ಸಲಗ ದುನಿಯಾ ವಿಜಯ್ಗೆ ಸ್ಯಾಂಡಲ್‌ವುಡ್ ಅಲ್ಲದೇ ಪರಿಭಾಷೆಯಲ್ಲಿ ಬೇಡಿಕೆ ತಂದುಕೊಟ್ಟ ಸಿನಿಮಾ. ವಿಜಯ್ ಫಸ್ಟ್ ಟೈಮ್ ನಿರ್ದೇಶನದ ಜೊತೆಗೆ ನಟಿಸಿ ಸೈ ಎನ್ನಿಸಿಕೊಂಡ ಸಿನಿಮಾ. ಈ ಸಿನಿಮಾ ಸಕ್ಸಸ್ ಬೆನ್ನಲ್ಲೇ ದುನಿಯಾ ವಿಜಯ್ ಟಾಲಿವುಡ್ನ ಬಾಲಯ್ಯ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಅಭಿನಯಿಸಿರೋದು ಗೊತ್ತಿರುವ ವಿಚಾರ.
ಈ ಚಿತ್ರದ ಬಳಿಕ ದುನಿಯಾ ವಿಜಯ್ ಭೀಮ ಸಿನಿಮಾವನ್ನ ಕೈಗೆತ್ತಿಕೊಂಡು ಸೈಲೆಂಟ್ ಆಗಿ ಚಿತ್ರೀಕರಣ ಮಾಡ್ತಿದ್ದಾರೆ. ಚಿತ್ರೀಕರಣಕ್ಕೂ ಮುಂಚೆ ₹1.50 ಕೋಟಿ ದಾಖಲೆಯ ಮೊತ್ತಕ್ಕೆ ಭೀಮ ಚಿತ್ರದ ಆಡಿಯೋ ಸೋಲ್ಡೌಟ್ ಆಗಿದೆ. ಆನಂದ್ ಆಡಿಯೋ ಸಂಸ್ಥೆ ಭೀಮ ಚಿತ್ರದ ಆಡಿಯೋವನ್ನ ಖರೀದಿಸಿದೆ. ಇದೀಗ ದುನಿಯಾ ವಿಜಯ್ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಭೀಮ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.
ಸಿಲಿಕಾನ್ ಸಿಟಿಯ ಬ್ಯಾಂಕ್, ಮಸೀದಿ, ಏರಿಯಾವೊಂದರಲ್ಲಿ ಫೈಟ್ ಸನ್ನಿವೇಶ, ನಿರ್ದೇಶಕ ದುನಿಯಾ ವಿಜಯ್ ಚಿತ್ರೀಕರಣ ಮಾಡಿದ್ದಾರೆ. ಈ ಚಿತ್ರದ ಕಲರ್ಫುಲ್ ಮೇಕಿಂಗ್ ಅನ್ನು ಚಿತ್ರತಂಡ ಅನಾವರಣ ಮಾಡಲಾಗಿದೆ. ಈ ಮೇಕಿಂಗ್ನಲ್ಲಿ ಜಯಮ್ಮನಮಗ ಸಿನಿಮಾ ಬಳಿಕ ಕಲ್ಯಾಣಿ ಈ ಸಿನಿಮಾದಲ್ಲಿ ಅಭಿನಯಿಸುವ ದೃಶ್ಯ ಹಾಗೂ ಅಚ್ಯುತ್‌ಕುಮಾರ್, ಬ್ಲ್ಯಾಕ್ ಡ್ರಾಗನ್ ಮಂಜು ಸೇರಿದಂತೆ ಹಲವು ಕಲಾವಿದರು ಭೀಮ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.