ಕರ್ನಾಟಕ

karnataka

ETV Bharat / entertainment

Tiger Shroff and Disha Patani: ಬ್ರೇಕಪ್​ ವದಂತಿ ನಂತರ ಜೊತೆಯಾಗಿ ಕಾಣಿಸಿಕೊಂಡ ಟೈಗರ್​ ಶ್ರಾಫ್​- ದಿಶಾ ಪಟಾನಿ - ಈಟಿವಿ ಭಾರತ ಕನ್ನಡ

ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಬ್ರೇಕಪ್​ ವದಂತಿ ನಂತರ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

Tiger Shroff and Disha Patani
ಟೈಗರ್​ ಶ್ರಾಫ್​- ದಿಶಾ ಪಟಾನಿ

By

Published : Jul 2, 2023, 5:17 PM IST

Updated : Jul 2, 2023, 5:28 PM IST

ಬಾಲಿವುಡ್​ನ ದಿ ಬೆಸ್ಟ್​​ ಜೋಡಿ ಎಂದೇ ಫೇಮಸ್​ ಆಗಿದ್ದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಬ್ರೇಕಪ್​ ವದಂತಿಗಳ ನಂತರ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುದ್ದಿಯಾಗಿದ್ದಾರೆ. ಅಲ್ಲದೇ ಈ ಸಮಾರಂಭಕ್ಕೆಂದು ಮುಂಬೈನಿಂದ ದೆಹಲಿಗೆ ಇಬ್ಬರು ಜೊತೆಯಾಗಿಯೇ ಬಂದಿದ್ದಾರೆ. ಸದ್ಯ ಈ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಅಭಿಮಾನಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ಬ್ರೇಕಪ್​ ವದಂತಿ ಜೋಡಿಯು ಅಕ್ಕ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು. ದೆಹಲಿ ಈವೆಂಟ್​ಗೆ ಟೈಗರ್​ ಆಗಮಿಸುತ್ತಿದ್ದಂತೆ ಅಂಗರಕ್ಷಕರು ಅವರಿಗೆ ದಾರಿ ಮಾಡಿಕೊಟ್ಟರು. ದಿಶಾ ಅವರು ಟೈಗರ್ ಶ್ರಾಫ್​ ಅವರನ್ನೇ ಹಿಂಬಾಲಿಸಿ ಬಂದರು.

ಅದಾಗ್ಯೂ, ಅವರಿಬ್ಬರು ಪಾಪರಾಜಿಗಳಿಗೆ ಪ್ರತ್ಯೇಕ ಪೋಸ್​ ನೀಡಿದರು. ಟೈಗರ್​ ಫೋಟೋಗೆ ನಿಲ್ಲುತ್ತಿದ್ದಂತೆ ದಿಶಾ ಸೈಡಿಗೆ ನಿಂತು ಬಿಟ್ಟರು. ಬಳಿಕ ನಟಿ ನಗುಮುಖದಿಂದಲೇ ಕ್ಯಾಮರಾಗೆ ಪೋಸ್​ ನೀಡಿದರು. ಕಾರ್ಯಕ್ರಮಕ್ಕೆಂದು ಟೈಗರ್​ ಶ್ರಾಫ್​ ಕಪ್ಪು ಬಣ್ಣದ ಟೀ- ಶರ್ಟ್​, ಅದಕ್ಕೆ ಹೊಂದಿಕೆಯಾಗುವ ಪ್ಯಾಂಟ್​ ಮತ್ತು ಶೂ ಧರಿಸಿದ್ದರು. ದಿಶಾ ಬಿಳಿ ಬಣ್ಣದ ಪ್ಯಾಂಟ್​ ಮತ್ತು ನೇರಳೆ ಬಣ್ಣದ ಶಾರ್ಟ್​ ಟಾಪ್​ ಹಾಕಿದ್ದರು. ಅಂತೂ ಇಬ್ಬರು ಡಾರ್ಕ್​ ಶೇಡ್​ ದಿರಿಸನ್ನೇ ಆರಿಸಿದ್ದರು.

