಖ ನಿರ್ದೇಶಕ ಅಹಾನ್ ವಕ್ನಳ್ಳಿ ಆ್ಯಕ್ಷನ್ ಕಟ್ ಹೇಳಿರುವ ಹೋಮ್ ಸಿಕ್ ಟ್ರೇಲರ್ ಅನ್ನು ಫರ್ಹಾನ್ ಅಖ್ತರ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡರು. ಮಗಳು ಅಕಿರಾ ಜೊತೆಗೆ ಶ್ರುತಂತ್ ರಾಮಸ್ವಾಮಿ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಟ್ರೇಲರ್ ಶೇರ್ ಮಾಡಿರುವ ಫರ್ಹಾನ್ ಅಖ್ತರ್, '' ಹೋಮ್ಸಿಕ್ ಶಾರ್ಟ್ ಫಿಲ್ಮ್ನ ಒಂದೆರಡು ಸೀನ್ ಸೂಟ್ ಮಾಡುವಂತೆ ಮಗಳು ಅಕಿರಾ ಕೇಳಿದಾಗ ಆಶ್ಚರ್ಯಕ್ಕೊಳಗಾದೆ, ಕುತೂಹಲವಾಯಿತು '' ಎಂದು ತಿಳಿಸಿದರು.