ನೃತ್ಯ ನಿರ್ದೇಶಕ ಭೂಷಣ್ ಪರಿಚಯ ಎಲ್ಲರಿಗೂ ಇದೆ. ಕನ್ನಡದ ಜನಪ್ರಿಯ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿ ಫೇಮಸ್ ಆಗಿದ್ದಾರೆ. 'ರ‍್ಯಾಂಬೊ 2' ಸಿನಿಮಾದ 'ಚುಟು ಚುಟು ಅಂತೈತಿ..', 'ಕಾಂತಾರ' ಚಿತ್ರದ 'ಸಿಂಗಾರ ಸಿರಿಯೇ..' ಮುಂತಾದ ಹಿಟ್ ಹಾಡುಗಳಿಗೆ ಇವರೇ ನೃತ್ಯ ನಿರ್ದೇಶಕರಾಗಿದ್ದಾರೆ. ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ನಟ ಸಾರ್ವಭೌಮ', ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟನೆಯ 'ಬೆಲ್ ಬಾಟಂ' ಚಿತ್ರ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾದ ಹಾಡುಗಳಿಗೆ ಇವರು ಕೊರಿಯೋಗ್ರಫಿ ಮಾಡಿದ್ದಾರೆ.
ಹೀಗಾಗಿಯೇ ಸ್ಯಾಂಡಲ್ವುಡ್ನಲ್ಲಿ ಭೂಷಣ್ಗೆ ಸಖತ್ ಬೇಡಿಕೆ ಇದೆ. ಇಷ್ಟು ಮಾತ್ರವಲ್ಲದೇ ಅವರು 'ರಾಜ ರಾಣಿ ರೋರರ್ ರಾಕೆಟ್' ಚಿತ್ರದ ಮೂಲಕ ಹೀರೋ ಆದರು. ನೃತ್ಯ ನಿರ್ದೇಶನದ ಜೊತೆಗೆ ನಟನಾಗಿ ಗುರುತಿಸಿಕೊಂಡಿರುವ ಇವರು ಇದೀಗ ನಿರ್ದೇಶಕನಾಗಿ ಮಿಂಚಲು ಸಜ್ಜಾಗಿದ್ದಾರೆ. ಭೂಷಣ್ ತಮ್ಮ ಹುಟ್ಟುಹಬ್ಬದಂದೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಒಂದು ಫನ್ನಿ ವಿಡಿಯೋದ ಮೂಲಕ ಅವರು ತಮ್ಮ ನಿರ್ದೇಶನದ ಕನಸಿನ ಬಗ್ಗೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:'ಪ್ರೇಕ್ಷಕರ ಕೊರತೆ ಸುಳ್ಳು ಮಾಡಿದ್ದಕ್ಕೆ ಸಂತೋಷವಾಗಿದೆ': 'ಹಾಸ್ಟೆಲ್ ಹುಡುಗರಿಗೆ' ರಾಜ್ ಬಿ.ಶೆಟ್ಟಿ ಪ್ರೀತಿಯ ಪತ್ರ
ವಿಡಿಯೋದಲ್ಲೇನಿದೆ?:ಭೂಷಣ್ ಹಂಚಿಕೊಂಡ ವಿಡಿಯೋದ ಪ್ರಾರಂಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ. ಆದರೆ ಅದು ಭೂಷಣ್ ಅವರ ಕನಸಾಗಿರುತ್ತದೆ. ಬಳಿಕ ಕಥೆ ಬರೆಯಲು ಶುರು ಮಾಡುವ ಭೂಷಣ್ಗೆ, ನಾನು ಯಾವುದೇ ಕೋರ್ಸ್ ಮಾಡಿಲ್ಲವಲ್ಲ ಎಂಬ ಚಿಂತೆ ಶುರುವಾಗುತ್ತದೆ. ಇದಕ್ಕೆ ಪಕ್ಕದಲ್ಲಿದ್ದ ಹುಡುಗರು, "ಡಾಕ್ಟರ್, ಇಂಜಿನಿಯರ್, ಟೀಚರ್ ಆಗಲು ಕೋರ್ಸ್ ಬೇಕು. ಆದ್ರೆ ಡೈರೆಕ್ಟರ್ ಆಗಲು ಫೋರ್ಸ್ ಬೇಕು" ಎಂದು ಜೋಶ್ ತುಂಬುತ್ತಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಸಖತ್ ಕಾಮಿಡಿ ಆಗಿದೆ.
ಭೂಷಣ್ ಅವರು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವುದಾದರೂ, ಅವರ ಪ್ರಯತ್ನ ಡಿಫರೆಂಟ್ ಆಗಿರಲಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಸ್ಯಾಂಡಲ್ವುಡ್ನಲ್ಲಿ ಹೊಸತನದ ಹೊಸ ರೀತಿಯ ಸಿನಿಮಾ ಮೂಡಿಬರಲಿದೆ ಅನ್ನೋದಂತೂ ಕನ್ಫರ್ಮ್. ಆದರೆ ಭೂಷಣ್ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಸಿನಿಮಾದ ಹೆಸರು ಏನು? ಯಾವ ರೀತಿಯ ಕಥೆ ಎಂಬಿತ್ಯಾದಿ ವಿಷಯಗಳನ್ನು ಅವರು ಹಂಚಿಕೊಂಡಿಲ್ಲ. ಡ್ಯಾನ್ಸ್ ಮಾಸ್ಟರ್ ಆಗಿ, ಬಳಿಕ ನಟನಾಗಿ ಸದ್ಯ ನಿರ್ದೇಶನಾಗಲು ಕನಸು ಕಾಣುತ್ತಿರುವ ಭೂಷಣ್ಗೆ ಅವರ ಅಭಿಮಾನಿಗಳು, ನೆಟ್ಟಿಗರು ಶುಭ ಹಾರೈಸುತ್ತಿದ್ದಾರೆ. ನಿಮ್ಮಿಂದ ಉತ್ತಮ ಸಿನಿಮಾವೊಂದು ಮೂಡಿಬರಲಿ ಎಂದು ಆಶಿಸಿದ್ದಾರೆ.
ಇದನ್ನೂ ಓದಿ:ರಜನಿಕಾಂತ್ 'ಜೈಲರ್' ಆಡಿಯೋ ಲಾಂಚ್: ತಲೈವನ ಗ್ರ್ಯಾಂಡ್ ಈವೆಂಟ್ಗೆ ನೀವೂ ಹೋಗಬೇಕೇ? ಡೀಟೆಲ್ಸ್ ಇಲ್ಲಿದೆ