ಇದನ್ನೂ ಓದಿ:Actor Ganesh: 'ಕೃಷ್ಣಂ ಪ್ರಣಯ ಸಖಿ' ಬೆನ್ನಲ್ಲೇ 42ನೇ ಸಿನಿಮಾ ಘೋಷಿಸಿದ ಗೋಲ್ಡನ್​ ಸ್ಟಾರ್ ಗಣೇಶ್

ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿರುವ ವಿಡಿಯೋ ನೋಡಿದ ಅಭಿಮಾನಿಗಳು ತಮ್ಮ ಉತ್ಸಾಹವನ್ನು ಕಮೆಂಟ್​ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. "ಯಾವಾಗಲೂ ನನ್ನ ನೆಚ್ಚಿನ ಜೋಡಿ" ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಇಷ್ಟು ಸುಂದರವಾದ ಜೋಡಿ ಯಾಕೆ ಬ್ರೇಕ್​ ಅಪ್​ ಮಾಡಿಕೊಂಡಿದ್ದಾರೆ? ಎಂದು ಆಶ್ಚರ್ಯಪಟ್ಟಿದ್ದಾರೆ.

ಆದರೆ ಬ್ರೇಕಪ್​ ವದಂತಿ ಬಗ್ಗೆ ಊಹಾಪೋಹಗಳಿದೆಯೇ ಹೊರತು ಅಧಿಕೃತವಾಗಿ ಯಾವುದೇ ಹೇಳಿಕೆಗಳಿಲ್ಲ. ಈ ಬಗ್ಗೆ ಟೈಗರ್ ಶ್ರಾಫ್ ಆಗಲಿ ಅಥವಾ ದಿಶಾ ಪಟಾನಿ ಆಗಲಿ ಯಾರೂ ಸ್ಪಷ್ಟಪಡಿಸಿಲ್ಲ. ಇನ್ನು ತಾವು ಡೇಟಿಂಗ್​ ನಡೆಸುತ್ತಿರುವುದಾಗಿಯೂ ಈ ತಾರಾ ಜೋಡಿ ಯಾವತ್ತೂ ಹೇಳಿಕೊಂಡಿರಲಿಲ್ಲ. ಹೀಗಾಗಿ ಬ್ರೇಕಪ್​ ವದಂತಿ ಎಷ್ಟರ ಮಟ್ಟಿಗೆ ಸರಿ ಅನ್ನುವುದಕ್ಕೆ ಸ್ಪಷ್ಟತೆಯಿಲ್ಲ.

ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನದಲ್ಲಿ ಇವರು ಬಾಲಿವುಡ್​ನ ದಿ ಬೆಸ್ಟ್​​ ಜೋಡಿ ಅನ್ನಿಸಿಕೊಂಡಿದ್ದರು. ಕಳೆದ ಆರೇಳು ವರ್ಷದಿಂದ ಎಲ್ಲೇ ಹೋದರೂ ಅವರು ಜೋಡಿಯಾಗಿಯೇ ಓಡಾಡುತ್ತಿದ್ದರು. ಇವರ ಒಡನಾಟ ಕಂಡ ನೆಟಿಜನ್​​ಗಳು ಇವರನ್ನು ಸೂಪರ್​ ಜೋಡಿಗೆ ಹೋಲಿಸತೊಡಗಿದ್ದರು. ಪಾರ್ಟಿ, ಪ್ರವಾಸ, ಡಿನ್ನರ್​, ಮೋಜು - ಮಸ್ತಿ ಅಂತ ಬಂದಾಗಲೂ ಅವರು ಜೋಡಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ ಇದೊಂದು ಡೇಟಿಂಗ್​ ಆಗಿ ಕಾಣಿಸತೊಡಗಿತ್ತು.

ಇದನ್ನೂ ಓದಿ:Sudeep 46: 'ನಾನು ಮನುಷ್ಯ ಅಲ್ಲ ರಾಕ್ಷಸ' - ಕಿಚ್ಚ ಸುದೀಪ್‌ ಹೊಸ ಸಿನಿಮಾದ ಟೀಸರ್ ರಿಲೀಸ್‌, ರಗಡ್ ಲುಕ್‌ನಲ್ಲಿ ಅಬ್ಬರ!

Last Updated : Jul 2, 2023, 5:28 PM IST

ABOUT THE AUTHOR

...view details