ಪ್ರತಿ ವರ್ಷ ಸೆಪ್ಟೆಂಬರ್ ಕೊನೆಯ ಭಾನುವಾರವನ್ನು ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಅಥವಾ ವಿಶ್ವ ಪುತ್ರಿಯರ ದಿನವಾಗಿ ಆಚರಿಸಲಾಗುತ್ತದೆ. ಈ ಆಚರಣೆ ಬೇರೆ-ಬೇರೆ ರಾಷ್ಟ್ರಗಳಲ್ಲಿ ಮಾಡುವ ಮೊದಲು ಆಚರಣೆಗೆ ಬಂದಿದ್ದು ಭಾರತದಲ್ಲಿ.
ಭಾರತದಲ್ಲಿ ದಿನ ಕಳೆದಂತೆ ಹೆಣ್ಣು ಮಗುವಿನ ಮೇಲಿದ್ದಂತಹ ನಿರಾಶ ಭಾವನೆ ಕಮ್ಮಿಯಾಗುತ್ತಿದೆ. ಪ್ರಸ್ತುತ ಹೆಣ್ಣು ಮಗುವನ್ನು ಮನೆಯ ನಂದಾದೀಪ, ಅದೃಷ್ಟ, ಕೀರ್ತಿ, ಆಧಾರಸ್ತಂಭ ಎಂದು ಭಾವಿಸಲಾಗುತ್ತಿದೆ. ಹೆಣ್ಣು ಮಗು ಬೇಕೆನ್ನುವವರ ಸಂಖ್ಯೆ ಏರತೊಡಗಿದೆ. ಇಂದು ವಿಶ್ವ ಪುತ್ರಿಯರ ದಿನವನ್ನು ಪ್ರತಿಯೊಬ್ಬರೂ ವಿಭಿನ್ನವಾಗಿ ಆಚರಿಸುತ್ತಿದ್ದಾರೆ.
ಈ ವಿಶೇಷ ದಿನದಂದು, ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಅವರ ಮಗಳು ಸಾನ್ವಿಗೆ ಅಭಿಮಾನಿಗಳು ಹಾಡೊಂದನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಸಾಹಿತ್ಯ, ಸಂಗೀತ, ರಚನೆ ಎಲ್ಲ ಜವಾಬ್ದಾರಿ ಅಭಿಮಾನಿಗಳದ್ದು. ಸೌಮ್ಯ ಮಂಜುನಾಥ್, ಮಂಜುನಾಥ್ ಹೊಸವಳಿ ಹಾಡಿರುವ ಈ ಹಾಡಿಗೆ ಮಂಜುನಾಥ್ ಅವರೇ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಯೋಗಿ ಎಂ.ವಿಜಿ ಅವರ ಸಾಹಿತ್ಯವಿದೆ. ಇಂದು ಆನಂದ್ ಆಡಿಯೋ ಸಂಸ್ಥೆ ಹಾಡು ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಾವೇರಿದ ವಾತಾವರಣ..
ಸುದೀಪ್ ಮತ್ತು ಅವರ ಮಗಳು ಸಾನ್ವಿ ನಡುವಿನ ಅಪಾರ ಪ್ರೀತಿಯ ಸಂಬಂಧ ಎಲ್ಲರಿಗೂ ಗೊತ್ತಿರುವ ವಿಚಾರ. ಕಿಚ್ಚ ಸುದೀಪ್ ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಫ್ಯಾಮಿಲಿ ವಿಷಯದಲ್ಲಿ ಮಾತ್ರ ತುಂಬಾ ಕಾಳಜಿ. ಮಗಳೆಂದರೆ ಪ್ರಾಣ. ಇಂದು ಪುತ್ರಿಯರ ದಿನ ಹಿನ್ನೆಲೆ ಇವರಿಬ್ಬರಿಗಾಗಿ ಅಭಿಮಾನಿಗಳು ಹಾಡಿರುವ ಹಾಡು ಮೆಚ್ಚುಗೆಗೆ ಪಾತ್ರವಾಗುತ್ತಿದೆ.