ಕರ್ನಾಟಕ

karnataka

ETV Bharat / entertainment

ಬಾಲಿವುಡ್​​ಗೆ ಲಗ್ಗೆ ಇಟ್ಟ ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್‌ - KVN ನಿರ್ಮಾಣ ಸಂಸ್ಥೆ

ಕನ್ನಡ ಚಿತ್ರರಂಗದಲ್ಲಿ ಸಖತ್, ಬೈಟು ಲವ್ ಹಾಗೂ ಈಗ ಕೆ.ಡಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆವಿಎನ್​ ಸಂಸ್ಥೆಯ ಮೂರನೇ ಸಿನಿಮಾ ಇದು.

production company KVN ventured into Bollywood
ಬಾಲಿವುಡ್​​ಗೆ ಲಗ್ಗೆ ಇಟ್ಟ ಕನ್ನಡದ ಪ್ರಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್‌

By

Published : Dec 8, 2022, 7:24 AM IST

ಭಾರತೀಯ ಸಿನಿಮಾ‌ರಂಗ ಅಲ್ಲದೇ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗುವಂತೆ ಕನ್ನಡ ಸಿನಿಮಾ‌ಗಳು ನಿರ್ಮಾಣ ಆಗುತ್ತಿವೆ. ಈ ಮಧ್ಯೆ ಕನ್ನಡ ಸಿನಿಮಾ ನಿರ್ಮಾಣ ಸಂಸ್ಥೆಗಳು ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿವೆ.‌ ಕೆಲವು ದಿನಗಳ ಹಿಂದೆ ಕೆಜಿಎಫ್, ಕಾಂತಾರ ನಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ ಹೊಂಬಾಳೆ ಫಿಲ್ಮ್ಸ್​ ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತದೆ ಎನ್ನುವ ಸುದ್ದಿಯೂ ಇದೆ. ಆದರೆ ಈ ಬಗ್ಗೆ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಇದೀಗ ಕನ್ನಡದ ಮತ್ತೊಂದು ಖ್ಯಾತ ‌ನಿರ್ಮಾಣ ಸಂಸ್ಥೆಯಾಗಿರುವ ಕೆವಿಎನ್‌‌ ಸಂಸ್ಥೆ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ.

ಹೌದು, ಕನ್ನಡ ಚಿತ್ರರಂಗದಲ್ಲಿ ಸಖತ್, ಬೈಟು ಲವ್ ಹಾಗೂ ಈಗ ಕೆ.ಡಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ KVN ನಿರ್ಮಾಣ ಸಂಸ್ಥೆ ಈಗ ಬಾಲಿವುಡ್​​ಗೆ ಲಗ್ಗೆ ಇಟ್ಟಿದೆ. ಕೆವಿಎನ್ ಸಂಸ್ಥೆ ಹಿಂದಿಯ ಹೆಸರಾಂತ ನಟ ಪಂಕಜ್ ತ್ರಿಪಾಠಿ ನಾಯಕನಾಗಿರುವ ಹೊಸ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದು, ಮೊನ್ನೆಯಿಂದ ಮುಂಬೈನಲ್ಲಿ ಶೂಟಿಂಗ್​​ ಪ್ರಾರಂಭಿಸಿದೆ.

ಶೂಟಿಂಗ್​ ಪ್ರಾಂಭಿಸಿದ ಕೆವಿಎನ್​ ಸಂಸ್ಥೆ

ಕೆವಿಎನ್ ನಿರ್ಮಾಣದ ಮೂರನೇ ಸಿನಿಮಾ ಇದಾಗಿದ್ದು, ಪಂಕಜ್ ತ್ರಿಪಾಠಿ, ಪಾರ್ವತಿ ಮೆನನ್, ಸಂಜನಾ ಸಂಘಿ ಹಾಗೂ ಮುಂತಾದವರು ನಟಿಸುತ್ತಿದ್ದಾರೆ. ಪಿಂಕ್ ಸಿನಿಮಾ ಖ್ಯಾತಿಯ ನಿರ್ದೇಶಕ ಅನಿರುದ್ಧ್ ರಾಯ್ ಚೌದ್ರಿ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ.

ಇದನ್ನೂ ಓದಿ:'ಪದವಿ ಪೂರ್ವ' ಚಿತ್ರದ ಟೀಸರ್ ಬಿಡುಗಡೆ ಮಾಡಿದ ಜಗ್ಗೇಶ್

ABOUT THE AUTHOR

...view details