ಬೆಂಗಳೂರು: ಮಲೆಯಾಳಂ ನಟ ದುಲ್ಕರ್ ಸಲ್ಮಾನ್ ತಮ್ಮ ಮಡದಿ ಅಮಲ್ ಸಲ್ಮಾನ್ ಹುಟ್ಟು ಹಬ್ಬದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಪೂರ್ವಕ ಶುಭಾಶಯ ಕೋರಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಫೋಟೋ ಹಂಚಿಕೊಂಡು ಸುದೀರ್ಘ ಅಡಿಬರಹವನ್ನು ಬರೆದಿದ್ದಾರೆ. 'ಮನೆಯಲ್ಲಿ ಕೇಳಿಬರುವ ಸಾಮಾನ್ಯ ಪದ ಎಂದರೆ ಅಮ್ಮ್...!! ಮಮ್ಮ್ ಆಗಿದೆ. ನೀನು ಎಷ್ಟೇ ಬಳಲಿದರು. ನಿನ್ನ ದಿನ ಎಷ್ಟೇ ದೀರ್ಘವಾಗಿದ್ದರೂ, ನಮಗಾಗಿ ಸದಾ ನೀನು ಶಕ್ತಿಯನ್ನು ಹುಡುಕುತ್ತಿಯಾ. ಇದಕ್ಕಾಗಿ ಈಗಾಗಲೇ ಹಲವು ಬಾರಿ ನಿನಗೆ ಪ್ರಶಂಸೆ ನೀಡಿದ್ದೇವೆ. ನೀವು ಬದಲಾಗುವುದನ್ನು ನೋಡಿದ್ದೇನೆ. ಆದರೆ. ಪರಿವರ್ತನೆ ಆಗಿಲ್ಲ ನೀನು ನೀನಾಗಿಯೇ ಇದ್ದಿಯಾ. ಸರಾಗವಾಗಿ ನೀನು ಹಲವು ಪಾತ್ರವನ್ನು ನಿರ್ವಹಿಸುತ್ತೀಯ. ನಿನ್ನ ಶಾಂತಿಯ ಬಲ ಮತ್ತು ಸಾಮರ್ಥ್ಯದಿಂದ ನಮ್ಮ ಜೀವನದಲ್ಲಿ ಅನೇಕ ಜನರನ್ನು ಹಾಗೇ ಸೆಳೆಯುವಂತೆ ಮಾಡಿದೆ. ಸದಾ ನೀನು ನೀನಾಗಿಯೇ ಇರುವುದಕ್ಕೆ ಧನ್ಯವಾದಗಳು . ಹುಟ್ಟು ಹಬ್ಬದ ಶುಭಾಶಯಗಳು. ನಾನು ನಿನ್ನನ್ನು ಬಹಳ ಸಮಯದಿಂದ ಪ್ರೀತಿಸುತ್ತಿದ್ದೇನೆ' ಎಂದು ಪ್ರೀತಿಯ ಅಭಿಮಾನಪೂರ್ವಕ ಸಂದೇಶ ಬರೆದಿದ್ದಾರೆ.
ಇದರ ಜೊತೆಗೆ ಇಬ್ಬರ ಫೋಟೋವನ್ನು ನಟ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ದುಲ್ಕರ್ ಮತ್ತು ಅಮಲ ಬಿಳಿ ಧರಿಸಿನಲ್ಲಿ ಕಂಡು ಬಂದಿದ್ದಾರೆ. ಎರಡನೇ ಫೋಟೋದಲ್ಲಿ ನಟ ಹೆಂಡತಿಯತ್ತ ಚಿತ್ತ ನೆಟ್ಟಿರುವುದು ಕಾಣಬಹುದಾಗಿದೆ.
ನಟ ಈ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಕೆಂಪು ಹೃದಯ ಎಮೋಜಿಗಳನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಮಾಳವಿಕ ಮೆನನ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಶುಭಾಶಯ ಕೋರಿದ್ದಾರೆ. ಮತ್ತೊಬ್ಬ ಅಭಿಮಾನಿ, ನೀವು ಮೇಡ್ ಫಾರ್ ಈಚ್ ಅದರ್, ನಿಮ್ಮ ಪ್ರೀತಿ ಇತರರಿಗೆ ಪ್ರೇರಣೆ ನೀಡುತ್ತದೆ ಎಂದಿದ್ದಾರೆ.