ವಾಷಿಂಗ್ಟನ್ :ಪೈರೇಟ್ಸ್ ಆಫ್ ದಿ ಕೆರಿಬಿಯನ್ ನಟ ಜಾನಿ ಡೆಪ್ ಮತ್ತು ನಟಿ ಅಂಬರ್ ಹರ್ಡ್ ವಿಚ್ಛೇದನ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇಬ್ಬರ ಮಧ್ಯೆ ವಿಶ್ವದ ನಂ.1 ಶ್ರೀಮಂತ, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೆಸರು ಕೇಳಿ ಬಂದಿತ್ತು. ಇದನ್ನು ನಿರಾಕರಿಸಿದ್ದ ಮಸ್ಕ್, ಇದೀಗ ಮತ್ತೆ ಟ್ವೀಟ್ ಮಾಡಿದ್ದು, ಇಬ್ಬರು ನಟರು ಮುಂದುವರಿಯಲಿದ್ದಾರೆ. ಇಬ್ಬರೂ ಪ್ರಸಿದ್ಧರು, ಅತ್ಯುತ್ತಮ ವ್ಯಕ್ತಿಗಳು ಎಂದು ಹೇಳಿದ್ದಾರೆ.
ಇಬ್ಬರು ವಿಚ್ಚೇದನ ಬಯಸಿದ್ದು, ಪರಸ್ಪರರ ಮೇಲೆ ಮಾಡಿದ ಆರೋಪದಿಂದಾಗಿ ಮಾನನಷ್ಟ ಮೊಕದ್ದಮೆಯೂ ದಾಖಲಿಸಿದ್ದು, ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆಯೇ ತನ್ನ ಪತ್ನಿ ಜೊತೆ ಎಲಾನ್ ಮಸ್ಕ್ ಡೇಟಿಂಗ್ ಮಾಡಿದ್ದರು ಎಂದು ಡೆಪ್ ಆರೋಪಿಸಿದ್ದಾರೆ.