ಕರ್ನಾಟಕ

karnataka

ETV Bharat / entertainment

ಎಮ್ಮಿ ಪ್ರಶಸ್ತಿ ವಿಜೇತ ನಟ ಆಂಡ್ರೆ ಬ್ರೌಗರ್ ನಿಧನ - ಹಾಲಿವುಡ್​ ನಟ ಆಂಡ್ರೆ ಬ್ರೌಗರ್ ನಿಧನ

Actor Andre Braugher passes away: 11 ಬಾರಿ ಎಮ್ಮಿ ಪ್ರಶಸ್ತಿಗೆ ನಾಮ ನಿರ್ದೇಶನವಾಗಿದ್ದ ಬ್ರೌಗರ್​ ಎರಡು ಬಾರಿ ಪ್ರಶಸ್ತಿಯನ್ನು ಗೆದ್ದಿದ್ದರು.

Emmy-winning actor Andre Braugher passes away at 61
Emmy-winning actor Andre Braugher passes away at 61

By ETV Bharat Karnataka Team

Published : Dec 13, 2023, 12:03 PM IST

ಲಾಸ್ ಏಂಜೆಲ್ಸ್​​: 'ಹೊಮಿಸೈಡ್;​​ ಲೈಫ್ ಆನ್ ದಿ ಸ್ಟ್ರೀಟ್' ಮತ್ತು 'ಬ್ರೂಕ್ಲಿನ್ 99' ಚಿತ್ರಗಳ ಮೂಲಕ ಜನಪ್ರಿಯವಾಗಿದ್ದ ಎಮ್ಮಿ ಪ್ರಶಸ್ತಿ ವಿಜೇತ ನಟ ಆಂಡ್ರೆ ಬ್ರೌಗರ್ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಅವರ ಸಾವಿನ ಸುದ್ದಿಯನ್ನು ಅಮೆರಿಕ ಮೂಲದ ಸುದ್ದಿ ಸಂಸ್ಥೆ ಪ್ರಚಾರಕ ಯುಬ್ಲಿಸ್ಟ್ ಜೆನ್ನಿಫರ್ ಅಲೆನ್ ದೃಢಪಡಿಸಿದ್ದಾರೆ.

ಶಿಕಾಗೋ ಮೂಲದ ನಟ 1989ರಿಂದ ತಮ್ಮ ಸಿನಿ ಪಯಣವನ್ನು ಆರಂಭಿಸಿದ್ದರು. ಮೋರ್ಗಾನ್ ಫ್ರೀಮನ್ ಮತ್ತು ಡೆನ್ಜೆಲ್ ವಾಷಿಂಗ್ಟನ್ ಅವರೊಂದಿಗೆ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಸಿವಿಲ್​ ವಾರ್​​ ಸಮಯದಲ್ಲಿನ ಎಲ್ಲಾ ಕಪ್ಪು ಸೇನೆಯ ಕುರಿತಾದ ಚಿತ್ರಕ್ಕೆ ಆಸ್ಕರ್​ ಪ್ರಶಸ್ತಿಯನ್ನು ಪಡೆದರು. ಆದಾಗ್ಯೂ ಕೂಡ ಅವರು ಆಫ್ರಿಕನ್​ ಅಮೆರಿಕನ್​ ನಟನಾದ ಹಿನ್ನೆಲೆ ಹಾಲಿವುಡ್​ನಲ್ಲಿ ಕೆಲಸ ಪಡೆಯಲು ಕಷ್ಟ ಅನುಭವಿಸಿದ್ದಾಗಿ 2019ರಲ್ಲಿ ಅಸೋಸಿಯೇಟೆಡ್​​ ಪ್ರೆಸ್​​ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.

ಡೆಟ್​ ಪಾತ್ರದ ಮೂಲಕ ತಮ್ಮನ್ನು ತಾವು ಪೋಷಿಸಿಕೊಂಡರು. ಹೊಮಿಸೈಡ್​​ ಲೈಫ್ ಆನ್ ದಿ ಸ್ಟ್ರೀಟ್ ಸಿರೀಸ್​ನಲ್ಲಿ ಫ್ರಾಂಕ್​ ಪೆಮ್ಬಲೆಟೊನ್​ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದರು. ಡೇವಿಡ್​ ಸಿಮೊನ್​ ಅವರ ಪುಸ್ತಕ ಆಧಾರಿತ ಈ ಸಿರೀಸ್​ ಪೊಲೀಸ್​ ಡ್ರಾಮಾವನ್ನು ಹೊಂದಿದೆ. ಇದಾದ ಹಲವು ವರ್ಷಗಳ ಬಳಿಕ ವಿಭಿನ್ನ ಬಗೆಯ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಮಿಂಚಿದರು. ಆಂಡಿ ಸ್ಯಾಂಬರ್ಗ್ ನಟಿಸಿದ ಫಾಕ್ಸ್ ಸರಣಿ ಬ್ರೂಕ್ಲಿನ್ ನೈನ್-ನೈನ್ ನಲ್ಲಿ ರೇ ಹಾಲ್ಟ್ ಪಾತ್ರದಲ್ಲಿ ಮಿಂಚಿದರು. ಈ ಸೀರಿಸ್​​ 2013 ರಿಂದ 2021ರ ವರೆಗೆ ಎಂಟು ಸೀಸನ್​ ಪ್ರದರ್ಶನ ಕಂಡಿತ್ತು.

11 ಬಾರಿ ಎಮ್ಮಿ ಪ್ರಶಸ್ತಿಗೆ ನಾಮ ನಿರ್ದೇಶನವಾಗಿದ್ದ ಬ್ರೌಗರ್​ ಎರಡು ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಅವರು ತಮ್ಮ ಹೊಮಿಸೈಡ್​​ನ ಸಿರೀಸ್​ನ ಸಹನಟಿಯಾಗಿದ್ದ ಆ್ಯಮಿ ಬ್ರಬೊಸನ್​ ಅವರನ್ನು ಮದುವೆಯಾಗಿ 30 ವರ್ಷ ದಾಂಪತ್ಯ ನಡೆಸಿದ್ದಾರೆ. ಇವರ ದಾಂಪತ್ಯಕ್ಕೆ ಕುರುಹಾಗಿ ಮೂವರು ಗಂಡು ಮಕ್ಕಳಿದ್ದು, ಅವರನ್ನು ಬ್ರೌಗರ್ ಅಗಲಿದ್ದಾರೆ.

ಇದನ್ನೂ ಓದಿ: 'ಫೈಟರ್' ಸಿನಿಮಾದಲ್ಲಿ ಕರಣ್ ಸಿಂಗ್ ಗ್ರೋವರ್: ಫಸ್ಟ್ ಲುಕ್ ಔಟ್​

ABOUT THE AUTHOR

...view details