ಕರ್ನಾಟಕ

karnataka

ETV Bharat / entertainment

ಯುವರಾಜ ನಿಖಿಲ್ ಕುಮಾರಸ್ವಾಮಿ ಹೆಸರಿಡದ ಚಿತ್ರದ ಮೇಕಿಂಗ್ ವಿಡಿಯೋ ಮೆಚ್ಚಿದ 'ಸಲಗ' - ದುನಿಯಾ ವಿಜಯ್

ನಿಖಿಲ್​ ಕುಮಾರಸ್ವಾಮಿ ಅಭಿನಯದ ಚಿತ್ರದ ಶೂಟಿಂಗ್​ ಸ್ಪಾಟ್​ಗೆ ದುನಿಯಾ ವಿಜಯ್ ಸಡನ್​ ಎಂಟ್ರಿ ಕೊಟ್ಟು ಸರ್ಪೈಸ್​ ನೀಡಿದ್ದಾರೆ.

ನಿಖಿಲ್ ಹೆಸರಿಡದ ಚಿತ್ರದ ಮೇಕಿಂಗ್ ವಿಡಿಯೋ ಮೆಚ್ಚಿದ ಸಲಗ
ನಿಖಿಲ್ ಹೆಸರಿಡದ ಚಿತ್ರದ ಮೇಕಿಂಗ್ ವಿಡಿಯೋ ಮೆಚ್ಚಿದ ಸಲಗ

By ETV Bharat Karnataka Team

Published : Nov 23, 2023, 11:00 PM IST

ಜಾಗ್ವರ್ ಹಾಗು ರೈಡರ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ತನ್ನದೇ ಬೇಡಿಕೆ ಹೊಂದಿರುವ ನಟ ನಿಖಿಲ್‌ ಕುಮಾರಸ್ವಾಮಿ. ರಾಜಕೀಯ ಜೊತೆಗೆ ಸಿನಿಮಾಗಳನ್ನು ಮಾಡ್ತಾ ಇರೋ ನಿಖಿಲ್ ಕುಮಾರಸ್ವಾಮಿ ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ ಜೊತೆ ಸಿನಿಮಾ ಮಾಡ್ತಾ ಇರೋದು ಗೊತ್ತಿರುವ ವಿಚಾರ.

ಲವ್ ಸ್ಟೋರಿ ಜೊತೆಗೆ ಆ್ಯಕ್ಷನ್ ಕಥೆ ಆಧರಿಸಿರೋ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್​ಅನ್ನು ಬೆಂಗಳೂರಿನಲ್ಲಿ ಭರದಿಂದ ಮಾಡಲಾಗುತ್ತಿದೆ. ಇತ್ತೀಚೆಗೆ ಈ ಸಿನಿಮಾ ಶೂಟಿಂಗ್ ಸ್ಪಾಟ್​ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಧ್ರುವ ಸರ್ಜಾ ಹಾಗು ಯುವ ರಾಜ್​ಕು​ಮಾರ್ ಭೇಟಿ ನೀಡಿ ಈ ಚಿತ್ರದ ಚಿತ್ರೀಕರಣದ ಬಗ್ಗೆ ಮಾತುಕತೆ ಮಾಡಿದ್ದರು. ಅಲ್ಲದೇ ನಿಖಿಲ್ ಕುಮಾರಸ್ವಾಮಿ ಸಿನಿಮಾದಲ್ಲಿ ಸಲಗ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಅಂತಾ ಈ ಹಿಂದೆ ಹೇಳಲಾಗಿತ್ತು. ಈಗ ವಿಜಯ್, ನಿಖಿಲ್ ಶೂಟಿಂಗ್ ನಡೆಯುವ ಲೊಕೇಶನ್​ಗೆ ಭೇಟಿ ಕೊಟ್ಟಿದ್ದಾರೆ. ಬೆಂಗಳೂರಿನ ಹೊರ ವಲಯದ ದಾಸನಪುರ ಎಪಿಎಂಸಿ ಜಾಗದಲ್ಲಿ ನಿಖಿಲ್ ಹೊಸ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಅಲ್ಲಿಗೆ ವಿಜಯ್ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ನಿಖಿಲ್ ಕೂಡ ವಿಜಯ್ ಆಗಮನಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಒಂದು ಗಂಟೆ ಕಾಲ ವಿಜಯ್ ನಿಖಿಲ್ ಕುಮಾರಸ್ವಾಮಿ ಶೂಟಿಂಗ್ ಸ್ಪಾಟ್​ನಲ್ಲಿ ಇದ್ದು, ಆ ಚಿತ್ರದ ಮೇಕಿಂಗ್ ಸ್ಟೈಲ್ ನೋಡಿ ಮೆಚ್ಚಿಕೊಂಡಿದ್ದಾರೆ.

