ಕರ್ನಾಟಕ

karnataka

ETV Bharat / entertainment

ಶಾರುಖ್ ಖಾನ್ ಅಭಿನಯದ ಡಂಕಿ ಇಂದು ತೆರೆಗೆ: ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ಸದ್ದು - ರಾಜ್‌ಕುಮಾರ್ ಹಿರಾನಿ ಶಾರುಖ್ ಖಾನ್ ಜೋಡಿ

ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಡಂಕಿ ಇಂದು ಗುರುವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರ ರಸಿಕರು ಸಿನಿಮಾ ವೀಕ್ಷಿಸಲು ತುಂಬಾ ಕಾತರರಾಗಿದ್ದಾರೆ. ಮೊದಲ ದಿನ ಚಿತ್ರ ವೀಕ್ಷಣೆಗಾಗಿ ಮಾಡಿರುವ ಮುಂಗಡ ಟಿಕೆಟ್​ ಬುಕಿಂಗ್‌ಗಳನ್ನು ತಿಳಿಯೋಣ ಬನ್ನಿ.

Dunki  Shah Rukh Khan
ಶಾರುಖ್ ಖಾನ್ ಅಭಿನಯದ ಡಂಕಿ ಇಂದು ತೆರೆಗೆ: ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ಸದ್ದು

By ETV Bharat Karnataka Team

Published : Dec 21, 2023, 8:52 AM IST

Updated : Dec 21, 2023, 11:37 AM IST

ಹೈದರಾಬಾದ್:ಹಲವು ನಿರೀಕ್ಷೆಗಳನ್ನು ಹುಟ್ಟಿ ಹಾಕಿರುವ ಕಿಂಗ್​ ಖಾನ್​ ಶಾರುಖ್ ಅಭಿನಯದ ಚಿತ್ರ ಡಂಕಿ ಇಂದು (ಗುರುವಾರ) ತೆರೆ ಕಂಡಿದೆ. 2023 ರ ಅಂತ್ಯದೊಳಗೆ ಜವಾನ್ ಮತ್ತು ಪಠಾನ್‌ ಚಿತ್ರ ನೋಡಿ ಫುಲ್​ ಖುಷ್​ ಆಗಿರುವ ಸಿನಿ ರಸಿಕರು, ಸದ್ಯ ಸೂಪರ್‌ಸ್ಟಾರ್ ಶಾರುಖ್ ಖಾನ್ ನಟಿಸಿರುವ ಡಂಕಿ ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಿನ ಮೇಲೆ ನಿಂತಿದ್ದಾರೆ. ಈ ಚಿತ್ರವು ಗಲ್ಲಾ ಪೆಟ್ಟಿಗೆ ಭಾರಿ ಸುದ್ದು ಮಾಡಿಲಿದೆ ಎನ್ನುವ ಮುನ್ಸೂಚನೆ ನೀಡಿದ್ದಾರೆ ವಿಶ್ಲೇಷಕರು. ಮೊದಲ ದಿನವೇ ಡಂಕಿ ಸಿನಿಮಾ ನೋಡಲು ಪ್ರೇಕ್ಷಕರ ತುಂಬಾ ಉತ್ಸುಕರಾಗಿದ್ದಾರೆ. ಚಿತ್ರ ವೀಕ್ಷಣೆಗೆ ಮುಂಗಡ ಟಿಕೆಟ್​ ಬುಕ್ಕಿಂಗ್‌ ಕೂಡ ಜೋರಾಗಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್‌ನಿಲ್ಕ್‌ನ ವರದಿಗಳ ಪ್ರಕಾರ, ಮೊದಲ ದಿನ ಡಂಕಿ ಸುಮಾರು 25 ರಿಂದ 30 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಹೆಚ್ಚಿದೆ.

ಭಾರತದಲ್ಲಿ ಡಂಕಿ ಸರಿಸುಮಾರು 4,000 ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನವೇ 15,000 ಪ್ರದರ್ಶನಗಳು ಕಾಣಲಿವೆ. ಆರಂಭದ ದಿನವೇ ಡಂಕಿ ನಿರೀಕ್ಷೆಗೂ ಮೀರಿ ಭರ್ಜರಿ ಕಲೆಕ್ಷನ್​ ಮಾಡುವ ಸಾಧ್ಯತೆಯಿದೆ. PK ಸಿನಿಮಾ ಆರಂಭಿಕ ದಿನದಲ್ಲಿ 26 ಕೋಟಿ ರೂ. ಗಳಿಸಿತ್ತು. ಡಂಕಿ ಚಿತ್ರದ ಕಲೆಕ್ಷನ್​ ದಾಖಲೆಯನ್ನು ಮುರಿಯಲಿದ್ದು, ಮೊದಲ ದಿನವೇ 34.25 ಕೋಟಿ ರೂ. ಹೆಚ್ಚು ಗಳಿಕೆ ಮಾಡಲಿದೆ ಎಂದು ಅಂದಾಜು ಮಾಡಲಾಗಿದೆ.

