ಕಳೆದ ಮೂರು ದಶಕಗಳಿಂದ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿರುವ ಫ್ಯಾಮಿಲಿ ಸ್ಟಾರ್ ಎಂದೇ ಖ್ಯಾತರಾಗಿರುವ ಅಭಿಜಿತ್ "ಅಟ್ಲಿ" ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಅವರು ಮತ್ತೆ ಸಿನಿಮಾ ಇಂಡಸ್ಟ್ರಿಗೆ ಕಮ್ ಬ್ಯಾಕ್ ಮಾಡಿದಂತಾಗಿದೆ.
ಈ ಬಗ್ಗೆ ಮಾತನಾಡಿರುವ ಅಭಿಜಿತ್ 'ಅಟ್ಲಿ' ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತೊಂಭತ್ತರ ದಶಕದಲ್ಲಿ ನನ್ನ ಹಾಗೂ ಶೃತಿ ಅವರ ಜೋಡಿಯಲ್ಲಿ ಬಿಡುಗಡೆಯಾಗಿದ್ದ ಚಿತ್ರಗಳು ಪ್ರೇಕ್ಷಕರ ಮನ ಗೆದ್ದಿವೆ. ಈಗ ಹಲವು ವರ್ಷಗಳ ನಂತರ ನಾನು ಶೃತಿ ಅವರ ಜೊತೆ ಈ ಚಿತ್ರದಲ್ಲಿ ನಟಿಸಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ಇನ್ನು, ಕೆಲವು ದಿನಗಳ ಹಿಂದೆ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದರು. ಕಾಸರಗೋಡಿನ ಸುತ್ತಮುತ್ತ "ಅಟ್ಲಿ" ಕಥೆ ನಡೆಯುತ್ತದೆ. ನಿರ್ದೇಶಕ ರಂಗನಾಥ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ "ಅರಿವು", "ಪ್ರಭುತ್ವ" ಚಿತ್ರಗಳನ್ನು ನಿರ್ದೇಶಿಸಿದ್ದ, ರಂಗನಾಥ್ ಅವರಿಗೆ ಇದು ಮೂರನೇ ಚಿತ್ರವಾಗಿದೆ.