ಕರ್ನಾಟಕ

karnataka

ETV Bharat / entertainment

ಕ್ರೇಜಿಸ್ಟಾರ್​ ಪುತ್ರನ ತ್ರಿವಿಕ್ರಮ ಹಾಡಿಗೆ ಸೆಲೆಬ್ರಿಟಿಗಳು ಫಿದಾ - ಕ್ರೇಜಿ ಸ್ಟಾರ್ ಪುತ್ರನ ತ್ರಿವಿಕ್ರಮ ಹಾಡಿಗೆ ಫ್ಯಾನ್ಸ್​ ಫಿದಾ

ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಚೇತನ್ ಕುಮಾರ್ ಸಾಹಿತ್ಯ ಬರೆದಿರುವ 'ಹನಿ ಬನಿ ಫೀಲ್ ಮೈ ಲವ್' ಎಂಬ ಹಾಡನ್ನು ಸುಮಾರು 20ಕ್ಕೂ ಹೆಚ್ಚು ಸೆಲೆಬ್ರಿಟಿಗಳು ವರ್ಚುವಲ್ ಮೂಲಕ ರಿಲೀಸ್ ಮಾಡಿದ್ದಾರೆ.

ವಿಕ್ಕಿ ಹಾಗೂ ಆಕಾಂಕ್ಷಾ ಶರ್ಮಾ
ವಿಕ್ಕಿ ಹಾಗೂ ಆಕಾಂಕ್ಷಾ ಶರ್ಮಾ

By

Published : Jun 9, 2022, 10:31 PM IST

ಕನ್ನಡ ಚಿತ್ರರಂಗದ ಕನಸುಗಾರ ವಿ.ರವಿಚಂದ್ರನ್ ಮಕ್ಕಳಾದ ಮನುರಂಜನ್ ರವಿಚಂದ್ರನ್ ಹಾಗು ವಿಕ್ರಮ್ ರವಿಚಂದ್ರನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋದು ಗೊತ್ತಿರುವ ವಿಚಾರ. ಇದೀಗ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ಅಭಿನಯದ ಚೊಚ್ಚಲ ಸಿನಿಮಾ ತ್ರಿವಿಕ್ರಮ, ಸ್ಯಾಂಡಲ್​ವುಡ್​ನಲ್ಲಿ ಹಲವು ವಿಚಾರಗಳಿಗೆ ಕ್ರೇಜ್ ಹುಟ್ಟು ಹಾಕಿದೆ. ಕೆಲವು ದಿನಗಳ ಹಿಂದೆ ಶಿವರಾಜ್ ಕುಮಾರ್ ಹಾಗು ವಿಕ್ರಮ್ ತಂದೆ ರವಿಚಂದ್ರನ್ ತಮ್ಮ ಮಗನ‌ ಸಿನಿಮಾದ ಹೈಲೆಟ್ಸ್ ಬಗ್ಗೆ ಮಾತನಾಡಿದರು. ಇದೀಗ ತ್ರಿವಿಕ್ರಮ ಸಿನಿಮಾದ ಮತ್ತೊಂದು ಹಾಡನ್ನು ಹರಿಬಿಟ್ಟಿದೆ ತ್ರಿವಿಕ್ರಮ ಬಳಗ.


ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಚೇತನ್ ಕುಮಾರ್ ಸಾಹಿತ್ಯ ಬರೆದಿರುವ 'ಹನಿ ಬನಿ ಫೀಲ್ ಮೈ ಲವ್' ಎಂಬ ಹಾಡನ್ನು ಸುಮಾರು 20ಕ್ಕೂ ಹೆಚ್ಚು ಸೆಲೆಬ್ರಿಟಿಗಳು ವರ್ಚುವಲ್ ಮೂಲಕ ರಿಲೀಸ್ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಸಂಜಿತ್ ಹೆಗ್ಡೆ ದನಿಗೂಡಿಸಿದ್ದಾರೆ. ಬ್ಯಾಂಕಾಕ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ನೃತ್ಯ ನಿರ್ದೇಶಕ ಭೂಷಣ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಕಲರ್​ಫುಲ್​ ಆಗಿ ಮೂಡಿಬಂದಿರುವ ಈ ಹಾಡಿಗೆ ವಿಕ್ಕಿ ಹಾಗೂ ಆಕಾಂಕ್ಷಾ ಶರ್ಮಾ ಹೆಜ್ಜೆ ಹಾಕಿದ್ದಾರೆ.

ನಟ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್, ನೆನಪಿರಲಿ ಪ್ರೇಮ್, ಸೃಜನ್ ಲೋಕೇಶ್, ಚಂದನ್ ಶೆಟ್ಟಿ, ನವೀನ್ ಸಜ್ಜು, ಮೇಘಾ ಶೆಟ್ಟಿ ಸೇರಿದಂತೆ ಸಾಕಷ್ಟು ತಾರೆಯರು ಹಾಡು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ವಿಕ್ರಮ್ ಅಲ್ಲದೇ ಆಕಾಂಕ್ಷಾ ಶರ್ಮಾ, ಹಿರಿಯ ನಟಿ ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ.

ರೋಜ್ ಹಾಗೂ ಮಾಸ್ ಲೀಡರ್ ಸಿನಿಮಾ ಖ್ಯಾತಿಯ ಸಹನಾ ಮೂರ್ತಿ 'ತ್ರಿವಿಕ್ರಮ'ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿರುವ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಸದ್ಯ ಟ್ರೇಲರ್ ಹಾಗು ಹಾಡುಗಳಿಂದ ಸದ್ದು ಮಾಡುತ್ತಿರೋ ತ್ರಿವಿಕ್ರಮ ಇದೇ ಜೂನ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಹೊಸ ಪ್ರತಿಭೆಗಳ 'ಅಬ್ಬಬ್ಬ' ಸಿನಿಮಾಗೆ ಸಾಥ್‌ ಕೊಟ್ಟ ನಟ ಕಿಚ್ಚ ಸುದೀಪ್​

For All Latest Updates

ABOUT THE AUTHOR

...view details