ಕರ್ನಾಟಕ

karnataka

ETV Bharat / entertainment

ಚಿತ್ರೀಕರಣಕ್ಕೂ‌ ಮುನ್ನವೇ ದುನಿಯಾ ವಿಜಯ್ 'ಭೀಮ'ನ ಭರ್ಜರಿ ಬ್ಯುಸಿನೆಸ್! - Duniya vijay next movie Bhima

ವಿಜಯ್​ ನಟನೆಯ 28ನೇ ಸಿನಿಮಾ 'ಭೀಮ' ಚಿತ್ರೀಕರಣಕ್ಕೂ‌ ಮುನ್ನವೇ ಭರ್ಜರಿ ಬ್ಯುಸಿನೆಸ್ ಮಾಡಿದೆ. ಸಲಗ ಚಿತ್ರದ ಆಡಿಯೋ ಸಕ್ಸಸ್ ಹಾಗೂ ವಿಜಯ್ ಮತ್ತು ಸಂಗೀತ ನಿರ್ದೇಶಕ ಚರಣ್ ರಾಜ್ ಕಾಂಬಿನೇಷನ್​ಗೆ ಭಾರಿ ಬೇಡಿಕೆ ಬಂದಿದೆ.

duniya-vijay-bhima-movie-audio-sold-out
ಚಿತ್ರೀಕರಣಕ್ಕೂ‌ ಮುನ್ನವೇ ದುನಿಯಾ ವಿಜಯ್ 'ಭೀಮ'ನ ಭರ್ಜರಿ ಬ್ಯುಸಿನೆಸ್!

By

Published : Apr 7, 2022, 8:34 PM IST

ದುನಿಯಾ ವಿಜಯ್​ಗೆ ಸ್ಯಾಂಡಲ್​ವುಡ್​ನಲ್ಲಷ್ಟೇ ಅಲ್ಲದೆ ಪರಭಾಷೆಗಳಲ್ಲೂ ಬೇಡಿಕೆ ತಂದುಕೊಟ್ಟ ಸಿನಿಮಾ 'ಸಲಗ'. ವಿಜಯ್ ಚೊಚ್ಚಲ ನಿರ್ದೇಶನದ ಜೊತೆಗೆ ನಟಿಸಿ ಸೈ ಎನಿಸಿಕೊಂಡ ಸಿನಿಮಾ ಇದು. ಇದರ ಬೆನ್ನಲ್ಲೇ ದುನಿಯಾ ವಿಜಯ್ ಟಾಲಿವುಡ್​​ ನಟ ಬಾಲಯ್ಯರ ಸಿನಿಮಾವೊಂದರಲ್ಲಿ ವಿಲನ್ ಆಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಈ ಮಧ್ಯೆ ಸಲಗ ಬಳಿಕ ಮತ್ತೆ ನಿರ್ದೇಶನ ಮಾಡಲು ಸಜ್ಜಾಗಿರುವುದು ಗೊತ್ತಿರುವ ವಿಚಾರ.

ಕಳೆದ ತಿಂಗಳು ಶಿವರಾತ್ರಿ ಪ್ರಯುಕ್ತ 'ಭೀಮ' ಎಂಬ ಶೀರ್ಷಿಕೆ ಹೊಂದಿರುವ ಸಿನಿಮಾ ಘೋಷಿಸಿದ್ದರು. ಇದೀಗ ಏಪ್ರಿಲ್ 18ಕ್ಕೆ ಈ ಚಿತ್ರದ ಅದ್ಧೂರಿ ಮುಹೂರ್ತ ನಡೆಸಲು ವಿಜಯ್ ರೆಡಿಯಾಗಿದ್ದಾರೆ. ಅವರ ಇಷ್ಟದೇವತೆ, ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತಕ್ಕೆ ವೇದಿಕೆ ರೆಡಿಯಾಗಿದೆ. ಆದರೆ ಭೀಮ ಸಿನಿಮಾ ಚಿತ್ರೀಕರಣಕ್ಕೂ‌ ಮುನ್ನವೇ ಭರ್ಜರಿ ಬ್ಯುಸಿನೆಸ್ ಮಾಡಿದೆ. ಸಲಗ ಚಿತ್ರದ ಆಡಿಯೋ ಸಕ್ಸಸ್ ಹಾಗೂ ವಿಜಯ್ ಮತ್ತು ಸಂಗೀತ ನಿರ್ದೇಶಕ ಚರಣ್ ರಾಜ್ ಕಾಂಬಿನೇಷನ್​ಗೆ ಭಾರಿ ಬೇಡಿಕೆ ಬಂದಿದೆ.

ಆನಂದ್ ಆಡಿಯೋದಿಂದ ಅಡ್ವಾನ್ಸ್ ಚೆಕ್ ಹಾಗೂ ಅಗ್ರಿಮೆಂಟ್​ನ್ನು ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್

1.50 ಕೋಟಿ ರೂಪಾಯಿಯ ದಾಖಲೆಯ ಮೊತ್ತಕ್ಕೆ ಭೀಮ ಚಿತ್ರದ ಆಡಿಯೋ ಮಾರಾಟವಾಗಿದೆ. ಚಿತ್ರದ ಆಡಿಯೋ ಹಕ್ಕು ಆನಂದ್ ಆಡಿಯೋ ಸಂಸ್ಥೆ ಪಾಲಾಗಿದೆ. ಆನಂದ್ ಆಡಿಯೋದಿಂದ ಅಡ್ವಾನ್ಸ್ ಚೆಕ್ ಹಾಗೂ ಅಗ್ರಿಮೆಂಟ್​ನ್ನು ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಸ್ವೀಕರಿಸಿದ್ದಾರೆ.

ಈ ಸಿನಿಮಾ‌ ಕೂಡ ಒಂದು ನೈಜ ಘಟನೆ ಆಧಾರಿತವಾಗಿದ್ದು, ದುನಿಯಾ ವಿಜಯ್ ಅವರೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್​ ನಟನೆಯ 28ನೇ ಸಿನಿಮಾ ಇದಾಗಿದ್ದು, ಕೃಷ್ಣ ಸಾರ್ಥಕ್​ ಹಾಗೂ ಜಗದೀಶ್​ ಗೌಡ ನಿರ್ಮಾಣವಿದೆ. ಸಿನಿಮಾ ಚಿತ್ರೀಕರಣಕ್ಕೂ ಮುನ್ನವೇ ದೊಡ್ಡ ಮೊತ್ತಕ್ಕೆ ಆಡಿಯೋ ರೈಟ್ಸ್ ಮಾರಾಟ ಆಗಿದ್ದು, ಚಿತ್ರತಂಡಕ್ಕೆ ಮೊದಲ ಮೆಟ್ಟಿಲಿನಲ್ಲೇ ಯಶಸ್ಸು ಸಿಕ್ಕಂತಾಗಿದೆ. ಚಿತ್ರದ ತಾರ ಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.

ಇದನ್ನೂ ಓದಿ:'ಆರಗ ಜ್ಞಾನೇಂದ್ರ ಚಿಕ್ಕ ಮಗುವಲ್ಲ': ಪೊಲೀಸರಿಗೆ ನಲಪಾಡ್ ದೂರು

ABOUT THE AUTHOR

...view details