ಕರ್ನಾಟಕ

karnataka

ETV Bharat / entertainment

60 ಲಕ್ಷ ಖರ್ಚು ಮಾಡಿ ಮನೆ ಮುಂದೆ ಅಮಿತಾಭ್​​​​ ಪ್ರತಿಮೆ ಸ್ಥಾಪಿಸಿದ ಅಭಿಮಾನಿ - ಅಮಿತಾಬ್ ಬಚ್ಚನ್ ಪ್ರತಿಮೆ

1990ರ ದಶಕದಲ್ಲಿ ಟೆಕ್ಕಿ ಗೋಪಿ ಶೇಥ್ ಗುಜರಾತ್‌ನಿಂದ ಅಮೆರಿಕಕ್ಕೆ ಬಂದಿದ್ದ ಅವರು ಎಡಿಸನ್‌ನಲ್ಲಿ ವಾಸವಾಗಿದ್ದಾರೆ. ಶೇಥ್​ ಅವರು ಈ ಪ್ರತಿಮೆಯನ್ನು ರಾಜಸ್ಥಾನದಲ್ಲಿ ವಿನ್ಯಾಸಗೊಳಿಸಿ, ನ್ಯೂಜೆರ್ಸಿಯ ತಮ್ಮ ಮನೆಯ ಮುಂದೆ ಸ್ಥಾಪಿಸಿದ್ದಾರೆ.

Fan installs Amitabh Bachchan statue
60 ಲಕ್ಷ ಖರ್ಚು ಮಾಡಿ ಮನೆ ಮುಂದೆ ಅಮಿತಾಭ್​ ಪ್ರತಿಮೆ ಸ್ಥಾಪಿಸಿದ ಅಭಿಮಾನಿ

By

Published : Aug 30, 2022, 11:08 AM IST

ವಾಷಿಂಗ್ಟನ್:ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಸಾಕಷ್ಟು ಅಭಿಮಾನಿ ಬಳಗವನ್ನು ಅಮಿತಾಭ್​ ಬಚ್ಚನ್​ ಹೊಂದಿದ್ದಾರೆ. ಇಲ್ಲೊಬ್ಬಭಾರತ ಮೂಲದ ಅಮೆರಿಕದ ಟೆಕ್ಕಿಯೊಬ್ಬರು 75,000 ಡಾಲರ್​ ಖರ್ಚು ಮಾಡಿ ನ್ಯೂಜೆರ್ಸಿಯ ತಮ್ಮ ಮನೆಯ ಮುಂದೆ ಅಮಿತಾಬ್ ಬಚ್ಚನ್ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಬಿಗ್​ ಬಿ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ನ್ಯೂಜೆರ್ಸಿಯ ನಿವಾಸಿ ಟೆಕ್ಕಿ ಗೋಪಿ ಶೇಥ್​ ಕುಟುಂಬ ಶನಿವಾರ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಅಮಿತಾಭ್​ ಬಚ್ಚನ್​ ಅಭಿಮಾನಿಗಳಿಗೆಲ್ಲ ಉದ್ಘಾಟನಾ ಸಮಾರಂಭದಲ್ಲಿ ಜಮಾಯಿಸಿದ್ದಾರೆ. ಪಟಾಕಿ ಸಿಡಿಸಿ, ಅಮಿತಾಭ್​ ಬಚ್ಚನ್​ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಗಾಜಿನ ಆವರಣದೊಳಗೆ ಅಮಿತಾಭ್​ ಬಚ್ಚನ್​ ಅವರು ಕೌನ್​ ಬನೇಗಾ ಕರೋಡ್​ಪತಿಯಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲಿ ಪ್ರತಿಮೆಯನ್ನು ತಯಾರಿಸಿ ಇಡಲಾಗಿದೆ.

ಈ ಬಗ್ಗೆ ಟೆಕ್ಕಿ ಟ್ವೀಟ್ ಮಾಡಿದ್ದು​, ತಮ್ಮ ಕುಟುಂಬ ಅಮಿತಾಭ್​ ಬಚ್ಚನ್​ ಅವರ ಪ್ರತಿಮೆಯ ಮುಂದೆ ತೆಗೆಸಿಕೊಂಡ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಶೇಥ್​ ಅವರು ಇಂಟರ್ನೆಟ್ ಸೆಕ್ಯುರಿಟಿ ಇಂಜಿನಿಯರ್ ಆಗಿದ್ದು, 1990ರ ದಶಕದಲ್ಲಿ ಗುಜರಾತ್‌ನಿಂದ ಅಮೆರಿಕಕ್ಕೆ ಬಂದಿದ್ದ ಅವರು ಎಡಿಸನ್‌ನಲ್ಲಿ ವಾಸವಾಗಿದ್ದಾರೆ. ಶೇಥ್​ ಅವರು ಈ ಪ್ರತಿಮೆಯನ್ನು ರಾಜಸ್ಥಾನದಲ್ಲಿ ವಿನ್ಯಾಸಗೊಳಿಸಿ, ನ್ಯೂಜೆರ್ಸಿಯ ತಮ್ಮ ಮನೆಯ ಮುಂದೆ ಸ್ಥಾಪಿಸಿದ್ದಾರೆ.

ಶೇಥ್ ಅವರು ಅಮಿತಾಭ್ ಬಚ್ಚನ್ ಅವರ ದೊಡ್ಡ ಅಭಿಮಾನಿ. ನಟ ಅಮಿತಾಭ್​ ಅವರಿಗೆ ದೇವರಂತೆ ಎಂದು ಹೇಳಿಕೊಂಡಿದ್ದಾರೆ. ಅವರ ರೀಲ್​ ಜೀವನ ಮಾತ್ರವಲ್ಲ ಸಾರ್ವಜನಿಕವಾಗಿ ಹೇಗೆ ನಿರ್ವಹಿಸುತ್ತಾರೆ ಎಂಬ ಅವರ ರಿಯಲ್​ ಜೀವನವೂ ಕೂಡ ನನಗೆ ಸ್ಫೂರ್ತಿ. ತುಂಬಾ ಡೌನ್​ ಟು ಅರ್ಥ್​ ಆಗಿರುವ ಬಿಗ್​ ಬಿ ತಮ್ಮ ಅಭಿಮಾನಿಗಳ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಅವರು ಉಳಿದ ಸ್ಟಾರ್​ಗಳಂತಲ್ಲ, ಹಾಗಾಗಿ ಅವರ ಆ ವ್ಯಕ್ತಿತ್ವವನ್ನು ನನ್ನ ಮನೆಯ ಮುಂದೆ ಸ್ಥಾಪಿಸಬೇಕು ಎಂದುಕೊಂಡೆ ಎಂದಿದ್ದಾರೆ.

ಇದನ್ನೂ ಓದಿ :ಬಾತ್ ರೂಂ, ಕೊಠಡಿ ನಾನೇ ಸ್ವಚ್ಛಗೊಳಿಸುತ್ತಿದ್ದೇನೆ: ಅಮಿತಾಬ್ ಬಚ್ಚನ್

ABOUT THE AUTHOR

...view details