ಡಂಕಿ ಚಿತ್ರಕ್ಕಾಗಿ ಮುಂಗಡ ಟಿಕೆಟ್​ ಬುಕ್ಕಿಂಗ್​ ಪ್ರಾರಂಭವಾಗಿದ್ದು, ಮೊದಲ ದಿನವೇ 5,58,766 ಟಿಕೆಟ್‌ಗಳು ಬುಕ್​ ಆಗಿವೆ. PVR, ಐನಾಕ್ಸ್ ಮತ್ತು ಸಿನೆಪೊಲಿಸ್‌ನಿಂದ ಟಿಕೆಟ್​ಗಳು ಮಾರಾಟವಾಗಿವೆ. ಮುಂಗಡ ಬುಕ್ಕಿಂಗ್‌ಗಳ ವಿಷಯದಲ್ಲಿ ಶಾರುಖ್​ ಖಾನ್​ ಚಲನಚಿತ್ರವು ಹವಾ ಸೃಷ್ಟಿ ಮಾಡಿದೆ. ಡಂಕಿ ಚಿತ್ರವು ಮುಂಗಡ ಬುಕಿಂಗ್​ನಿಂದ ಒಟ್ಟು 15.41 ಕೋಟಿ ರೂ. ಗಳಿಕೆ ಮಾಡಿದೆ.

ರಾಜ್‌ಕುಮಾರ್ ಹಿರಾನಿ ಮತ್ತು ಶಾರುಖ್ ಖಾನ್ ಜೋಡಿಯ ಡಂಕಿ ಚಿತ್ರ ಬಿಡಗಡೆಗೂ ಮುನ್ನವೇ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. 2023ರಲ್ಲಿ ಪಠಾನ್ ಮತ್ತು ಜವಾನ್‌ ಚಿತ್ರದ ಯಶಸ್ಸಿನ ನಂತರ ಶಾರುಖ್ ಖಾನ್, ಮೂರನೇ ದೊಡ್ಡ ಚಿತ್ರ ಡಂಕಿ ಮೂಲಕ ತೆರೆ ಮೇಲೆ ಅಪ್ಪಳಿಸಿದ್ದಾರೆ. ಈ ಚಿತ್ರವು ತಮ್ಮ ತಾಯ್ನಾಡಾದ ಭಾರತಕ್ಕೆ ಮರಳಲು ಬಯಸುವ ಜನರ ಗುಂಪಿನ ಕುರಿತಾಗಿದೆ. ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಿಂದ ಡಂಕಿ ಸಿನಿಮಾ ನಿರ್ಮಾಣಗೊಂಡಿದೆ.​

ತಾಪ್ಸೀ ಪನ್ನು, ವಿಕ್ಕಿ ಕೌಶಲ್ ಮತ್ತು ಬೊಮನ್ ಇರಾನಿ ತಾರೆಗಳು ಅಭಿನಯಿಸಿದ ಡಂಕಿ ಚಿತ್ರ ಕ್ರಿಸ್ಮಸ್ 2023ರ ರಜಾದಿನಗಳಲ್ಲಿ (ಡಿಸೆಂಬರ್ 21) ಥಿಯೇಟರ್‌ಗಳಿಗೆ ಎಂಟ್ರಿಕೊಟ್ಟಿದೆ. ಡಂಕಿ ಸಿನಿಮಾವು ಎರಡು ಗಂಟೆ ನಲವತ್ತೊಂದು ನಿಮಿಷಗಳ ಅಧಿಕೃತ ರನ್​ಟೈಮ್ ಅನ್ನು ಹೊಂದಿದೆ. ಆದರೆ, ಈ ಸಿನಿಮಾಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC)ನಿಂದ U/A ಪ್ರಮಾಣೀಕರಣವನ್ನು ಪಡೆದುಕೊಂಡಿದೆ.

ಇದನ್ನೂ ಓದಿ:Salaar Vs Dunki: ಅಡ್ವಾನ್ಸ್ ಟಿಕೆಟ್ ವ್ಯವಹಾರದಲ್ಲಿ ಭರ್ಜರಿ ಪೈಪೋಟಿ; ಯಾವ ಸಿನಿಮಾ ಮುಂದಿದೆ?

Last Updated : Dec 21, 2023, 11:37 AM IST

ABOUT THE AUTHOR

...view details