ಬಾಲಿವುಡ್ ಕಿಂಗ್ ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಕಾಂಬಿನೇಶನ್ನ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಡಂಕಿ' ಡಿಸೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಅಭಿಮಾನಿಗಳು ಸಿನಿಮಾ ಟೀಸರ್‌ಗಾಗಿ ಕಾತರರಾಗಿದ್ದಾರೆ. ನಾಳೆ ಶಾರುಖ್ ಖಾನ್ ತಮ್ಮ 58ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಡಂಕಿ ಟೀಸರ್ ಅನಾವರಣಗೊಳ್ಳಲಿದೆ ಎಂದು ನಂಬಲಾಗಿದೆ. ಇತ್ತೀಚಿನ ವರದಿಗಳೂ ಸಹ, ನಾಳೆ ಬೆಳಗ್ಗೆಯೇ ಟೀಸರ್ ರಿಲಿಸ್ ಆಗಲಿದೆ ಎಂದು ಸೂಚಿಸಿವೆ.
ಮೂರನೇ ಬ್ಲಾಕ್ಬಸ್ಟರ್ಗೆ ಎಸ್‌ಆರ್‌ಕೆ ರೆಡಿ:'2023'ರ ಭಾರತೀಯ ಚಿತ್ರರಂಗದ ಪ್ರಸಿದ್ಧ ನಟ ಶಾರುಖ್ ಖಾನ್ ಅವರಿಗೆ ಬಹಳ ವಿಶೇಷ ಅಂತಲೇ ಹೇಳಬಹುದು. ನಾಲ್ಕು ವರ್ಷಗಳ ವಿರಾಮದ ನಂತರ ಬಂದು 2 ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಪಠಾಣ್, ಜವಾನ್ ಅಭೂತಪೂರ್ವ ಯಶಸ್ಸು ಕಂಡಿದ್ದು, ಮುಂದಿನ ಡಂಕಿ ಚಿತ್ರದ ಮೇಲೆ ಬೆಟ್ಟದಷ್ಟು ನಿರಿಕ್ಷೆಗಳಿವೆ. ಕ್ರಿಸ್ಮಸ್ ಸಂದರ್ಭ, ಡಿಸೆಂಬರ್ 22 ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಪ್ರಿಯರ ಉತ್ಸಾಹ, ಕುತೂಹಲ ಹೆಚ್ಚುತ್ತಲೇ ಇದೆ.
ನಾಳೆ ಬೆಳಗ್ಗೆ 11 ಗಂಟೆಗೆ ಟೀಸರ್ ಅನಾವರಣ: ವರದಿಗಳ ಪ್ರಕಾರ, ಡಂಕಿ ಟೀಸರ್ ಅನ್ನು ನವೆಂಬರ್ 2 ಅಂದರೆ ನಾಳೆ ಬೆಳಗ್ಗೆ 11 ಗಂಟೆಗೆ ಅನಾವರಣಗೊಳಿಸಲಾಗುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ 'ಎಸ್‌ಆರ್‌ಕೆ ಡೇ' ಅನ್ನೋದು ಟ್ರೆಂಡಿಂಗ್ ಆಗಿದೆ. ಎಸ್‌ಆರ್‌ಕೆ ಜೊತೆ ರಾಜ್‌ಕುಮಾರ್ ಹಿರಾನಿ ಅವರ ಮೊದಲ ಸಿನಿಮಾ ಆಗಿದ್ದು, ನಟಿ ತಾಪ್ಸಿ ಪನ್ನು ಸೇರಿದಂತೆ ಉಳಿದ ತಾರಾಗಣವನ್ನೊಳಗೊಂಡ ಟೀಸರ್ ಅನ್ನು ನಾಳೆ ಅನಾವರಣಗೊಳಿಸುವ ನಿರೀಕ್ಷೆ ಇದೆ. ದಿಯಾ ಮಿರ್ಜಾ, ಪರೀಕ್ಷಿತ್ ಸಾಹ್ನಿ, ಬೊಮನ್ ಇರಾನಿ, ಧರ್ಮೇಂದ್ರ, ಸತೀಶ್ ಶಾ, ಕಾಜೋಲ್, ವಿಕ್ಕಿ ಕೌಶಲ್ ಕೂಡ ಚಿತ್ರದಲ್ಲಿದ್ದಾರೆ ಎಂಬ ಮಾಹಿತಿ ಇದೆ.