ಇನ್ನು ನಿಖಿಲ್ ಜೊತೆ ದುನಿಯಾ ವಿಜಯ್ ತೆರೆ ಹಂಚಿಕೊಳ್ಳುವುದಕ್ಕೆ ಸಖತ್​ ಥ್ರಿಲ್ ಆಗಿದ್ದಾರೆ. ಆದರೆ ಈ ಚಿತ್ರದಲ್ಲಿ ದುನಿಯಾ ವಿಜಯ್ ಪಾತ್ರ ಪಾಸಿಟಿವ್ ಅಥವಾ ನೆಗೆಟಿವ್ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ ಅನ್ನೋದನ್ನ ಮಾತ್ರ ನಿಖಿಲ್ ರಿವೀಲ್ ಮಾಡಿಲ್ಲ. ಇನ್ನು ನಟ ಕೋಮಲ್ ಕೂಡ ಈ ಹೆಸರಡಿದ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಪಾತ್ರದ ಬಗ್ಗೆ ಕೋಮಲ್ ಕೂಡ ಸುಳಿವು ಬಿಟ್ಟು ಕೊಟ್ಟಿಲ್ಲ. ಈಗಾಗ್ಲೇ ಕೋಮಲ್ ಈ ಚಿತ್ರದ ಶೂಟಿಂಗ್​ನಲ್ಲಿ ಭಾಗವಹಿಸಿದ್ದು, ನಿಖಿಲ್ ಮತ್ತು ಕೋಮಲ್ ನಡುವಿನ ಸನ್ನಿವೇಶಗಳನ್ನ ಚಿತ್ರೀಕರಣ ಮಾಡಲಾಗಿದೆ. ಈಗ ದುನಿಯಾ ವಿಜಯ್ ನಿಖಿಲ್ ನಟನೆಯ ಹೆಸರಿಡದ ಚಿತ್ರದ ಭಾಗವಾಗುತ್ತಿದ್ದಾರೆ.

ಬೋಗನ್, ಭೂಮಿ, ಮತ್ತು ರೋಮಿಯೋ ಅಂಡ್ ಜೂಲಿಯೆಟ್‌ನಂತಹ ತಮಿಳು ಸಿನಿಮಾಗಳನ್ನು ನಿರ್ದೇಶಿಸಿದ್ದ ಲಕ್ಷ್ಮಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಕನ್ನಡ ಚಿತ್ರವಿದು. ಬಹುಭಾಷಾ ಚಿತ್ರವೆಂದು ಬಿಂಬಿಸಲಾದ ಈ ಸಿನಿಮಾಗೆ ತೆಲುಗು ಸಿನಿಮಾದಲ್ಲಿ ನಟಿಸಿದ್ದ ಯುಕ್ತಿ ಥರೇಜಾ ನಿಖಿಲ್​ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಂತಾರ ಮತ್ತು ವಿಕ್ರಾಂತ್ ರೋಣ ಸಿನಿಮಾಗಳ ಸಂಗೀತಕ್ಕಾಗಿ ಮೆಚ್ಚುಗೆ ಪಡೆದ ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿದ್ದು, ವಂಶಿ ಪಚ್ಚಿಪುಲುಸು ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದ ಸಂಭಾಷಣೆಯನ್ನು ರಘು ನಿಡುವಳ್ಳಿ ಬರೆಯುತ್ತಿದ್ದಾರೆ. ಒಟ್ಟಾರೆ ನಿಖಿಲ್ ಕುಮಾರಸ್ವಾಮಿ ಹೆಸರಿಡದ ಚಿತ್ರ ಒಂದಲ್ಲ ಒಂದು ವಿಚಾರಕ್ಕೆ ಸಖತ್ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ಅಂಬಿ ಅಪ್ಪಾಜಿ ಸಹಾಯದ ಮುಂದೆ ನಾವೇನು ಮಾಡಿಲ್ಲ : ನಟ ದರ್ಶನ್

ABOUT THE AUTHOR

...view details